AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Onion Export: ಈರುಳ್ಳಿ ಅಭಾವವಿದ್ದರೂ ಬಾಂಗ್ಲಾದೇಶ ಸೇರಿದಂತೆ ಕೆಲ ದೇಶಗಳಿಗೆ 54,716 ಟನ್ ರಫ್ತಿಗೆ ಸರ್ಕಾರ ಒಪ್ಪಿಗೆ

Limited Onion Exports Allowed Till March 31st: ಮಾರ್ಚ್ 31ರವರೆಗೆ ಸರ್ಕಾರವೇ ಈರುಳ್ಳಿ ರಫ್ತು ನಿಷೇಧಿಸಿದೆ. ಆದರೆ ಈಗ ಮೂರ್ನಾಲ್ಕು ದೇಶಗಳಿಗೆ ಈರುಳ್ಳಿ ರಫ್ತಿಗೆ ಸರ್ಕಾರ ಅನುಮತಿಸಿದೆ. ಬಾಂಗ್ಲಾದೇಶ, ಬಹರೇನ್, ಮಾರಿಷಸ್ ಮತ್ತು ಭೂತಾನ್ ದೇಶಗಳಿಗೆ ಒಟ್ಟು 54,716 ಟನ್ ಈರುಳ್ಳಿ ರಫ್ತು ಮಾಡಲು ವರ್ತಕರಿಗೆ ಅನುಮತಿ ಕೊಡಲಾಗಿದೆ. ಕೇಂದ್ರ ವಿದೇಶಾಂಗ ವ್ಯವಹಾರ ಸಚಿವಾಲಯದ ಶಿಫಾರಸಿನ ಮೇರೆಗೆ ಈ ವಿನಾಯಿತಿ ಕೊಡಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿದೆ.

Onion Export: ಈರುಳ್ಳಿ ಅಭಾವವಿದ್ದರೂ ಬಾಂಗ್ಲಾದೇಶ ಸೇರಿದಂತೆ ಕೆಲ ದೇಶಗಳಿಗೆ 54,716 ಟನ್ ರಫ್ತಿಗೆ ಸರ್ಕಾರ ಒಪ್ಪಿಗೆ
ಈರುಳ್ಳಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 22, 2024 | 7:00 PM

Share

ನವದೆಹಲಿ, ಫೆಬ್ರುವರಿ 22: ಭಾರತದಲ್ಲಿ ಮಾರ್ಚ್ 31ರವರೆಗೂ ಈರುಳ್ಳಿ ರಫ್ತಿಗೆ ನಿರ್ಬಂಧ (export ban) ಹೇರಲಾಗಿದೆ. ಈ ನಡುವೆ ಕೆಲ ದೇಶಗಳಿಗೆ ಸೀಮಿತ ಪ್ರಮಾಣದಲ್ಲಿ ಈರುಳ್ಳಿ ರಫ್ತಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಪಿಟಿಐ ವರದಿ ಪ್ರಕಾರ ಈರುಳ್ಳಿ ವರ್ತಕರಿಗೆ 54,716 ಟನ್​ಗಳಷ್ಟು ಪ್ರಮಾಣದಲ್ಲಿ ರಫ್ತು ಮಾಡಲು ಗುರುವಾರ ಅನುಮತಿಸಿದೆ. ಬಾಂಗ್ಲಾದೇಶ, ಮಾರಿಷಸ್, ಬಹರೇನ್ ಮತ್ತು ಭೂತಾನ್ ದೇಶಗಳಿಗೆ ಮಾರ್ಚ್ 31ರವರೆಗೂ ನಿಗದಿತ ಮೊತ್ತದಷ್ಟು ಈರುಳ್ಳಿ ರಫ್ತು ಮಾಡಬಹುದಾಗಿದೆ. ಬಾಂಗ್ಲಾದೇಶಕ್ಕೆ ಹೆಚ್ಚಿನ ಈರುಳ್ಳಿ ರಫ್ತಾಗಲಿದೆ. ವರದಿ ಪ್ರಕಾರ ಬಾಂಗ್ಲಾದೇಶವೊಂದಕ್ಕೆ 50,000 ಟನ್ ಈರುಳ್ಳಿ ರಫ್ತಿಗೆ ಅವಕಾಶ ಕೊಡಲಾಗಿದೆ.

ಇನ್ನು, ಮಾರಿಷಸ್, ಬಹರೇನ್ ಮತ್ತು ಭೂತಾನ್ ದೇಶಗಳಿಗೆ ಕ್ರಮವಾಗಿ 1,200 ಟನ್, 3,000 ಟನ್ ಮತ್ತು 560 ಟನ್​ಗಳಷ್ಟು ಈರುಳ್ಳಿ ರಫ್ತಿಗೆ ಅನುಮೋದನೆ ಕೊಡಲಾಗಿದೆ. ಇಂದು ಗುರುವಾರ ಈ ಕ್ರಮ ಪ್ರಕಟಿಸಲಾಗಿದ್ದು ತತ್​ಕ್ಷಣದಿಂದಲೇ ಜಾರಿಗೆ ಬರುತ್ತದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಆಂಡ್ರಾಯ್ಡ್ ಮಾರುಕಟ್ಟೆಗೆ ಭಾರತದ್ದೇ ಇಂಡಸ್ ಆ್ಯಪ್​ಸ್ಟೋರ್ ಲಗ್ಗೆ; ದೇಶೀಯ ಮೊಬೈಲ್ ಬ್ರ್ಯಾಂಡ್ ಅಭಿವೃದ್ಧಿಗೆ ಸರ್ಕಾರ ಆಸಕ್ತಿ

ಮಾರ್ಚ್ 31ರವರೆಗೆ ನಿರ್ದಿಷ್ಟಪಡಿಸಲಾದ ಮೊತ್ತದ ಈರುಳ್ಳಿಯನ್ನು ರಫ್ತು ಮಾಡಲು ವರ್ತಕರಿಗೆ ಅನುಮತಿಸಲಾಗಿದೆ. ಯಾವ ರೀತಿಯಲ್ಲಿ ರಫ್ತು ಮಾಡಬೇಕು ಎಂಬುದನ್ನು ಅವಲೋಕಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ವಿದೇಶಾಂಗ ಸಚಿವಾಲಯದ ಶಿಫಾರಸಿನ ಮೇರೆಗೆ ಕೆಲ ದೇಶಗಳಿಗೆ ಈರುಳ್ಳಿ ಸರಬರಾಜು ಮಾಡುವ ಅವಕಾಶ ನೀಡಲಾಗಿರುವುದು ತಿಳಿದುಬಂದಿದೆ. ಭಾರತದಲ್ಲಿ ಈರುಳ್ಳಿ ಅಭಾವ ಸೃಷ್ಟಿಯಾಗುವ ಅಪಾಯ ಎದುರಾಗಲಿದ್ದು, ಈ ಸಂದರ್ಭದಲ್ಲಿ ಈ ಬೆಳವಣಿಗೆ ಆಗಿದೆ.

ಇದನ್ನೂ ಓದಿ: ಪಿಎಂ ಕಿಸಾನ್ 16ನೇ ಕಂತಿನ 2,000 ರೂ ಬರಲಿದೆ ಫೆ. 28ಕ್ಕೆ

ಈರುಳ್ಳಿ ಬೆಲೆ ಹೆಚ್ಚಳ ನಿಗ್ರಹಿಸಲು ಮತ್ತು ಈರುಳ್ಳಿ ದಾಸ್ತಾನು ಹೆಚ್ಚಿಸಲು ಸರ್ಕಾರ ರಫ್ತು ನಿಷೇಧ ಕ್ರಮವನ್ನು ಡಿಸೆಂಬರ್ 8ರಂದು ಕೈಗೊಂಡಿತ್ತು. ಕಳೆದ ವಾರ ಈ ನಿರ್ಧಾರ ಮುಂದುವರಿಸಲು ನಿರ್ಧರಿಸಲಾಯಿತು. ಮಾರ್ಚ್ 31ರವರೆಗೂ ಈರುಳ್ಳಿ ರಫ್ತು ಮಾಡದಂತೆ ಈರುಳ್ಳಿ ಮಾರಾಟಗಾರರಿಗೆ ಸೂಚಿಸಲಾಗಿದೆ. ವರದಿ ಪ್ರಕಾರ ಮಾರ್ಚ್ 31ರ ಬಳಿಕವೂ ಈ ರಫ್ತು ನಿಷೇಧ ನೀತಿ ಮುಂದುವರಿಯುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ