ಬೀದರ್: ಹಳ್ಳ ದಾಟುವಾಗ ಒಂದೇ ಕುಟುಂಬದ ಮೂವರು ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿ ಸುನಂದಾ(48), ಐಶ್ವರ್ಯ(16), ಸುಮೀತ್(10) ಶವಗಳು ಪತ್ತೆಯಾಗಿವೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಹೆಡಗಾಪುರ ಗ್ರಾಮದಲ್ಲಿ ಸಂಗಪ್ಪಾ ಲದ್ದೆ ಕುಟುಂಬದ ಮೂವರು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಸಂಗಪ್ಪ ಲದ್ದೆ ಅವರ ಹೆಂಡತಿ ಇಬ್ಬರು ಮಕ್ಕಳ ಶವ ಪತ್ತೆಯಾಗಿದೆ. ನಾಲ್ವರು ಒಟ್ಟಿಗೆ ಹೋಗುವಾಗ ಹಳ್ಳದ ನೀರು ಏಕಾಏಕಿ ಹೆಚ್ಚಾಗಿದೆ. ಈ ವೇಳೆ ಮೂವರು ಕೊಚ್ಚಿಕೊಂಡು ಹೋಗಿದ್ದು ಸಂಗಪ್ಪ ಲದ್ದೆ ಬಚಾವ್ ಆಗಿದ್ದರು.
ಬೆಂಗಳೂರು ಯಲಹಂಕ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾರಿಗೆ ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ ಸಂಭವಿಸಿದ ಘಟನೆ ನಡೆದಿದೆ. ಬ್ರೇಕ್ ಫೇಲ್ ಆದ ಕಾರಣ ಚಾಲಕ ಕೆಲವು ವಾಹನಗಳಿಗೆ ಗುದ್ದಿ ಬಳಿಕ ಮರಕ್ಕೆ ಡಿಕ್ಕಿ ಹೊಡೆದು ಲಾರಿ ನಿಲ್ಲಿಸಿದ್ದಾನೆ. ಇನ್ನು ಲಾರಿ ಗುದ್ದಿದ ರಭಸಕ್ಕೆ ಮರ ಧರೆಗುರುಳಿದೆ. ಕಳೆದ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ: ನಾಲ್ವರಿಗೆ ಗಾಯ
ಮರದ ದಿಮ್ಮಿಗಳನ್ನ ಸಾಗಾಟ ಮಾಡುತ್ತಿದ್ದ ಲಾರಿ ಬ್ರೇಕ್ ಫೇಲ್ ಆಗಿದ್ದು ಐದಾರು ಕಾರು ಹಾಗೂ ಬೈಕ್ಗಳಿಗೆ ಡಿಕ್ಕಿ ಹೊಡೆದಿದೆ. ನಂತರ ಯಲಹಂಕದ ಗ್ಯಾಲರಿಯಾ ಮಾಲ್ ಮುಂಭಾಗದ ಮರಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಿಂದಾಗಿ ಯಾವುದೇ ಪ್ರಾಣಹಾನಿಯಾಗಿಲ್ಲ. ಸಣ್ಣ ಪುಟ್ಟ ಗಾಯಗಳೊಂದಿಗೆ ಚಾಲಕರು ಪಾರಾಗಿದ್ದಾರೆ. ಘಟನೆಯಲ್ಲಿ ಸುಮಾರು ಐದು ಕಾರುಗಳು ಜಖಂ ಆಗಿವೆ. ಸದ್ಯ ಮರದ ದಿಮ್ಮಿಗಳನ್ನ ಬೇರೊಂದು ಲಾರಿಗೆ ಶಿಫ್ಟ್ ಮಾಡಲಾಗಿದೆ. ಸ್ಥಳಕ್ಕೆ ಯಲಹಂಕ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನ ಡಿ.ಜೆ.ಹಳ್ಳಿಯಲ್ಲಿ ಯುವಕರಿಗೆ ಗಾಂಜಾ ಮಾರುತ್ತಿದ್ದ ಡ್ರಗ್ ಪೆಡ್ಲರ್ ತನ್ವೀರ್ ಎಂಬಾತನನ್ನು ಡಿ.ಜೆ.ಹಳ್ಳಿ ಪೊಲೀಸರು ಬಂಧಿಸಿದ್ದು 1 ಕೋಟಿ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ. ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:49 am, Mon, 1 May 23