5 ಸಾವಿರ ರೂ. ರೈತರ ಹಣ ಬಾಕಿ ಇರಿಸಿಕೊಂಡಿರುವ ಬಿಎಸ್ಎಸ್​ಕೆ; ಸಕ್ಕರೆ ಕಾರ್ಖಾನೆ ಎದುರು ರೈತರ ಪ್ರತಿಭಟನೆ

| Updated By: preethi shettigar

Updated on: Mar 21, 2022 | 6:05 PM

ಕಳೆದ ನಾಲ್ಕು ವರ್ಷದಿಂದ ಬಂದ್ ಆಗಿದ್ದ ಕಾರ್ಖಾನೆಯನ್ನ ಈ ಕಳೆದ ವರ್ಷದ ಹಂಗಾಮಿನಲ್ಲಿ ಕಬ್ಬು ನೂರಿಸಲಾರಂಭಿಸಿದೆ. ಇದು ಇಲ್ಲಿನ ರೈತರಿಗೂ ಕೂಡಾ ಖುಷಿಕೊಟ್ಟಿತ್ತು. ಆದರೆ ಈ ಕಾರ್ಖಾನೆಗೆ ಕಬ್ಬು ಹಾಕಿದ ರೈತರಿಗೆ ಮಾತ್ರ ಇನ್ನೂ ಹಣ ಕೊಟ್ಟಿಲ್ಲ. ಇದು ಸಹಜವಾಗಿಯೇ ರೈತರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ.

5 ಸಾವಿರ ರೂ. ರೈತರ ಹಣ ಬಾಕಿ ಇರಿಸಿಕೊಂಡಿರುವ ಬಿಎಸ್ಎಸ್​ಕೆ; ಸಕ್ಕರೆ ಕಾರ್ಖಾನೆ ಎದುರು ರೈತರ ಪ್ರತಿಭಟನೆ
ರೈತರ ಪ್ರತಿಭಟನೆ
Follow us on

ಬೀದರ್​: ಬಿಎಎಸ್​ಎಸ್​ಕೆ ಸಕ್ಕರೆ ಕಾರ್ಖಾನೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡು ನರಳುತ್ತಿದೆ. ಈ ಕಾರ್ಖಾನೆಯನ್ನ ನಂಬಿಕೊಂಡು ನೂರಾರು ಕಾರ್ಮಿಕರು, ಸಾವಿರಾರು ರೈತರಿದ್ದಾರೆ(Farmers). ನಾಲ್ಕು ವರ್ಷದಿಂದ ಬಂದ್ ಆಗಿದ್ದ ಸಕ್ಕರೆ ಕಾರ್ಖಾನೆ(sugar factory) ಈ ವರ್ಷದ ಹಂಗಾಮಿನಲ್ಲಿ ಕ್ರಷಿಂಗ್ ಆರಂಭಿಸಿದೆ. ಆದರೆ ಕಾರ್ಖಾನೆ ಕಬ್ಬು ಹಾಕಿದ ರೈತರಿಗೆ ಹಣ ಕೊಡದ್ದರಿಂದ ಆಡಳಿತ ಮಂಡಳಿಯ ವಿರುದ್ಧ ರೈತರು ಪ್ರತಿಭಟಸಿ(Protest) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಹಕಾರಿ ವಲಯದ ಅತ್ಯಂತ ಹಳೆಯ ಸಕ್ಕರೆ ಕಾರ್ಖಾನೆಯಗಳಲ್ಲಿ ಒಂದಾದ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯೂ ಕಳೆದ ನಾಲ್ಕು ವರ್ಷದಿಂದ ಬಂದ್ ಆಗಿತ್ತು. ಬಂದ್ ಆಗಿದ್ದ ಸಕ್ಕರೆ ಕಾರ್ಖಾನೆಯೂ ಕಳೆದ ವರ್ಷದ ಹಂಗಾಮಿನಲ್ಲಿ ಕ್ರಷಿಂಗ್ ಆರಂಭಿಸಿದೆ. ಸುಮಾರು 25 ಸಾವಿರಕ್ಕೂ ಹೆಚ್ಚು ಸದಸ್ಯರನ್ನ ಈ ಸಕ್ಕರೆ ಕಾರ್ಖಾನೆ ಹೊಂದಿದ್ದು, ಈ ಕಾರ್ಖಾನೆಗೆ ಕಬ್ಬು ಹಾಕಿದ ರೈತರಿಗೆ ಹಣ ಮಾತ್ರ ಕೊಟ್ಟಿಲ್ಲ. 5 ಸಾವಿರಕ್ಕೂ ಹೆಚ್ಚು ರೈತರು ಈ ಕಾರ್ಖಾನೆಗೆ ತಮ್ಮ ಕಬ್ಬನ್ನ ಹಾಕಿದ್ದಾರೆ. ಆದರೆ ಇದುವರೆಗೂ ಕೂಡಾ ಅವರಿಗೆ ಹಣ ಕೊಟ್ಟಿಲ್ಲ ಕೆವಲ ಒಬ್ಬೊಬ್ಬ ರೈತರಿಗೆ ಒಂದು ಸಾವಿರ ರೂಪಾಯಿಯಂತೆ ಒಂದು ಕೋಟಿ ರೂಪಾಯಿಯನ್ನ ಮಾತ್ರ ರೈತರ ಖಾತಗೆ ಹಾಕಿದ್ದಾರೆ. ಆದರೆ ಇನ್ನೂಳಿದ 11 ಕೋಟಿ ರೂಪಾಯಿ ರೈತರ ಖಾತೆಗೆ ಜಮೆ ಮಾಡಬೇಕಾದ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಇನ್ನೂ ರೈತರ ಖಾತೆಗೆ ಹಣ ಹಾಕಿಲ್ಲ. ಹೀಗಾಗಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರ ವಿರುದ್ಧ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಕಳೆದ ನಾಲ್ಕು ವರ್ಷದಿಂದ ಬಂದ್ ಆಗಿದ್ದ ಕಾರ್ಖಾನೆಯನ್ನ ಈ ಕಳೆದ ವರ್ಷದ ಹಂಗಾಮಿನಲ್ಲಿ ಕಬ್ಬು ನೂರಿಸಲಾರಂಭಿಸಿದೆ. ಇದು ಇಲ್ಲಿನ ರೈತರಿಗೂ ಕೂಡಾ ಖುಷಿಕೊಟ್ಟಿತ್ತು. ಆದರೆ ಈ ಕಾರ್ಖಾನೆಗೆ ಕಬ್ಬು ಹಾಕಿದ ರೈತರಿಗೆ ಮಾತ್ರ ಇನ್ನೂ ಹಣ ಕೊಟ್ಟಿಲ್ಲ. ಇದು ಸಹಜವಾಗಿಯೇ ರೈತರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ. ಈ ಕಾರ್ಖಾನೆಗೆ ರೈತರು ತಾವೆ ತಮ್ಮ ಗಾಡಿಗಳ ಮೂಲಕ ತಮ್ಮ ಕಬ್ಬನ್ನ ತಾವೆ ಕಟಾವು ಮಾಡಿ ತಂದು ಕಾರ್ಖಾನೆಗೆ ಹಾಕಿದ್ದಾರೆ. ಆದರೆ ರೈತರಿಗೆ ಹಣ ಕೊಡದಿದ್ದರೆ ಹೇಗೆ ಎಂದು ಪ್ರತಿಭಟನಾ ನಿರತ ರೈತರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಈ ಕಾರ್ಖಾನೆಯಲ್ಲಿಮ ಮೊಲಾಶಿಸ್ ಅನ್ನು ಟನ್​ಗೆ 4 ನಾಲ್ಕು ಸಾವಿರದಂತೆ ಮಾರಾಟ ಮಾಡಿದ್ದಾರೆ. ಆದರೆ ಇದೆ ಮೊಲಾಶಿಸ್ ಬೇರೆ ಸಕ್ಕರೆ ಕಾರ್ಖಾನೆಯವರು ಟನ್​ಗೆ 9 ಸಾವಿರದಂತೆ ಮಾರಾಟ ಮಾಡಿದ್ದಾರೆ. ಆದರೆ ಒಂದು ಟನ್ ಐದು ಸಾವಿರ ರೂಪಾಯಿ ನಷ್ಟ ಮಾಡಿಕೊಂಡು ಮೊಲಾಶಿಸ್ ಮಾರಾಟ ಮಾಡಿದ್ದು, ಯಾಕೆ ಅಂತಾ ಪ್ರತಿಭಟನೆಗೆ ಕುಳಿತ ರೈತ ಮುಖಂಡ ದಯಾನಂದ ಸ್ವಾಮಿ ಕೇಳುವ ಪ್ರಶ್ನೇಯಾಗಿದೆ.

ಕಾರ್ಖಾನೆ ಆಡಳಿತ ಮಂಡಳಿಯವರು ಮೊಲಾಶಿಸ್ ಮಾರಾಟದ ವಿಚಾರದಲ್ಲಿ ಸಾಕಷ್ಟು ಭ್ರಷ್ಟಾಚಾರ ಮಾಡಿದ್ದಾರೆಂದು ರೈತರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಈ ಸಕ್ಕರೆ ಕಾರ್ಖಾನೆಗೆ ನೂತನ ಆಡಳಿತದ ಮಂಡಳಿ ಅನುಷ್ಠಾನಕ್ಕೆ ಬಂದ ಕೂಡಲೇ ಬಂದ್ ಆಗಿದ್ದ ಸಕ್ಕರೆ ಕಾರ್ಖಾನೆಯನ್ನ ಸಾಲ ತಂದು ಪುನಃ ಆರಂಭಿಸಿದರು. ಆದರೆ ಇಲ್ಲಿಗೆ ಕಬ್ಬು ಹಾಕಿದ ರೈತರಿಗೆ ಮಾತ್ರ ಹಣ ಕೊಡುವಲ್ಲಿ ಆಡಳಿತ ಮಂಡಳಿಯವರು ವಿಫಲರಾಗಿದ್ದಾರೆ. ನಾವು ಕಬ್ಬು ಹಾಕಿದ್ದೇವೆ ನಮಗೆ ಹಣ ಕೊಡಿ ಇಲ್ಲದಿದ್ದರೆ, ಉಘ್ರವಾದ ಹೋರಾಟ ಮಾಡಲಾಗುದೆಂದು ಕಾರ್ಖಾನೆಗೆ ಕಬ್ಬು ಹಾಕಿದ ರೈತರು ಆಕ್ರೋಶಗೊಂಡಿದ್ದಾರೆ.

ರಾಜಕೀಯದ ಬಣ ಪ್ರತಿಷ್ಠೇಯಿಂದ ಹಾಗೂ ಸಾಲದ ಸುಳಿಗೆ ಸಿಲುಕಿ ಐದು ದಶಕದ ಇತಿಹಾಸ ಹೊಂದಿರುವ ಬೀದರ್ ಸಕ್ಕರೆ ಕಾರ್ಖಾನೆ ಬಂದ್ ಆಗಿತ್ತು. ಆದರೇ ಈಗ ನಾಲ್ಕು ವರ್ಷದ ಬಳಿಕ ಮತ್ತೆ ಕಾರ್ಖಾನೆ ಆರಂಭವಾಗಿದ್ದು, ರೈತರು ಹಾಗೂ ಕಾರ್ಮಿಕರ ಖುಷಿಗೆ ಕಾರಣವಾಗಿತ್ತು. ಆದರೆ ಈ ಕಾರ್ಖಾನೆಗೆ ಕಬ್ಬು ಯಾಕಾದರೂ ಹಾಕಿದೆವು ಅಂತಾ ರೈತರು ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯವರಿಗೆ ಹಿಡಿ ಶಾಪ ಹಾಕುವಂತಾಗಿದೆ. ಇನ್ನಾದರೂ ರೈತರ ಕಷ್ಟಕ್ಕೆ ಕಾರ್ಖಾನೆ ಆಡಳಿತ ಮಂಡಳಿ ಸಹಕರಿಸಲಿದೆಯಾ ಕಾದು ನೋಡಬೇಕಿದೆ.

ವರದಿ: ಸುರೇಶ್ ನಾಯಕ್

ಇದನ್ನೂ ಓದಿ:

ಬೀದರ್: ಸಕ್ಕರೆ ಕಾರ್ಖಾನೆ ತ್ಯಾಜ್ಯ ಹಳ್ಳದ ನೀರಿಗೆ; ನಾಲ್ಕೈದು ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆ

ಕಂಪ್ಲಿ ಸಕ್ಕರೆ ಕಾರ್ಖಾನೆ ಬಗ್ಗೆ ಶಾಸಕ ಗಣೇಶ್ ಪುನಃ ಪ್ರಸ್ತಾಪಿಸಿದಾಗ ಸಚಿವ ಮಾಧುಸ್ವಾಮಿ ವಸ್ತುಸ್ಥಿತಿಯನ್ನು ಸದನಕ್ಕೆ ವಿವರಿಸಿದರು

 

Published On - 5:59 pm, Mon, 21 March 22