PM Kisan Samman Nidhi Yojana: ಪಿಎಂ ಕಿಸಾನ್ 16ನೇ ಕಂತಿನ 2,000 ರೂ ಬರಲಿದೆ ಫೆ. 28ಕ್ಕೆ

16th Installment of PM Kisan On 2024 Feb 28th: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 16ನೇ ಕಂತಿನ ಹಣ ಫೆಬ್ರುವರಿ 28, ಬುಧವಾರದಂದು ಬಿಡುಗಡೆ ಆಗಲಿದೆ ಎಂದು ಅಧಿಕೃತ ಮಾಹಿತಿ ಇದೆ. 2019ರಲ್ಲಿ ಆರಂಭಗೊಂಡ ಈ ಯೋಜನೆಯು ಕೃಷಿಕ ಕುಟುಂಬಗಳಿಗೆ ವ್ಯವಸಾಯಕ್ಕೆ ಅನುಕೂಲವಾಗಲು ವರ್ಷಕ್ಕೆ 6,000 ರೂ ಧನಸಹಾಯ ನೀಡಲಾಗುತ್ತದೆ. ಇಲ್ಲಿಯವರೆಗೆ 15 ಕಂತುಗಳು ಬಿಡುಗಡೆ ಆಗಿದ್ದು, 15ನೇ ಕಂತಿನ ಹಣ ನವೆಂಬರ್​ನಲ್ಲಿ ಬಂದಿತ್ತು.

PM Kisan Samman Nidhi Yojana: ಪಿಎಂ ಕಿಸಾನ್ 16ನೇ ಕಂತಿನ 2,000 ರೂ ಬರಲಿದೆ ಫೆ. 28ಕ್ಕೆ
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 22, 2024 | 12:11 PM

ನವದೆಹಲಿ, ಫೆಬ್ರುವರಿ 22: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Samman Nidhi Yojana) 16ನೇ ಕಂತಿನ ಹಣ ಇದೇ ಫೆಬ್ರುವರಿ 28ರಂದು ಸಿಗಲಿದೆ. ಪಿಎಂ ಕಿಸಾನ್​ನ ಅಧಿಕೃತ ವೆಬ್​ಸೈಟ್​ನಲ್ಲೇ ಈ ಮಾಹಿತಿ ಪ್ರಕಟಿಸಲಾಗಿದೆ. ಫೆ. 28, ಬುಧವಾರದಂದು ಫಲಾನುಭವಿ ರೈತರ ಖಾತೆಗಳಿಗೆ 2,000 ರೂ ಹಣ ವರ್ಗಾವಣೆ ಆಗಲಿದೆ. 2023ರ ಡಿಸೆಂಬರ್​ನಿಂದ 2024 ಮಾರ್ಚ್​ವರೆಗಿನ ಅವಧಿಯ ಕಂತಿನ ಹಣ ಇದಾಗಿದೆ. 2023ರ ಆಗಸ್ಟ್​ನಿಂದ ನವೆಂಬರ್​ವರೆಗಿನ 15ನೇ ಕಂತಿನ ಹಣ ನವೆಂಬರ್​ನಲ್ಲಿ ಬಿಡುಗಡೆಯಾಗಿತ್ತು. ಒಟ್ಟು 9 ಕೋಟಿಗೂ ತುಸು ಹೆಚ್ಚು ಫಲಾನುಭವಿಗಳ ಖಾತೆಗಳಿಗೆ ಸರ್ಕಾರ 18,000 ಕೋಟಿ ರೂ ಬಿಡುಗಡೆ ಮಾಡಿತ್ತು.

ಫಲಾನುಭವಿ ಸ್ಥಿತಿ ಪರಿಶೀಲಿಸಿ…

ನೀವು ಯೋಜನೆಗೆ ನೊಂದಾಯಿಸಿದ್ದರೂ ಇಕೆವೈಸಿ ಮಾಡಿಸಿಲ್ಲದಿದ್ದರೆ ಹಣ ಸಿಗುವುದಿಲ್ಲ. ಇಕೆವೈಸಿ ಮಾಡಿಸಿದ್ದು, ಫಲಾನುಭವಿ ಸ್ಥಿತಿ (Beneficiary Status) ಏನಿದೆ ಎಂದು ಪರಿಶೀಲಿಸಲು ಅವಕಾಶ ಇದೆ. ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್​ಸೈಟ್​ಗೆ ಹೋಗಬೇಕು. ಅದರ ಲಿಂಕ್ ಇಲ್ಲಿದೆ: pmkisan.gov.in

ಇಲ್ಲಿ ತುಸು ಕೆಳಗೆ ಸ್ಕ್ರಾಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಎಂಬ ಸೆಕ್ಷನ್ ಕಾಣಬಹುದು. ಅಲ್ಲಿರುವ ಹಲವು ಟ್ಯಾಬ್​ಗಳಲ್ಲಿ ಬೆನಿಫಿಶಿಯರಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.

ನೀವು ಯೋಜನೆಗೆ ನೊಂದಾಯಿಸಿದಾಗ ಸಿಗುವ ರಿಜಿಸ್ಟ್ರೇಶನ್ ನಂಬರ್ ನಮೂದಿಸಿ, ಕ್ಯಾಪ್ಚಾ ಕೋಡ್ ಹಾಕಿ, ಗೆಟ್ ಒಟಿಪಿ ಮೇಲೆ ಕ್ಲಿಕ್ ಮಾಡಿ.

ನಿಮ್ಮ ನೊಂದಾಯಿತ ಮೊಬೈಲ್ ನಂಬರ್​ಗೆ ಬರುವ ಒಟಿಪಿ ಹಾಕಿ ಸಲ್ಲಿಸಿದರೆ ಯೋಜನೆಯಲ್ಲಿ ನಿಮ್ಮ ಬೆನಿಫಿಶಿಯರಿ ಸ್ಟೇಟಸ್ ತಿಳಿಯಬಹುದು.

ಒಂದು ವೇಳೆ ನಿಮಗೆ ರಿಜಿಸ್ಟ್ರೇಶನ್ ನಂಬರ್ ಗೊತ್ತಿಲ್ಲದೇ ಇದ್ದಲ್ಲಿ ಚಿಂತೆ ಪಡಬೇಕಿಲ್ಲ. ಮೊಬೈಲ್ ನಂಬರ್ ಅಥವಾ ಅಧಾರ್ ನಂಬರ್ ಮೂಲಕ ರಿಜಿಸ್ಟ್ರೇಶನ್ ಸಂಖ್ಯೆ ಪಡೆಯಬಹುದು.

ಇದನ್ನೂ ಓದಿ: ಈರುಳ್ಳಿ ಬೆಲೆ ಈಗ ಕುಸಿತ; ಆದರೆ ಮಾರ್ಚ್​ನಲ್ಲಿ ಕಣ್ಣೀರು ಬರಿಸಲಿದೆಯಂತೆ ಬೆಲೆ ಏರಿಕೆ

ಫಲಾನುಭವಿಗಳ ಪಟ್ಟಿ ನೋಡಬಹುದು…

ನಿಮ್ಮ ಗ್ರಾಮದ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ನೋಡಲೂ ಅವಕಾಶ ಇದೆ. ಪಿಎಂ ಕಿಸಾನ್ ವೆಬ್​ಸೈಟ್​ಗೆ ಹೋಗಿ ಫಾರ್ಮರ್ಸ್ ಕಾರ್ನರ್ ಸೆಕ್ಷನ್​ನಲ್ಲಿ ಬೆನಿಫಿಶಿಯರಿ ಲಿಸ್ಟ್ ಮೇಲೆ ಕ್ಲಿಕ್ ಮಾಡಿ.

ಇದರಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ (ತಾಲೂಕು) ಮತ್ತು ಗ್ರಾಮವನ್ನು ಆಯ್ಕೆ ಮಾಡಿ. ಆಗ ಆ ಗ್ರಾಮದಲ್ಲಿರವ ಪಿಎಂ ಕಿಸಾನ್ ಫಲಾನುಭವಿಗಳೆಲ್ಲರ ಪಟ್ಟಿ ಸಿಗುತ್ತದೆ. ಅದರಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿಕೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ