ಬೀದರ್: ಉದ್ಯಮಿಗೆ ಪಿಸ್ತೂಲ್ ತೋರಿಸಿ ಮೂರೂವರೆ ಕೋಟಿ ರೂ. ದರೋಡೆ, ಮೂವರ ಬಂಧನ

| Updated By: Rakesh Nayak Manchi

Updated on: Nov 30, 2023 | 6:48 AM

ಉದ್ಯಮಿಯೊಬ್ಬರಿಗೆ ಪಿಸ್ತೂಲು ತೋರಿಸಿ ಬರೋಬ್ಬರಿ ಮೂರೂವರೆ ಕೋಟಿ ರೂಪಾಯಿ ದರೋಡೆ ನಡೆಸಿದ ಘಟನೆ ಬೀದರ್ ಜಿಲ್ಲೆಯಲ್ಲಿ ನಿನ್ನೆ ಬೆಳಗ್ಗೆ ನಡೆದಿತ್ತು. ಈ ಬಗ್ಗೆ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ 24 ಗಂಟೆ ಒಳಗಾಗಿ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೀದರ್: ಉದ್ಯಮಿಗೆ ಪಿಸ್ತೂಲ್ ತೋರಿಸಿ ಮೂರೂವರೆ ಕೋಟಿ ರೂ. ದರೋಡೆ, ಮೂವರ ಬಂಧನ
ಬೀದರ್​ನಲ್ಲಿ ಉದ್ಯಮಿಗೆ ಪಿಸ್ತೂಲ್ ತೋರಿಸಿ ಮೂರೂವರೆ ಕೋಟಿ ರೂ. ದರೋಡೆ ನಡೆಸಿದ ಮೂವರ ಬಂಧನ (ಸಾಂದರ್ಭಿಕ ಚಿತ್ರ)
Image Credit source: Getty Images
Follow us on

ಬೀದರ್, ನ.30: ಉದ್ಯಮಿಯೊಬ್ಬರಿಗೆ ಪಿಸ್ತೂಲು ತೋರಿಸಿ ಬರೋಬ್ಬರಿ ಮೂರೂವರೆ ಕೋಟಿ ರೂಪಾಯಿ ದರೋಡೆ (Robbery) ನಡೆಸಿದ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಪಕ್ಕದ ಹಣಮಂತವಾಡಿ ಗ್ರಾಮದ ಬಳಿ ನಡೆದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕೇವಲ 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ಉದ್ಯಮಿ ಉಮಾಶಂಕರ್ ಅವರು ಮೂರೂವರೆ ಕೋಟಿ ರೂ. ಸಹಿತ ನವೆಂಬರ್ 28 ರಂದು ರಾತ್ರಿ ಜಿಲ್ಲೆಯ ಬಸವಕಲ್ಯಾಣದ ರಾಷ್ಟ್ರೀಯ ಹೆದ್ದಾರಿ ಮಾರ್ಗದ ಮೂಲಕ ಮಹಾರಾಷ್ಟ್ರದ ಫಂಡರಪುರಕ್ಕೆ ಹೋಗುತ್ತಿದ್ದರು. ಹಣಮಂತವಾಡಿ ಗ್ರಾಮದ ಬಳಿ ಶೌಚಾಲಯಕ್ಕೆಂದು ಕಾರು ನಿಲ್ಲಿಸಿದಾಗ ಪಿಸ್ತೂಲು ತೋರಿಸಿ ಹಣ ದರೋಡೆ ಮಾಡಲಾಗಿತ್ತು.

ಇದನ್ನೂ ಓದಿ: ರಾಕ್​ಲೈನ್ ವೆಂಕಟೇಶ್ ಸಹೋದರನ ಮನೆ ದರೋಡೆ: ಒಂದಲ್ಲ ಎರಡಲ್ಲ 3 ತಿಂಗಳು ಸ್ಕೆಚ್ ಹಾಕಿ ಕಳ್ಳತನ ಮಾಡಿದ್ದ ಗ್ಯಾಂಗ್ ಅರೆಸ್ಟ್

ಗಾಳಿಯಲ್ಲಿ ಗುಂಡು ಹಾರಿಸಿ ಹಣೆಗೆ ಪಿಸ್ತೂಲ್ ಇಟ್ಟು ಸಿನಿಮೀಯ ರೀತಿ 3.50 ಕೋಟಿ ಹಣವನ್ನು ದರೋಡೆ ಮಾಡಲಾಗಿತ್ತು. ಈ ಬಗ್ಗೆ ನಿನ್ನೆ (ನ.29) ರಂದು ಬೆಳಗ್ಗೆ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಮೂವರನ್ನು ಪೊಲೀಸರು ಬಂಧಿಸಿದ್ದು, ಒಬ್ಬ ಪರಾರಿಯಾಗಿದ್ದಾನೆ.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗುಂಡುರೆಡ್ಡಿ, ವಿಜಯ್ ರೆಡ್ಡಿ ಮತ್ತು ಸಂಜಯ ರೆಡ್ಡಿ ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ 2.62 ಕೋಟಿ ರೂಪಾಯಿಯನ್ನು ವಶಕ್ಕೆ ಪಡೆದ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:47 am, Thu, 30 November 23