AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನಗರ: ಹೊತ್ತಿ ಉರಿದ‌‌ ಕಾರು ಕೇಸ್​ಗೆ ಟ್ವಿಸ್ಟ್! ದಂಪತಿ ಮೇಲೆ ಹಲ್ಲೆ, ದರೋಡೆ

ರಾಮನಗರ ತಾಲೂಕಿನ ದೊಡ್ಡ ಗಂಗವಾಡಿ ಗ್ರಾಮದಲ್ಲಿ ನಿನ್ನೆ ರಾತ್ರಿ ಕಾರು ಅಪಘಾತಗೊಂಡು ಹೊತ್ತಿ ಉರಿದ‌‌ ಪ್ರಕರಣಕ್ಕೆ ಟ್ವಿಸ್ಟ್​​ ಸಿಕ್ಕಿದ್ದು, ಮನೆ ಖಾಲಿ ಮಾಡಿ ಇನ್ನೊಂದು ಮನೆಗೆ ತೆರಳುತ್ತಿದ್ದ ದಂಪತಿ ಮೇಲೆ ನಾಲ್ವರ ಗ್ಯಾಂಗ್​ ಹಲ್ಲೆ ಮಾಡಿ 35 ಗ್ರಾಂ ಬಂಗಾರದ ಮಾಂಗಲ್ಯ ಸರ, ಮನೆ ಖಾಲಿ ಮಾಡಿದ ಅಡ್ವನ್ಸ್ ಹಣ 4 ಲಕ್ಷ ರೂ. ದರೋಡೆ ಮಾಡಿದ್ದಾರೆ. ಮೂವರನ್ನು ಬಂಧಿಸಿದ್ದು, ಇನ್ನೊಬ್ಬನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ರಾಮನಗರ: ಹೊತ್ತಿ ಉರಿದ‌‌ ಕಾರು ಕೇಸ್​ಗೆ ಟ್ವಿಸ್ಟ್! ದಂಪತಿ ಮೇಲೆ ಹಲ್ಲೆ, ದರೋಡೆ
ಹೊತ್ತಿ ಉರಿದ ಕಾರು
Follow us
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಗಂಗಾಧರ​ ಬ. ಸಾಬೋಜಿ

Updated on:Nov 24, 2023 | 4:28 PM

ರಾಮನಗರ, ನವೆಂಬರ್​​ 24: ರಾಮನಗರ (Ramanagara) ತಾಲೂಕಿನ ದೊಡ್ಡ ಗಂಗವಾಡಿ ಗ್ರಾಮದಲ್ಲಿ ನಿನ್ನೆ ರಾತ್ರಿ ಕಾರು ಅಪಘಾತಗೊಂಡು ಹೊತ್ತಿ ಉರಿದ‌‌ ಪ್ರಕರಣಕ್ಕೆ ಟ್ವಿಸ್ಟ್​​ ಸಿಕ್ಕಿದ್ದು, ದಂಪತಿಗಳ ಮೇಲೆ ಹಲ್ಲೆ ಮಾಡಿರುವ ನಾಲ್ವರ ಗ್ಯಾಂಗ್​​ 35 ಗ್ರಾಂ ಬಂಗಾರದ ಮಾಂಗಲ್ಯ ಸರ, ಮನೆ ಖಾಲಿ ಮಾಡಿದ ಅಡ್ವನ್ಸ್ ಹಣ 4 ಲಕ್ಷ ರೂ. ದರೋಡೆ ಮಾಡಿದ್ದಾರೆ. ಚೀರಾಟ ಕೇಳಿ ಸ್ಥಳಿಯರು ಆಗಮಿಸುತ್ತಿದ್ದಂತೆ ನಾಲ್ವರು ಪರಾರಿಯಾಗಿದ್ದಾರೆ. ತಾವು ಬಂದಿದ್ದ‌ ಕಾರಿನಲ್ಲಿ ಅತ್ಯಂತ ವೇಗವಾಗಿ ನಾಲ್ವರು ಪರಾರಿಯಾಗಿದ್ದು, ದೊಡ್ಡ ಗಂಗವಾಡಿ ಬಳಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ.

ಮನೆ ಖಾಲಿ ಮಾಡಿ ಇನ್ನೊಂದು ಮನೆಗೆ ದಂಪತಿ ತೆರಳುತ್ತಿದ್ದರು. ರಾಮನಗರದ ಮಂಜುನಾಥ ನಗರದಿಂದ ದೊಡ್ಡ ಹೊಂಬೇಗೌಡ ಗ್ರಾಮಕ್ಕೆ ಮನೆ ಶಿಫ್ಟ್ ಮಾಡಲಾಗುತ್ತಿತ್ತು. ಈ ವೇಳೆ ಮನೆ ಸಾಮಾಗ್ರಿಗಳ ಜೊತೆ ಹಿಂದೆ ಕಾರಿನಲ್ಲಿ ದಂಪತಿ ಹೊರಟಿದ್ದರು.

ರವಿಕುಮಾರ್, ಪತ್ನಿ ಪ್ರಮೀಳಾ, ಅತ್ತೆ ಲಕ್ಷ್ಮಮ್ಮ ಕಾರಿನಲ್ಲಿ ತೆರಳುತ್ತಿದ್ದು, ಮೊದಲಿಗೆ ಸಾಮಾನುಗಳಿದ್ದ ಟೆಂಪೋಗೆ ಕಾರನ್ನು ಗ್ಯಾಂಗ್​ ಅಡ್ಡಗಟ್ಟಿದೆ. ವರ್ಣಾ ಕಾರಿನಿಂದ ಇಳಿದು ಬಂದು 4 ಜನರಿಂದ ಟೆಂಪೋ ಚಾಲಕನಿಗೆ ಥಳಿಸಿದ್ದಾರೆ. ಹಲ್ಲೆ ತಡೆಯಲು ಬಂದ ರವಿಕುಮಾರ್​ಗೂ ರಾಡಿನಿಂದ ಹಲ್ಲೆ ಮಾಡಲಾಗಿದೆ. ಪತಿಯನ್ನು ಬಿಡಿಸಲು ಬಂದ ಪತ್ನಿ ಪ್ರಮಿಳಾ ಮೇಲೆಯೂ ಹಲ್ಲೆ ಮಾಡಿದ್ದಾರೆ. ಪ್ರಮೀಲಾಗೆ ಕಾಲಿನಿಂದ ಹೊಟ್ಟೆಗೆ ಒದಿದ್ದಾರೆ.

ಇದನ್ನೂ ಓದಿ: ರಾಮನಗರ: ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿ ಕಾರು ಚಾಲನೆ, ಪಲ್ಟಿಯಾಗಿ ಹೊತ್ತಿ ಉರಿದ ಕಾರು

ಪ್ರಮೀಳಾರನ್ನು ಕೆಳಗೆ ಬೀಳಿಸಿ 35 ಗ್ರಾಂ ಬಂಗಾರದ ಮಾಂಗಲ್ಯ ಸರ ಕಿತ್ತುಕೊಂಡಿದ್ದಾರೆ. ಇಬ್ಬರು ಚಾಲಕರನ್ನು ವಯರ್​ನಿಂದ ಕುತ್ತಿಗೆಗೆ ಬಿಗಿದು ದರದರನೆ‌ ಎಳೆದು ಹಾಕಿದ್ದಾರೆ. ಚೀರಾಟ ಕೇಳಿ ಸ್ಥಳಿಯರು ಆಗಮಿಸುತ್ತಿದ್ದಂತೆ ನಾಲ್ವರು ಪರಾರಿಯಾಗಿದ್ದಾರೆ. ಅಪಘಾತ ಆಗಿರಬಹುದೆಂದು ನಾಲ್ವರ ರಕ್ಷಣೆಗೆ ಗ್ರಾಮಸ್ಥರು ಧಾವಿಸಿದ್ದಾರೆ. ನಂತರ ಹಿಂಬಾಲಿಸಿಕೊಂಡ ಬಂದ ಹಲ್ಲೆಗೊಳಗಾದ ಟೆಂಪೋ‌ ಡ್ರೈವರ್ ಅಜರ್ ಪಾಷಾ, ದಂಪತಿ ದರೋಡೆ ಮಾಡಿರುವ ಸಂಗತಿ ಸ್ಥಳೀಯರಿಗೆ ತಿಳಿಸಿದ್ದಾರೆ. ದರೋಡೆ ಸುದ್ದಿ ಕೇಳಿ ಗ್ರಾಮಸ್ಥರು ಸಿಟ್ಟಾಗಿದ್ದು, ಅಪಘಾತ ಮಾಡಿ ಏನೂ ಗೊತ್ತಿಲ್ಲದವರಂತ್ತಿದ್ದ ದರೋಡೆ ಕೋರರಿಗೆ ಥಳಿಸಿದ್ದಾರೆ. ಬಳಿಕ ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.

ಇದನ್ನೂ ಓದಿ: ರಾಮನಗರ: ಅನ್ನಭಾಗ್ಯ ಅಕ್ಕಿ ಕಳವು ಪ್ರಕರಣ; ಸಿಕ್ಕಿಬಿದ್ದ ಕಳ್ಳ ಯಾರು ಗೊತ್ತಾ?

ಹಲೆಗೊಳಗಾದವರನ್ನು ರಾಮನಗರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಒಟ್ಟು ಮೂವರನ್ನು ಹಿಡಿದಿರೋ ರಾಮನಗರ ಗ್ರಾಮಾಂತರ ಪೊಲೀಸರು ಇನ್ನೊಬ್ಬನಿಗಾಗಿ ಹುಡುಕಾಟ ನಡೆಸಿದ್ದಾರೆ. ಘಟನೆಯಿಂದಾಗಿ ದಂಪತಿ ರವಿಕುಮಾರ್ ಮತ್ತು ಪತ್ನಿ ಪ್ರಮೀಳಾ ಶಾಕ್​ನಲ್ಲಿದ್ದಾರೆ. ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ತಾವರಕೆರೆಯಲ್ಲಿ ಮರದ ವ್ಯಾಪಾರಿಯಾಗಿರುವ ಲೋಹಿತ್​ ತಮ್ಮ ಕಾರು ತೆಗದುಕೊಂಡು ದೊಡ್ಡಗಂಗವಾಡಿಯ ಸಂಜು ಜೊತೆ ವ್ಯವಹಾರಕ್ಕೆ ಬಂದಿದ್ದಾರೆ. ಮರದ ವ್ಯಾಪಾರಕ್ಕೆ ಲೋಹಿತ್​​ನನ್ನು ದೊಡ್ಡಗಂಗವಾಡಿ ನಿವಾಸಿ ಸಂಜು ಕರೆಸಿದ್ದಾನೆ. ಇದೇ ವೇಳೆ ಬೆಂಗಳೂರಿನಿಂದ ಪಾರ್ಟಿ ಮಾಡಲು ಬಂದಿದ್ದ ಸಂಜು ಫ್ರಂಡ್ಸ್​​ಗೆ ನಿನ್ನ ಕಾರು ಕೊಡು ಎಂದಿದ್ದ ಸಂಜು, ಕಾರು ತೆಗೆದುಕೊಂಡ ಹೋದ ಸಂಜು ಸ್ನೇಹಿತರಿಂದ ದಂಪತಿಗಳ ಮೇಲೆ ಹಲ್ಲೆ ದರೋಡೆ ಮಾಡಿದ್ದಾರೆ. ಲೋಹಿತ್ ಹಾಗೂ ಸಂಜು ನನ್ನ ಗ್ರಾಮಸ್ಥರು ಥಳಿಸಿದ್ದು, ಇಬ್ಬರನ್ನು ಹಿಡಿದು ತಂದು ಠಾಣೆಗೆ ಒಪ್ಪಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:27 pm, Fri, 24 November 23