ಕಾಫಿನಾಡಿನಲ್ಲಿ ಆನೆಗಳಿಂದ ಬೆಳೆಗಳನ್ನು ಉಳಿಸಲು ಗಿಡಗಳಿಗೆ ಮೈಕ್ ಸೆಟ್, ಡಿಜೆ ಸಿಸ್ಟಮ್ ಅಳವಡಿಸಿದ ರೈತರು!

ಆನೆಗಳ ದಾಳಿಯಿಂದ ತಮ್ಮ ಬೆಳೆಗಳನ್ನು ಕಾಪಾಡಿಕೊಳ್ಳಲು ರೈತರು ಗಿಡಗಳಿಗೆ ಮೈಕ್ ಸೆಟ್ಗಳನ್ನು ಅಳವಡಿಸಿದ್ದಾರೆ. ಹಾಗೂ ಅಲ್ಲೊಂದು ಇಲ್ಲೊಂದು ಡಿಜೆ ಸಿಸ್ಟಮ್ ಇಟ್ಟಿದ್ದಾರೆ. ಆನೆಗಳ ಗ್ಯಾಂಗ್ ಅಟ್ಯಾಕ್ಮಾಡೋದನ್ನ ತಪ್ಪಿಸೋಕೆ ರೈತರು ಇಂತಹದೊಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.

ಕಾಫಿನಾಡಿನಲ್ಲಿ ಆನೆಗಳಿಂದ ಬೆಳೆಗಳನ್ನು ಉಳಿಸಲು ಗಿಡಗಳಿಗೆ ಮೈಕ್ ಸೆಟ್, ಡಿಜೆ ಸಿಸ್ಟಮ್ ಅಳವಡಿಸಿದ ರೈತರು!
ಕಾಫಿನಾಡಿನಲ್ಲಿ ಆನೆಗಳಿಂದ ಬೆಳೆಗಳನ್ನು ಉಳಿಸಲು ಗಿಡಗಳಿಗೆ ಮೈಕ್ ಸೆಟ್, ಡಿಜೆ ಸಿಸ್ಟಮ್ ಅಳವಡಿಸಿದ ರೈತರು!
Follow us
TV9 Web
| Updated By: ಆಯೇಷಾ ಬಾನು

Updated on: Mar 03, 2022 | 3:38 PM

ಚಿಕ್ಕಮಗಳೂರು: ಜಿಲ್ಲೆಯ ಸುತ್ತಾಮುತ್ತ ಅನೇಕ ಕಡೆ ಆನೆ ದಾಳಿಯಿಂದ ರೈತರು(Farmers) ಕಂಗಾಲಾಗಿದ್ದಾರೆ. ಆನೆಗಳ ಹಾವಳಿಯಿಂದ ಕೈಗೆ ಬಂದಿದ್ದ ಬೆಳೆ ಮಣ್ಣುಪಾಲಾಗಿದೆ. ಇನ್ನುಳಿದಿದ್ದನ್ನು ಕಾಪಾಡೋದೆ ದೊಡ್ಡ ತಲೆನೋವಾಗಿದೆ. ಬೆಂಕಿ ಹಾಕಿದ್ರೂ ನೋ ಯೂಸ್.. ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ರು ಡೋಂಟ್ ಕೇರ್. ಹೀಗಾಗಿ ಆ ಗ್ಯಾಂಗ್ನ ಅಟ್ಯಾಕ್ ತಡೆಯಲು ರೈತರೇ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.

ಆನೆಗಳ ದಾಳಿಯಿಂದ ತಮ್ಮ ಬೆಳೆಗಳನ್ನು ಕಾಪಾಡಿಕೊಳ್ಳಲು ರೈತರು ಗಿಡಗಳಿಗೆ ಮೈಕ್ ಸೆಟ್ಗಳನ್ನು ಅಳವಡಿಸಿದ್ದಾರೆ. ಹಾಗೂ ಅಲ್ಲೊಂದು ಇಲ್ಲೊಂದು ಡಿಜೆ ಸಿಸ್ಟಮ್ ಇಟ್ಟಿದ್ದಾರೆ. ಆನೆಗಳ ಗ್ಯಾಂಗ್ ಅಟ್ಯಾಕ್ಮಾಡೋದನ್ನ ತಪ್ಪಿಸೋಕೆ ರೈತರು ಇಂತಹದೊಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಬೀಕನಹಳ್ಳಿ, ಹಂಪಾಪುರದಲ್ಲಿ ಅನ್ನದಾತರು ಆನೆ ಹಾವಳಿಯಿಂದ ಕಂಗೆಟ್ಟಿದ್ದಾರೆ. ಹೀಗಾಗಿ ಈಗ ಹೊಲ, ಗದ್ದೆ, ತೋಟಗಳಲ್ಲಿ ಮೈಕ್ ಸೆಟ್, ಡಿಜೆ, ಸಿಸ್ಟಮ್ ಇಟ್ಟು ಆನೆ ಓಡಿಸೋಕೆ ಮುಂದಾಗಿದ್ದಾರೆ. ಈ ಮೈಕ್ನಲ್ಲಿ ಪಟಾಕಿ ಸಿಡಿಯುವ ಸೌಂಡ್, ಹುಲಿ, ಸಿಂಹ ಗರ್ಜಿಸುವ ಧ್ವನಿ, ಮನುಷ್ಯ ಕೂಗುವ ಹಾಗೆ ನಿರಂತರ ಸೌಂಡ್ ಬರುತ್ತಿರುತ್ತೆ. ಈ ರೀತಿ ಮಾಡೋದ್ರಿಂದ ಕಾಡಾನೆಗಳ ಹಾವಳಿ ತಪ್ಪುತ್ತೆ ಅನ್ನೋದು ರೈತರ ನಂಬಿಕೆ. ಪ್ರಸ್ತುತ ಆನೆ ಹಾವಳಿ ತಕ್ಕ ಮಟ್ಟಿಗೆ ಸುಧಾರಿಸಿದೆ. ಆದ್ರೆ, ಮುಂದೇನೋ ಗೊತ್ತಿಲ್ಲ ಅಂತಾರೆ ಅನ್ನದಾತರು.

ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರ್ತಿದೆ. ವಾರಕ್ಕೆರಡು ಬಾರಿ ದಾಳಿ ಫಿಕ್ಸ್ ಆಗಿದೆ. ಹಾಗಾಗಿ, ಗುಡ್ಡಗಳ ಪಕ್ಕದಲ್ಲಿರೋ ಜಮೀನುಗಳಲ್ಲಿ ರೈತರು ಡಿಜೆ ಸೌಂಡ್ ಮೊರೆ ಹೋಗಿದ್ದಾರೆ. ಮೂವತ್ತಕ್ಕೂ ಹೆಚ್ಚು ಮೈಕ್‍ಗಳನ್ನ ಹಾಕಿದ್ದಾರೆ. ಸಂಜೆ 6 ಗಂಟೆಯಾಗುತ್ತಿದ್ದಂತೆ ಡಿಜೆ ಸೌಂಡ್ ಅನ್ ಆಗುತ್ತೆ. ಶಬ್ಧಕ್ಕೆ ಹೆದರುವ ಕಾಡಾನೆಗಳು ಜಮೀನಿನತ್ತ ಬರಲ್ಲ ಅನ್ನೋದು ರೈತರ ಅಭಿಪ್ರಾಯವಾಗಿದೆ.

ಒಟ್ಟಾರೆ, ಕಾಡಾನೆಗಳಿಂದ ಪೀಕಲಾಟಕ್ಕೆ ಸಿಲುಕಿರುವ ರೈತರು ಅರಣ್ಯ ಇಲಾಖೆಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಅಧಿಕಾರಿಗಳು ಆನೆ ದಾಳಿ ತಪ್ಪಿಸೋದು ಸುಲಭವಲ್ಲ ಅಂತ ಕೈಚೆಲ್ಲಿದ್ದಾರಂತೆ ಅದಕ್ಕಾಗಿ ಅನ್ನದಾತರು ಈ ಮಾರ್ಗ ಹುಡುಕಿಕೊಂಡಿದ್ದಾರೆ. ಆದ್ರೆ ಶಾಶ್ವತವಾಗಿ ಇದಕ್ಕೊಂದು ಪರಿಹಾರ ಕಲ್ಪಿಸಬೇಕು ಅನ್ನೋದು ಸ್ಥಳೀಯರ ಆಗ್ರಹ.

ವರದಿ: ಪ್ರಶಾಂತ್, ಟಿವಿ9 ಚಿಕ್ಕಮಗಳೂರು farmers Installed mike set and DJ System to save crops 1

farmers Installed mike set and DJ System to save crops 1

ಇದನ್ನೂ ಓದಿ: ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ದೂರವಾಣಿ ಮಾತುಕತೆ

ಗಬ್ಬರ್ ಜೇಬಿಗೆ 4 ಕೋಟಿ ರೂ. ಕತ್ತರಿ! ಐಪಿಎಲ್​ನಲ್ಲಿ 8.25 ಕೋಟಿ ಸಂಭಾವನೆ ಪಡೆದ ಧವನ್​ಗೆ ಶಾಕ್​ ಕೊಟ್ಟ ಬಿಸಿಸಿಐ!

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ