ಬೀದರ್, ಮಾ.17: ಈರುಳ್ಳಿ ಬೀಜ ಮಾರಾಟ ಮಾಡಿ ವರ್ಷಕ್ಕೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ. ಈ ಪ್ರಗತಿಪರ ರೈತನ ಕೃಷಿಯ ಚಾಣಾಕ್ಷತನಕ್ಕೆ ಅಧಿಕಾರಿಗಳು, ರೈತರು ಫಿದಾ ಆಗಿದ್ದಾರೆ. ಈರುಳ್ಳಿ ಬೆಳೆದರೆ ಸಿಗುವ ಲಾಭಕಿಂತ ಈರುಳ್ಳಿ ಬೀಜ(onion seed) ಉತ್ಪಾದನೆ ಹೆಚ್ಚು ಲಾಭದಾಯಕ ಕೃಷಿಯಾಗಿದೆ. ಹೀಗಾಗಿ ಇದರ ಲಾಭವನ್ನ ಕಂಡುಕೊಂಡ ಬೀದರ್(Bidar) ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್ ಗ್ರಾಮದ ರೈತ ದೀಲಿಪ್ ಕುಮಾರ್ ನೇಮಿನಾಥ್ ಕಿವುಡೆ ಅವರು ತಮ್ಮ 40 ಎಕರೆಯಷ್ಟು ಜಮೀನಿನಲ್ಲಿ ಈರುಳ್ಳಿ ಬೀಜೋತ್ಪಾಧನೆಯಲ್ಲಿ ತೊಡಗಿಕೊಂಡಿದ್ದು, 6 ತಿಂಗಳಿಗೆ ಒಂದು ಕೋಟಿಗೂ ಅಧಿಕ ಲಾಭವನ್ನ ಗಳಿಸುತ್ತಿದ್ದಾರೆ.
ಇನ್ನು ಇವರು ಯಾವುದೇ ಬೀಜೋತ್ಪಾಧನೆ ಕಂಪನಿಯ ಜೊತೆಗೆ ಒಪ್ಪಂದ ಮಾಡಿಕೊಂಡಿಲ್ಲ. ಇವರು ತಯ್ಯಾರಿಸಿದ ಇರುಳ್ಳಿ ಬೀಜವನ್ನ ನೇರವಾಗಿ ರೈತರಿಗೆ ಕೊಡುವುದರಿಂದಾಗಿ ಇವರಿಗೆ ಯಾವುದೆ ಮಾರುಕಟ್ಟೆಯಲ್ಲಿ ದರ ಏರಿಳಿತವಾದರೂ ಕೂಡ ಇವರಿಗೆ ಅಷ್ಟೇನು ನಷ್ಟವಾಗುವುದಿಲ್ಲ. ಇವರು ಉತ್ತಮ ಗುಣಮಟ್ಟದ ಇರುಳ್ಳಿ ಬೀಜವನ್ನ ತಯ್ಯಾರಿಸಿ ಮಾರಾಟ ಮಾಡುವುದರಿಂದಾಗಿ ಇವರು ಉತ್ಪಾಧಿಸುವ ಈರುಳ್ಳಿ ಬೀಜಕ್ಕೆ ಬಾರೀ ಬೇಡಿಕೆಯಿದೆ. ಅತೀ ಹೆಚ್ಚಾಗಿ ಇರುಳ್ಳಿ ಬೆಳೆಸುವ ಬಾಗಲಕೋಟೆ, ವಿಜಯಪುರ, ಬೆಳೆಗಾವಿ ಗದಗ ಜಿಲ್ಲೆಗೆ ಹೋಗಿ ತಾವೇ ನೇರವಾಗಿ ರೈತರಿಗೆ ಬೀಜವನ್ನ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ನಮಗೆ ಹೆಚ್ಚಿನ ಲಾಭವಿದೆ ಎಂದು ರೈತ ದೀಲಿಪ್ ಕುಮಾರ್ ನೇಮಿನಾಥ್ ಕಿವುಡೆ ಹೇಳುತ್ತಿದ್ದಾರೆ.
ಇದನ್ನೂ ಓದಿ:Onion Price: ಈರುಳ್ಳಿ ಬೆಲೆ ಈಗ ಕುಸಿತ; ಆದರೆ ಮಾರ್ಚ್ನಲ್ಲಿ ಕಣ್ಣೀರು ಬರಿಸಲಿದೆಯಂತೆ ಬೆಲೆ ಏರಿಕೆ
ಈ ರೈತ ದೀಲಿಪ್ ಕುಮಾರ್ ಅವರು ಹದಿನೈದು ವರ್ಷದ ಹಿಂದೆ ತಮ್ಮ ಹೊಲದಲ್ಲಿ ಕಬ್ಬು, ಸೋಯಾ, ಉದ್ದು ಹೆಸರು ಬೆಳೆಗೆ ಮಾತ್ರ ಸಿಮೀತವಾಗಿದ್ದರು. ಆದರೆ, ಅದರಲ್ಲಿ ಅಷ್ಟೇನು ಲಾಭ ಈ ರೈತನಿಗೆ ಆಗಿಲ್ಲ. ಕಬ್ಬು ಬೆಳೆಯಿಂದಲೂ ಕೂಡ ಇವರಿಗೆ ಲಾಭ ಅಷ್ಟಕಷ್ಟೆ, ಹೀಗಾಗಿ ಈ ಬೆಳೆಗಳಿಗೆ ಗುಡ್ ಬೈ ಹೇಳಿ ಕೃಷಿಯಲ್ಲಿ ಏನಾದರೂ ಹೊಸದನ್ನ ಮಾಡಬೇಕು ಅಂದುಕೊಂಡು ಈರುಳ್ಳಿ ಬೀಜೋತ್ಪಾಧನೆ ಮಾಡಿದರೆ ಹೇಗೆ ಎಂದು ಯೋಚನೆ ಮಾಡಿ, ಒಂದು ವರ್ಷ ಹತ್ತು ಎಕರೆಯಷ್ಟು ಪ್ರದೇಶದಲ್ಲಿ ಇರುಳ್ಳಿ ಬೀಜೋತ್ಪಾಧನೆ ಮಾಡಿ, ಕಿಂಟಾಲ್ ಗೆ 20 ಸಾವಿರ ರೂಪಾಯಿಯಂತೆ ಮಾರಾಟ ಮಾಡಿದ್ದಾರೆ.
ಅದರಲ್ಲಿ ಭರ್ಜರಿ ಲಾಭ ಕಂಡು ಕೊಂಡ ಇವರು, ಉತ್ತಮ ಗುಣಮಟ್ಟದ ಬೀಜವನ್ನ ನೋಡಿದ ರೈತರು ಇವರಿಂದ ಹೆಚ್ಚು ಹೆಚ್ಚಾಗಿ ಇರಳ್ಳಿ ಬೀಜವನ್ನ ಖರೀಧಿಸಲು ಶುರುಮಾಡಿದರೂ ಹತ್ತು ಎಕರೆಯಿಂದ ಆರಂಭಿಸಿ ಈಗ 40 ಎಕರೆಯಷ್ಟು ಇರುಳ್ಳಿ ಬೀಜವನ್ನ ಬೆಳೆಸುತ್ತಿದ್ದಾರೆ. ಇನ್ನು ವರ್ಷಕ್ಕೆ ಕನಿಷ್ಟವೆಂದರೂ ಇನ್ನೂರು ಕ್ಷಿಂಟಾಲ್ವರೆಗೆ ಈರುಳ್ಳಿ ಬೀಜವನ್ನ ಮಾರಾಟ ಮಾಡುತ್ತಿದ್ದಾರೆ. ಎಲ್ಲಾ ಖರ್ಚು ತೆಗೆದರೂ ಕೂಡ ಇವರಿಗೆ ವರ್ಷಕ್ಕೆ 50 ರಿಂದ 60 ಲಕ್ಷ ರೂಪಾಯಿಯಷ್ಟು ಲಾಭವಾಗುತ್ತಿದೆ ಎಂದು ರೈತ ಹೇಳುತ್ತಿದ್ದಾರೆ.
ಇದನ್ನೂ ಓದಿ:Raw Onion: ಹಸಿ ಈರುಳ್ಳಿ ತಿನ್ನುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳಿವು
ಒಟ್ಟಿನಲ್ಲಿ ರೈತ ದೀಲಿಪ್ ಕುಮಾರ್ ಈರುಳ್ಳಿ ಬೀಜೋತ್ಪಾಧನೆ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಎಲ್ಲ ರೈತರು ಪ್ರಯೋಗಾತ್ಮಕ ಕೃಷಿ, ಬೆಳೆ ಬೆಳೆಯಲು ಅನುಕೂಲ ಮಾಡಿಕೊಳಬೇಕು. ತೋಟಗಾರಿಕೆ ಇಲಾಖೆಯ ಸಹಾಯ ಪಡೆದು ಉತ್ತಮ ಆದಾಯ ಗಳಿಸೋ ತೋಟಗಾರಿಕೆ ಬೆಳೆ ಬೆಳೆಯಲು ಎಲ್ಲ ರೈತರು ಯಶಸ್ಸು ಆಗಬೇಕು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ