ಬೀದರ್​​-ಯಶವಂತಪುರ ಹೊಸ ರೈಲು ಸಂಚಾರ ಆರಂಭ: ಇಲ್ಲಿದೆ ವೇಳಾಪಟ್ಟಿ

|

Updated on: Oct 30, 2023 | 10:23 AM

ನೈಋತ್ಯ ರೈಲ್ವೆ ಕಲಬುರಗಿ ಮಾರ್ಗವಾಗಿ ಬೀದರ್ ಮತ್ತು ಯಶವಂತಪುರ ನಡುವೆ ಹೊಸ ರೈಲು ಸಂಚಾರ ಆರಂಭಿಸಿದೆ. ವಾರಕ್ಕೆ ಒಂದು ಸಲ ಬೀದರ್​ನಿಂದ ಬೆಂಗಳೂರಿಗೆ ರೈಲು ಓಡಾಡಲಿದ್ದು, ಬೀದರ್ ಸಂಸದ, ಕೇಂದ್ರ ಸಚಿವ ಭಗವಂತ್ ಖೂಬಾ ಹೊಸ ರೈಲು ಸಂಚಾರಕ್ಕೆ ನಿನ್ನೆ ಚಾಲನೆ ನೀಡಿದ್ದಾರೆ.

ಬೀದರ್​​-ಯಶವಂತಪುರ ಹೊಸ ರೈಲು ಸಂಚಾರ ಆರಂಭ: ಇಲ್ಲಿದೆ ವೇಳಾಪಟ್ಟಿ
ಬೀದರ್ ಟು ಯಶವಂತಪುರ ಹೊಸ ರೈಲು ಸಂಚಾರಕ್ಕೆ ಚಾಲನೆ ನೀಡಿದ ಸಚಿವ ಭಗವಂತ್ ಖೂಬಾ
Follow us on

ಬೀದರ್​​​, ಅಕ್ಟೋಬರ್​​​ 30: ನೈಋತ್ಯ ರೈಲ್ವೆ ಇಲಾಖೆ ಕಲಬುರಗಿ ಮಾರ್ಗವಾಗಿ ಬೀದರ್ ಮತ್ತು ಯಶವಂತಪುರ (Bidar to Yesvantpur) ನಡುವೆ ಹೊಸ ರೈಲು ಸಂಚಾರ ಆರಂಭಿಸಿದೆ. ಬೀದರ್ ಕಲಬುರಗಿ ರೈಲ್ವೆ ಮಾರ್ಗ ನಿರ್ಮಾಣವಾದಾಗಿನಿಂದ ಬೆಂಗಳೂರಿಗೆ ರೈಲುಗಳು ಓಡಾಡುತ್ತಿರಲಿಲ್ಲ. ಆದರೆ ಇದೀಗ ವಾರಕ್ಕೆ ಒಂದು ಸಲ ಬೀದರ್​ನಿಂದ ಬೆಂಗಳೂರಿಗೆ ರೈಲು ಓಡಾಡಲಿದ್ದು, ಬೀದರ್ ಸಂಸದ, ಕೇಂದ್ರ ಸಚಿವ ಭಗವಂತ್ ಖೂಬಾ ಬೀದರ್ ರೈಲು ನಿಲ್ದಾಣದಲ್ಲಿ ಚಾಲನೆ ನೀಡಿದ್ದಾರೆ.

ಬೀದರ್​ನಿಂದ ಪ್ರತಿ ಭಾನುವಾರು ಮಧ್ಹಾಹ್ನ 2:40 ಹೊರಡಿರುವ ರೈಲು ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಅನಂತ್​ಪುರ ಗೌರಿಬಿದನೂರು ಮಾರ್ಗವಾಗಿ ಯಂಶವಂತಪುರ ತಲುಪಲಿದೆ. ಇನ್ನು ಪ್ರತಿ ಶನಿವಾರ ಯಶವಂತಪುರದಿಂದ ಮಧ್ಹಾಹ್ನ 1:30 ಹೊರಡಲಿದೆ.

ಇದನ್ನೂ ಓದಿ: ದಸರಾ ಪ್ರಯುಕ್ತ ಬೆಂಗಳೂರು, ಬೀದರ್ ಮಧ್ಯೆ 3 ವಿಶೇಷ ರೈಲು: ಇಲ್ಲಿದೆ ವಿವರ

ರೈಲು ಸಂಖ್ಯೆ 16577 ಯಶವಂತಪುರ-ಬೀದರ್ ಪ್ರತಿ ಶನಿವಾರ ಯಶವಂತಪುರದಿಂದ ರಾತ್ರಿ 11.15 ಕ್ಕೆ ಹೊರಟು ಮರುದಿನ ಮಧ್ಯಾಹ್ನ 1.30 ಕ್ಕೆ ಬೀದರ್ ತಲುಪುತ್ತದೆ. ಈ ರೈಲು ಯಲಹಂಕದಲ್ಲಿ ರಾತ್ರಿ 11.33ಕ್ಕೆ ತಲುಪಲ್ಲಿದ್ದು, ರಾತ್ರಿ 11.35ಕ್ಕೆ, ಗೌರಿಬಿದನೂರಿನಲ್ಲಿ 12.27ಕ್ಕೆ/12.28ಕ್ಕೆ, ಹಿಂದೂಪುರಕ್ಕೆ 12.47ಕ್ಕೆ/12.48ಕ್ಕೆ, ಧರ್ಮಾವರಂನಲ್ಲಿ 3.55ಕ್ಕೆ/4ಕ್ಕೆ, ಅನಂತಪುರಕ್ಕೆ 4.38ಕ್ಕೆ 4.38ಕ್ಕೆ ಜಿ. ಬೆಳಗ್ಗೆ 6.05/6.10, ಮಂತ್ರಾಲಯ ರಸ್ತೆ ಬೆಳಿಗ್ಗೆ 7.39/7.40, ರಾಯಚೂರು 8.03/8.05, ಯಾದಗಿರಿ 9.08/9.10, ವಾಡಿ 10.10/10.15, ಶಹಾಬಾದ ಬೆಳಿಗ್ಗೆ 10.43, ಕಲಬುರಗಿ 10.44/10.45/ ಬೆಳಿಗ್ಗೆ 11.10/11.15, ಕಮಲಾಪುರ ಮಧ್ಯಾಹ್ನ 12.04/12.05 ಕ್ಕೆ ಮತ್ತು 12.34 ಕ್ಕೆ ಹುಮನಾಬಾದ್ ತಲುಪಿ 12.35 ಕ್ಕೆ ಹೊರಡುತ್ತದೆ.

ಇದನ್ನೂ ಓದಿ: ಬೆಂಗಳೂರಿನ ಪ್ರತಿಷ್ಠಿತ ಮಾಲ್​ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ, ವಿಡಿಯೋ ವೈರಲ್

ರೈಲು ಸಂಖ್ಯೆ 16578 ಬೀದರ್‌- ಯಶವಂತಪುರ ನಡುವೆ ಪ್ರತಿ ಭಾನುವಾರ ಬೀದರ್‌ನಿಂದ ಮಧ್ಯಾಹ್ನ 2.40 ಕ್ಕೆ ಹೊರಟು ಮರುದಿನ ಮುಂಜಾನೆ 4 ಗಂಟೆಗೆ ಯಶವಂತಪುರ ತಲುಪುತ್ತದೆ. ಈ ರೈಲು ಹುಮನಾಬಾದ್‌ನಲ್ಲಿ ಮಧ್ಯಾಹ್ನ 3.01ಕ್ಕೆ ತಲುಪಲಿದ್ದು ಮತ್ತು ಮಧ್ಯಾಹ್ನ 3.02 ಕ್ಕೆ, ಕಮಲಾಪುರ 3.31 ಕ್ಕೆ / 3.32 ಕ್ಕೆ, ಕಲಬುರಗಿಯಲ್ಲಿ ಸಂಜೆ 5 / 5.05 ಕ್ಕೆ, ಶಹಾಬಾದ 5.30 ಕ್ಕೆ / 5.32 ಕ್ಕೆ, ವಾಡಿ 5.40 ಕ್ಕೆ / 5.45 ಕ್ಕೆ, ಯಾದಗಿರಿ ಸಂಜೆ 6.04/6.05, ರಾಯಚೂರು 7.13/7.15, ಮಂತ್ರಾಲಯ ರಸ್ತೆ ರಾತ್ರಿ 7.39/7.40, ಗುಂತಕಲ್ ರಾತ್ರಿ 9.40/9.45, ಅನಂತಪುರ ರಾತ್ರಿ 10.48/10.50, ಹಿಂದೂಪುರ ರಾತ್ರಿ 10.48/10.50, 1.40ಕ್ಕೆ ಧರ್ಮಾವರಂ. 12.54ಕ್ಕೆ/12.55ಕ್ಕೆ, ಗೌರಿಬಿದನೂರು 1.14ಕ್ಕೆ/1.15ಕ್ಕೆ ಮತ್ತು ಯಲಹಂಕಕ್ಕೆ 2.08ಕ್ಕೆ ತಲುಪಿ 2.10ಕ್ಕೆ ಹೊರಡಲಿದೆ.

ಬೀದರ್‌- ಯಶವಂತಪುರ ಹೊಸ ರೈಲು ಸಂಚಾರಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವ ಭಗವಂತ್ ಖೂಬಾ, ಸದ್ಯ ಈ ರೈಲು ವಾರಕ್ಕೊಮ್ಮೆ ಸಂಚರಿಸಲಿದ್ದು, ಮುಂದಿನ ದಿನಗಳಲ್ಲಿ ಪ್ರತಿನಿತ್ಯ ಸಂಚಾರಿಸಲಿವೆ ಎಂದು ಹೇಳಿದ್ದಾರೆ. ಬೀದರ್​-ಹುಬ್ಬಳ್ಳಿ, ಬೀದರ್​- ಬೆಳಗಾವಿ ನಡುವೆ ಹೊಸ ರೈಲು ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:22 am, Mon, 30 October 23