Earthquake In Bidar: ಬೀದರ್​ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಭೂಕಂಪ!

Earthquake In Bidar: ಬೀದರ್ ಜಿಲ್ಲೆಯಲ ಹಲವು ಗ್ರಾಮಗಳಲ್ಲಿ ಭೂಕಂಪ ಸಂಭವಿಸಿದೆ. ಬೇರೆ ಬೇರೆ ಗ್ರಾಮಗಳಲ್ಲಿ ತೀವ್ರತೆ ದಾಖಲಾಗಿದೆ.

Earthquake In Bidar: ಬೀದರ್​ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಭೂಕಂಪ!
ಭೂಕಂಪ
Image Credit source: iStock
Edited By:

Updated on: Mar 04, 2024 | 10:46 PM

ಬೀದರ್, (ಮಾರ್ಚ್ 04): ಬೀದರ್ ಜಿಲ್ಲೆಯ(Bidar District) ಹಲವು ಗ್ರಾಮಗಳಲ್ಲಿ ಭೂಕಂಪ(earthquake )ಸಂಭವಿಸಿದೆ. ಬೀದರ್ ತಾಲೂಕಿನ ಇಸ್ಲಾಂಪುರ ಯರನಳ್ಳಿಯಲ್ಲಿ ತೀವ್ರತೆ 1.85, ಬಸವಕಲ್ಯಾಣ ತಾಲೂಕಿನ ರಾಜೇಶ್ವರದಲ್ಲಿ 2.6ರಷ್ಟು, ಬಸವಕಲ್ಯಾಣ ತಾಲೂಕಿನ ಯರಬಾಗನಲ್ಲಿ 3.2ರಷ್ಟು ಭೂಕಂಪದ ತೀವ್ರತೆ ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ. ಇಂದು ಸಂಜೆ(ಮಾರ್ಚ್ 04)  7.40ರ ಸುಮಾರಿಗೆ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದ್ದು, ಜನ ಆತಂಕಗೊಂಡಿದ್ದಾರೆ.