ಬಿಜೆಪಿ‌ ಶಾಸಕನ ವಿರುದ್ದ ನಾಲಿಗೆ ಹರಿಬಿಟ್ಟವನನ್ನ ರಸ್ತೆ ಮೇಲೆ ಓಡಾಡಲು ಬಿಡ್ಬೇಡಿ: ಕಿಡಿಹೊತ್ತಿಸಿದ ವಿಜಯೇಂದ್ರ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 18, 2024 | 9:37 PM

ಇತ್ತೀಚೆಗೆ ಹುಮನಾಬಾದ್ ಬಿಜೆಪಿ ಶಾಸಕ ಸಿದ್ದು ಪಾಟೀಲ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ್ ನಾಲಿಗೆ ಹರಿಬಿಟ್ಟಿದ್ದರು. ಇದಕ್ಕೆ ಟಕ್ಕರ್ ಕೊಟ್ಟಿರುವ ಬಿಜೆಪಿ‌ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ‘ ಬಿಜೆಪಿ‌ ಶಾಸಕನ ವಿರುದ್ದ ನಾಲಿಗೆ ಹರಿಬಿಟ್ಟವನನ್ನಾ ರಸ್ತೆ ಮೇಲೆ ಓಡಾಡೋಕೆ ಬಿಡಬೇಡಿ ಎಂದು ಕಿಡಿಕಾರಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

ಬಿಜೆಪಿ‌ ಶಾಸಕನ ವಿರುದ್ದ ನಾಲಿಗೆ ಹರಿಬಿಟ್ಟವನನ್ನ ರಸ್ತೆ ಮೇಲೆ ಓಡಾಡಲು ಬಿಡ್ಬೇಡಿ: ಕಿಡಿಹೊತ್ತಿಸಿದ ವಿಜಯೇಂದ್ರ
ಬಿವೈ ವಿಜಯೇಂದ್ರ
Follow us on

ಬೀದರ್, ಸೆ.18: ಬಿಜೆಪಿ‌ ಶಾಸಕನ ವಿರುದ್ದ ನಾಲಿಗೆ ಹರಿಬಿಟ್ಟವನನ್ನಾ ರಸ್ತೆ ಮೇಲೆ ಓಡಾಡೋಕೆ ಬಿಡಬೇಡಿ ಎಂದು ಬಿಜೆಪಿ‌ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(BY Vijayendra)ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಇಂದು(ಬುಧವಾರ) ಬೀದರ್‌ನ ಹುಮ್ನಾಬಾದ್ ತಾಲೂಕಿನ ಹುಡಗಿ ಗ್ರಾಮದಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿದ ಅವರು, ‘ ಹೆಸರು ಪ್ರಸ್ತಾಪಿಸದೆ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಸಹೋದರ ಹಾಗೂ ಕಾಂಗ್ರೆಸ್ ಎಮ್‌ಎಲ್‌ಸಿ ಚಂದ್ರಶೇಖರ್ ಪಾಟೀಲ್ ವಿರುದ್ದ ಏಕವಚನದಲ್ಲೆ ಹರಿಹಾಯ್ದಿದ್ದಾರೆ.

ಹೆಸರು ಹೇಳದೆ ಕಾಂಗ್ರೆಸ್ ಎಂಎಲ್‌ಸಿ ಚಂದ್ರಶೇಖರ್ ಪಾಟೀಲ್ ವಿರುದ್ಧ ವಿಜಯೇಂದ್ರ‌ ಕಿಡಿ

ಆತ ಅಧಿಕಾರ ಶಾಶ್ವತ ಎನ್ನುವ ದುರಹಂಕಾರದಲ್ಲಿ ಮಾತನಾಡಿದ್ದಾನೆ. ಅಧಿಕಾರ ಶಾಶ್ವತ ಎನ್ನುವ ಭ್ರಮೆಯಲ್ಲಿದ್ದಂತೆ ಕಾಣಿಸುತ್ತದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸುತ್ತೇನೆ. ನಮ್ಮ ಕಾರ್ಯಕರ್ತರೇನು ಬಳೆ ತೊಟ್ಟುಕೊಂಡು ನಿಂತಿಲ್ಲ. ಅಧಿಕಾರ ಶಾಶ್ವತ ಅಲ್ಲ ಎನ್ನುವುದನ್ನು ನೆನಪು ಮಾಡಿಕೊಡಬೇಕು. ದುರಹಂಕಾರದಲ್ಲಿ‌ ಮಾತನಾಡಿದವನಿಗೆ ಮುಂದಿನ ದಿನಗಳಲ್ಲಿ ಉತ್ತರ ಕೊಡೋಣ ಎಂದರು.

ಇದನ್ನೂ ಓದಿ:ವಿಜಯೇಂದ್ರ ಭ್ರಷ್ಟ, ಆತನ ನಾಯಕತ್ವಕ್ಕೆ ನನ್ನ ವಿರೋಧ; ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧವೇ ರಮೇಶ್ ಜಾರಕಿಹೊಳಿ ಕಿಡಿ

ಅಷ್ಟೇ ಅಲ್ಲ, ಬಿಜೆಪಿ ಕಾರ್ಯಕರ್ತರು ಅಧಿಕಾರ ಇಲ್ಲದೇ ಇರುವಾಗಲೇ ಹೆದರಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ. ಇಂತಹ ಪುಡಾರಿಗಳಿಗೆಲ್ಲ ನಾವು ಹೆದರಲ್ಲ. ಹೆಸರು ಹೇಳದೆ ಕಾಂಗ್ರೆಸ್ ಎಮ್‌ಎಲ್‌ಸಿ ಚಂದ್ರಶೇಖರ್ ಪಾಟೀಲ್ ವಿರುದ್ಧ ಕಿಡಿಕಾರಿದರು.

ಸೆ‌.7ರಂದು ನೂತನ ಸಂಸದರ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಹುಮನಾಬಾದ್ ಶಾಸಕ ಸಿದ್ದು ಪಾಟೀಲ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ್ ನಾಲಿಗೆ ಹರಿಬಿಟ್ಟಿದ್ದರು. ‘ಅವನು ಏನಾದರೂ ಮಾತಾಡಿದರೆ ನಾಲಿಗೆ ಕತ್ತರಿತ್ತೇನೆ, ಸ್ವಲ್ಪ ಸಮಯ ಕೊಡ್ರಿ. ಅವನಿಗೆ ಗಣೇಶನ ಸೊಂಡಿಲಿನಿಂದ ಬೀಸಾಕುತ್ತೇನೆಂದು ಸಿದ್ದು ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಹೆಸರು ಹೇಳದೆ ಕಾಂಗ್ರೆಸ್ ಎಂಎಲ್‌ಸಿ ಚಂದ್ರಶೇಖರ್ ಪಾಟೀಲ್ ವಿರುದ್ಧ ವಿಜಯೇಂದ್ರ‌ ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ