ನೂರಾರು ಕೋಟಿ ರೂ. ವೆಚ್ಚಮಾಡಿ ಕಾಲುವೆ ದುರಸ್ಥಿ‌: ಆದರೂ ಬರಲಿಲ್ಲ ನೀರು, ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 18, 2023 | 2:41 PM

ರೈತರ ಜಮಿನಿಗೆ ನೀರು ಯಾಕೆ ಬಿಡುತ್ತಿಲ್ಲ ಎಂದು ರೈತರು ಅಧಿಕಾರಿಗಳನ್ನ ಕೇಳಿದರೆ ಕಾಲುವೇ ಸರಿಯಾಗಿಲ್ಲ ದುರಸ್ಥಿಯಾದ ನಂತರ ಕಾಲುವೆಗೆ ನೀರು ಹರಿಸುತ್ತೇವೆಂದು ಅಧಿಕಾರಿಗಳು ಸಬೂಬು ಹೇಳುತ್ತಲೆ ಬಂದಿದ್ದರು, ಆದರೆ ಕಳೆದ ಕಾಂಗ್ರೆಸ್​ ಸರಕಾರದ ಅವಧಿಯಲ್ಲಿ ಕಾಲುವೆ ದುರಸ್ಥಿಗಾಗಿ 470 ಕೋಟಿ ರೂ. ಬಿಡುಗಡೆ ಮಾಡಿ ಕಾಲುವೆ ದುಸ್ಥಿ ಮಾಡಿರುವ ಕಾಲುವೆಗೆ ನೀರು ಹರಿಯದಂತಾಗಿದೆ.

ನೂರಾರು ಕೋಟಿ ರೂ. ವೆಚ್ಚಮಾಡಿ ಕಾಲುವೆ ದುರಸ್ಥಿ‌: ಆದರೂ ಬರಲಿಲ್ಲ ನೀರು, ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ
ಕಾಲುವೆ ದುರಸ್ಥಿ
Follow us on

ಬೀದರ್, ಸೆಪ್ಟೆಂಬರ್​ 18: ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ವರ್ಷದ ಹಿಂದೆ ಅಲ್ಲಿನ ಕಾಲುವೆಯನ್ನ ದುರಸ್ಥಿ (Canal repairs) ಮಾಡಲಾಗಿದೆ. ದುರಸ್ಥಿ ಮಾಡಿದ ಕಾಲುವೆಯಲ್ಲಿ ಗಿಡಗಂಟೆಗಳು ಬೆಳೆದು ನೀರು ಸರಾಗವಾಗಿ ಮುಂದೆ ಹೋಗುತ್ತಿಲ್ಲ. ಎರದಂಡೆ ಕಾಲುವೆಯಲ್ಲಿ ಕಾಲುವೆ ದುರಸ್ಥಿಯಾಗಿದ್ದರು ನೀರು ಮಾತ್ರ ಬರುತ್ತಿಲ್ಲ. ಕಾಲುವೆ ದುರಸ್ಥಿಯಾಗಿದ್ದು ನಮ್ಮ ಹೊಲಕ್ಕೆ ನೀರು ಬರುತ್ತದೆಂದುಕೊಂಡಿದ್ದ ರೈತರು ಶಾಕ್​ಗೆ ಒಳಗಾಗಿದ್ದಾರೆ.

ಕಾರಂಜಾ ಡ್ಯಾಂ ಇದು ಬೀದರ್ ಜಿಲ್ಲೆಯ ಜನರ ಮತ್ತು ರೈತರ ಜೀವನಾಡಿ. ಜಿಲ್ಲೆಯ ಏಕೈಕ ಡ್ಯಾಮ್ ಇದಾಗಿದ್ದು 7.691 ಟಿಎಂಸಿ ಸಾಮರ್ಥ್ಯದ ಡ್ಯಾಂ ಇದಾಗಿದೆ. ನಾಲ್ಕು ದಶಕದ ಹಿಂದೆ ರೈತರ ಜಮೀನಿಗೆ ನೀರು, ಸಾರ್ವಜನಿಕರಿಗೆ ಕುಡಿಯುವ ನೀರು ಕೊಡುವ ಉದ್ದೇಶದಿಂದ ಈ ಡ್ಯಾಂ ನಿರ್ಮಿಸಲಾಗಿದೆ. ಜಲಾಶಯ ನಿರ್ಮಾಣವಾದಾಗಿಂದ ಸಾರ್ವಜನಿಕರಿಗೆ ಕುಡಿಯುವ ನೀರು ಮಾತ್ರ ಪೂರೈಕೆಯಾಗುತ್ತಿದ್ದು, ರೈತರ ಜಮೀನಿಗೆ ಮಾತ್ರ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ.

ಇದನ್ನೂ ಓದಿ: ಒಂದು ದಶಕದಿಂದ ವಾಸವಿದ್ದ 200 ಬಡ ಕುಟುಂಬಗಳಿಗೆ ಎದುರಾಯ್ತು ಮನೆ ಕಳೆದುಕೊಳ್ಳುವ ಭೀತಿ: ಒಕ್ಕಲೆಬ್ಬಿಸಲು ಮುಂದಾದ್ರಾ ಪ್ರಭಾವಿಗಳು?

ರೈತರ ಜಮಿನಿಗೆ ನೀರು ಯಾಕೆ ಬಿಡುತ್ತಿಲ್ಲ ಎಂದು ರೈತರು ಅಧಿಕಾರಿಗಳನ್ನ ಕೇಳಿದರೆ ಕಾಲುವೇ ಸರಿಯಾಗಿಲ್ಲ ದುರಸ್ಥಿಯಾದ ನಂತರ ಕಾಲುವೆಗೆ ನೀರು ಹರಿಸುತ್ತೇವೆಂದು ಅಧಿಕಾರಿಗಳು ಸಬೂಬು ಹೇಳುತ್ತಲೆ ಬಂದಿದ್ದರು, ಆದರೆ ಕಳೆದ ಕಾಂಗ್ರೆಸ್​ ಸರಕಾರದ ಅವಧಿಯಲ್ಲಿ ಕಾಲುವೆ ದುರಸ್ಥಿಗಾಗಿ 470 ಕೋಟಿ ರೂ. ಬಿಡುಗಡೆ ಮಾಡಿ ಕಾಲುವೆ ದುಸ್ಥಿ ಮಾಡಲಾಗಿದೆ. ಕಾಲುವೆ ರೀಪೇರಿ ಮಾಡಿದ್ದರ ಪರಿನಾಮವಾಗಿ ಕಾರಂಜಾ ಡ್ಯಾಮ್ ಬಲದಂಡೆ ಕಾಲುವೆಗೆ ನೀರು ಹರಿಯುತ್ತಿದ್ದು, ಆ ಭಾಗದ ರೈತರು ನೀರಾವರಿ ಮಾಡಿಕೊಂಡು ಸುಂದರ ಬದುಕು ಕಟ್ಟಿಕೊಂಡಿದ್ದಾರೆ.

ಆದರೆ ಈಗ ರಿಪೇರಿ ಮಾಡಿದ ಕಾಲುವೆಯಲ್ಲಿ ಗಿಡಗಂಟೆಗಳು ಬೆಳೆದಿವೆ, ನೀರಿನಲ್ಲಿ ಪಾಚಿಗಿಡಗಳು ಬೆಳೆದಿವೆ, ಕಾಲುವೆಗಳು ಅಲ್ಲಲ್ಲಿ ಬಿರುಕು ಕೂಡಾ ಬಿಟ್ಟಿದ್ದು ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ ಇದರಿಂದಾಗಿ ರೈತರು ಸರಿಯಾಗಿ ನೀರು ಬಳಕೆ ಮಾಡಿಕೊಳ್ಳದಂತಾ ಸ್ಥಿತಿಯಲ್ಲಿ ನಿರ್ಮಾಣವಾಗಿದೆಂದು ರೈತರು ಹೆಳುತ್ತಿದ್ದಾರೆ.

ಕಾರಂಜಾ ಡ್ಯಾಂನ ಬಲದಂಡೆ ಕಾಲುವೆ 131 ಕಿಲೋ ಮೀಟರ್, ಎಡದಂಡೆ ಕಾಲುವೆ 91 ಕಿಲೋಮೀಟರ್ ವರೆಗೆ ರೈತರ ಹೊಲದಲ್ಲಿ ಕಾಲುವೆ ಹರಿದು ಹೋಗಿದೆ. ಇದರ ಜೊತೆಗೆ ರೈತರ ಹೊಲದಲ್ಲಿ ಚಿಕ್ಕಚಿಕ್ಕ ಕಾಲುವೆ ಮಾಡಿದ್ದರಿಂದ ರೈತರು ಆ ನೀರನ್ನ ಬಳಸಿಕೊಂಡು ನೀರಾವರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಎಡದಂಡೆಯ ಕಾಲುವೆ ದುರಸ್ಥಿ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ, ಎಲ್ಲಾ ಕಾಮಗಾರಿ ಪೂರ್ಣಗೊಂಡಿದೆ ಎಂದು ಗುತ್ತಿಗೆದಾರ ನೀರಾವರಿ ಇಲಾಕೆಗೆ ಹಹಿಸಿ ಆತ ಹೋಗಿದ್ದಾನೆ. ಆದರೆ ಇನ್ನೂ ಬರೆಗೂ ಕೂಡಾ ಎಡದಂಡೆ ಕಾಲುವೆ ಅಲ್ಲಲ್ಲಿ ಕಾಲುವೆಯನ್ನ ಮಾಡದೆ ಹಾಗೆ ಬಿಟ್ಟು ಹೋಗಿದ್ದಾನೆ.

ಇದನ್ನೂ ಓದಿ: ಚಿತ್ರಕಲಾ ಶಿಕ್ಷಕಿ ಹಾಗೂ ವಿದ್ಯಾರ್ಥಿಗಳಿಂದ ನೈಸರ್ಗಿಕ ಗಣಪತಿ ತಯಾರಿಕೆ: ಮಾರಾಟದೊಂದಿಗೆ ಜನರಲ್ಲಿ ಜಾಗೃತಿ

ಇಂತಹ ಕಾಲುವೆಗೆ ನೀರು ಹರಿಸಿದರೆ ಆ ನೀರು ಅಲ್ಲಲ್ಲಿ ಸೋರಿಕೆಯಾಗಿ ರೈತರ ಹೊಲಕ್ಕೆ ಹೋಗುತ್ತಿಲ್ಲ, ಇನ್ನೂ ರೈತರ ಹೊಲದಲ್ಲಿ ಚಿಕ್ಕಚಿಕ್ಕ ಕಾಲುವೆಯನ್ನ ಮಾಡಿದ್ದರು ಅದಲ್ಲಿ ನೀರು ಹೋಗಲು ಒಂದಕೊಂದು ಲಿಂಕ್ ಕೊಟ್ಟಿಲ್ಲ ಇದರಿಂದಾಗಿ ನೂರಾರು ಕೋಟಿ ರೂಪಾಯಿ ವೆಚ್ಚಮಾಡಿದರೆ ಎಡದಂಡೆ ಕಾಲುವೆಯ ರೈತರಿಗೆ ನೀರಾವರಿ ಸೌಲಭ್ಯಮಾತ್ರ ಸಿಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಕಳೆದ ಮೂರು ವರ್ಷದಿಂದ ಡ್ಯಾಮ್ ನಲ್ಲಿ ನೀರು ಸಹ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹವಾಗುತ್ತಿದೆ ಆದರೆ ಎಡದಂತೆ ಕಾಲುವೆಯ ರೈತರಿಗೆ ಮಾತ್ರ ಇದರ ಪ್ರಯೋಜ ಆಗುತ್ತಿಲ್ಲ, ನಮ್ಮ ಜಮೀನಿಗೆ ಇಂದು ನೀರು ಬರಬಹುದು, ನಾಳೆ ಬರಬಹು ಎಂದು ಜಾತಕ ಪಕ್ಷಿಯಂತೆ ಇಲ್ಲಿನ ರೈತರು ಕಾಯುತ್ತಾ ಕುಳಿತ್ತಿದ್ದಾರೆ. ಆದರೆ ನೀರು ಮಾತ್ರ ರೈತರ ಜಮೀನಿಗೆ ಬರುತ್ತಿಲ್ಲ.

ಕೊಟ್ಯಾಂತರ ರೂಪಾಯಿ ಹಣ ಖರ್ಚುಮಾಡಿ ನೂರಾರು ಕಿಲೋ ಮೀಟರ್ ಗಟ್ಟಲೇ ಕಾಲುವೆ ದುರಸ್ಥಿ ಮಾಡಿದರು ರೈತರಿಗೆ ಮಾತ್ರ ಅದರ ಪ್ರಯೋಜನವಾಗುತ್ತಿಲ್ಲ. ಜೊತೆಗೆ ಹಾಳಾದ ಕಾಲುವೆಗಳನ್ನ ರೀಪೇರಿ ಮಾಡುತ್ತೆವೆಂದು ರೇಪೆರಿಗಾಗಿಯೇ ಅಧಿಕಾರಿಗಳು ಪ್ರತಿವರ್ಷ ಕೊಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ, ಆದರೆ ನೀರು ಮಾತ್ರ ಹರಿಸಲು ಮುಂದಾಗುತ್ತಿಲ್ಲ ಅಂತ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರೈತರಿಗೆ ಅನಕೂಲವಾಗಲಿ ಅಂತ ಸರ್ಕಾರ ಡ್ಯಾಮಗಳನ್ನು ನಿರ್ಮಾಣ ಮಾಡಿದೆ. ಆದ್ರೆ ಅಧಿಕಾರಿಗಳ ನಿಷ್ಕಾಳಜಿಯಿಂದಾಗಿ ಡ್ಯಾಮ ನಿರ್ಮಾಣವಾಗಿ ದಶಕಗಳು ಕಳೆದರು ಕೆಲವು ರೈತರಿಗೆ ನೀರು ಬರುತ್ತಿದೆ ಆದರೆ ಕೆಲವು ರೈತರಿಗೆ ನೀರು ಬರುತ್ತಿಲ್ಲ ಇದು ಸಹಜವಾಗಿಯೇ ರೈತರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.