ಕೇಸರಿ ಪಡೆಗೆ ಕ್ಯಾರೆ ಎನ್ನದ ಈಶ್ವರಪ್ಪ..ಶಿವಮೊಗ್ಗದಲ್ಲಿ ಶಕ್ತಿ ಪ್ರದರ್ಶನ: ಅಪ್ಪ-ಮಕ್ಕಳ ವಿರುದ್ಧ ವಾಗ್ದಾಳಿ

ನಿಮ್ಮ ಒಬ್ಬ ಮಗ ಎಂಪಿ, ಒಬ್ಬ ಎಂಎಲ್‌ಎ ಅವನೇ ರಾಜ್ಯಾಧ್ಯಕ್ಷ, ಕರ್ನಾಟಕದಲ್ಲಿ ಇವರೇ ಬೆಳಯಬೇಕು. ಪುತ್ರನಿಗೆ ಟಿಕೆಟ್ ಕೈತಪ್ಪಿದ ಹಿನ್ನಲೆ ಪಕ್ಷೇತರವಾಗಿ ಕಣಕ್ಕಿಳಿದಿರುವ ಕೆಎಸ್ ಈಶ್ವರಪ್ಪ (K. S. Eshwarappa) ಅವರು, ಇಂದು(ಏ.07) ಶಿವಮೊಗ್ಗ(Shivamogga)ದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಈ ವೇಳೆ ಅಪ್ಪ-ಮಕ್ಕಳ ವಿರುದ್ಧ ವಾಗ್ದಾಳಿ ನಡೆಸಿದರು.

ಕೇಸರಿ ಪಡೆಗೆ ಕ್ಯಾರೆ ಎನ್ನದ ಈಶ್ವರಪ್ಪ..ಶಿವಮೊಗ್ಗದಲ್ಲಿ ಶಕ್ತಿ ಪ್ರದರ್ಶನ: ಅಪ್ಪ-ಮಕ್ಕಳ ವಿರುದ್ಧ ವಾಗ್ದಾಳಿ
ಕೆಎಸ್​ ಈಶ್ವರಪ್ಪ
Follow us
Basavaraj Yaraganavi
| Updated By: ಕಿರಣ್ ಹನುಮಂತ್​ ಮಾದಾರ್

Updated on:Apr 07, 2024 | 2:32 PM

ಶಿವಮೊಗ್ಗ, ಏ.07: ಪುತ್ರನಿಗೆ ಟಿಕೆಟ್ ಕೈತಪ್ಪಿದ ಹಿನ್ನಲೆ ಪಕ್ಷೇತರವಾಗಿ ಕಣಕ್ಕಿಳಿದಿರುವ ಕೆಎಸ್ ಈಶ್ವರಪ್ಪ (K. S. Eshwarappa) ಅವರು ಶಿವಮೊಗ್ಗ(Shivamogga)ದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಶಿವಮೊಗ್ಗ ನಗರದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘​ಧರ್ಮದ ಪರವಾಗಿರುವ ಈಶ್ವರಪ್ಪ ಗೆಲ್ತಾರೆ. ಶಿವಮೊಗ್ಗದಲ್ಲಿ ನಾನು ಯಾರಿಗೂ ಅನ್ಯಾಯ ಮಾಡಿಲ್ಲ ಎಂದು ಬಿಎಸ್‌ವೈ ಕುಟುಂಬದ ವಿರುದ್ದ ಮತ್ತೆ ವಾಗ್ದಾಳಿ ನಡೆಸಿದರು.

ನಿಮ್ಮ ಒಬ್ಬ ಮಗ ಎಂಪಿ, ಒಬ್ಬ ಎಂಎಲ್‌ಎ ಅವನೇ ರಾಜ್ಯಾಧ್ಯಕ್ಷ, ಕರ್ನಾಟಕದಲ್ಲಿ ಇವರೇ ಬೆಳಯಬೇಕು. ಅಪ್ಪಿತಪ್ಪಿ ಬಿಜೆಪಿ ಅಥವಾ ಕಮಲಕ್ಕೆ ಮತ ಹಾಕಬಿಟ್ಟೀರಾ?, ಚಿಹ್ನೆ ಯಾವುದು ಎಂದು ಏಪ್ರೀಲ್ 19ಕ್ಕೆ ಗೊತ್ತಾಗುತ್ತದೆ. ಈ ಮೂಲಕ ಈಶ್ವರಪ್ಪನ ಗುರುತಿಗೆ ಮತ ಹಾಕುವಂತೆ ಕೋರಿದ್ದಾರೆ. ಶಿವಮೊಗ್ಗದಲ್ಲಿ ಯಾರು ಲಿಂಗಾಯತರು ಇಲ್ವಾ?, ಎಲ್ಲಾ ಲಿಂಗಾಯತರು ಹೇಳುತ್ತಿದ್ದಾರೆ ನನಗೆ ಮತಹಾಕುತ್ತಾರಂತೆ. ಶಿವಮೊಗ್ಗದಲ್ಲಿ ಕಾಂಗ್ರೆಸ್ ವೀಕ್ ಅಭ್ಯರ್ಥಿ ಹಾಕಿದ್ದಾರೆ. ನಾಲ್ಕು ಪಟ್ಟು ಹಣ ಖರ್ಚು ಮಾಡಿದ್ರು ವಿಜಯೇಂದ್ರ ಗೆದಿದ್ದು 10ಸಾವಿರ ಮತದಿಂದ, ವಿಧಾನಸಭಾ ಚುನಾವಣೆಯಲ್ಲಿ ವಿಜಯೇಂದ್ರ ಹೊಂದಾಣಿಕೆಯಿಂದಲೇ ಗೆಲುವು ಕಂಡಿದ್ದಾರೆ. ಈ ಭಾರಿ ಅಪ್ಪ-ಮಕ್ಕಳನ್ನ ಸೋಲಿಸುವುದೇ ನನ್ನ ಗುರಿ ಎಂದಿ ಕಿಡಿಕಾರಿದರು.

ಇದನ್ನೂ ಓದಿ:ಚುನಾವಣಾ ಪ್ರಚಾರ ಮತ್ತು ಅನಧಿಕೃತವಾಗಿ ಈಶ್ವರಪ್ಪ ಪ್ರಧಾನಿ ಮೋದಿಯವರ ಫೋಟೋ ಬಳಸುವಂತಿಲ್ಲ: ಆರ್ ಅಶೋಕ

ಇಂದೇ ಚುನಾವಣೆ ನಡೆದ್ರೆ ಒಂದು ಲಕ್ಷ ಅಂತರದಿಂದ ಗೆಲ್ತೀನಿ

ಅಧರ್ಮ ನಾಶವಾಗುತ್ತೆ, ಧರ್ಮದ ಈಶ್ವರಪ್ಪ ಗೆಲ್ಲುತ್ತಾರೆ. ಯಡಿಯೂರಪ್ಪ ಮಕ್ಕಳು ಏನ್ ಆಟ ಆಡ್ತಾರೋ ಆಡಲಿ. ಇನ್ನೂ ಒಂದು ತಿಂಗಳು ಚುನಾವಣೆ ಇದೆ. ಇಂದೇ ಚುನಾವಣೆ ನಡೆದರೆ ಒಂದು ಲಕ್ಷ ಅಂತರದಿಂದ ಗೆಲ್ತೀನಿ. ಇನ್ನು ಮುಂದೆ ಪ್ರತಿ ಮನೆ ಮನಗೆ ಹೋಗಿ ಮತ ಕೇಳುವ ಕೆಲಸ ಮಾಡಿ. ಜೆಡಿಎಸ್‌ ಮುಖಂಡರು ಸಹ ನನ್ನ ಜೊತೆ ಬರ್ತಾರೆ ಎಂದರು.

ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾಕೆ ನನಗೆ ಟಿಕೆಟ್ ಕೊಟ್ಟಿಲ್ಲ ಎಂದು ಯಡಿಯೂರಪ್ಪನವರೇ ಹೇಳಿ, ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ನಾನು ಬಿಜೆಪಿ ಬಿಟ್ಟು ಹೋಗಿಲ್ಲ. ರಾಜ್ಯದಲ್ಲಿ ನನ್ನ ಸ್ಪರ್ಧೆ ಮೂಲಕ ಚರ್ಚೆ ನಡೆಯುತ್ತಿದೆ.  ಮಗನಿಗೆ ಟಿಕೆಟ್​ ನೀಡೋದಾಗಿ ಹೇಳಿ ಬಿಎಸ್​ವೈ ಮೋಸ ಮಾಡಿದ್ದಾರೆ.

ಶಿವಮೊಗ್ಗ ನಾವು ನಿಮಗೆ ಮತ ಕೊಡ್ತೇವೆ ಅಂತಾ ಮತದಾರರು ಹೇಳ್ತಿದ್ದಾರೆ

ಶಿವಮೊಗ್ಗ ‌ಲೋಕಸಭಾ ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೇನೆ. ನಿಮಗೆ ಅನ್ಯಾಯ ಆಗಿದೆ. ಬಿಜೆಪಿ ಅಪ್ಪ ಮಕ್ಕಳ ಕೈಯಲ್ಲಿದೆ. ನಾವು ನಿಮಗೆ ಮತ ಕೊಡ್ತೇವೆ ಎಂದು ಮತದಾರರು ಹೇಳುತ್ತಿದ್ದಾರೆ. ಬೂತ್ ಮಟ್ಟದ ಕಾರ್ಯಕ್ರಮ ಯಶಸ್ವಿಯಾಗಿದೆ. ಇನ್ನು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡು, ಎಲ್ಲಾ ಅಧಿಕಾರ ಯಡಿಯೂರಪ್ಪ ಮಕ್ಕಳ ಕೈಯಲ್ಲಿ ಇರಬೇಕಾ?, ಜನರ ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಎಲ್ಲರ ನೋವಿಗೆ ಪರಿಹಾರ ಆಗುತ್ತದೆ.

ಮೋದಿ ವಿಶ್ವ ನಾಯಕ ಮೋದಿ ಪೋಟೋ ಬಳಸಿಕೊಳ್ಳಬಾರದು ಎಂದು ಎಲ್ಲಿಯೂ ಇಲ್ಲ, ಮೋದಿ ನನ್ನ ಹೃದಯದಲ್ಲಿ ‌ಇದ್ದಾರೆ. ಇನ್ನು ಇದೇ ವೇಳೆ ‘ರಾಘವೇಂದ್ರ ಎರಡು ಲಕ್ಷ ಅಂತರದಲ್ಲಿ ಗೆಲ್ತಾರೆ, ಈಗಲೂ ಕಾಲ ಮಿಂಚಿಲ್ಲ, ಈಶ್ವರಪ್ಪ ಯೋಚನೆ ಮಾಡಲಿ ಎಂಬ ವಿಜಯೇಂದ್ರ‌ ಹೇಳಿಕೆ ವಿಚಾರ, ‘ಈ ವಿಷಯ ನಿಮ್ಮ ಅಣ್ಣನಿಗೆ ಏಕೆ ಹೇಳಲ್ಲ, ತಾಕತ್ ಇಲ್ವಾ?, ಏನು ನೀವೆ ಗೂಟ ಹೊಡ್ಕೊಂಡು ಇರಬೇಕಾ. ನಿಮ್ಮಣ್ಣ ಸೋಲುತ್ತಾನೆ ಎಂದು ಭಯನಾ, ನಿಮ್ಮಣ್ಣನಿಗೆ ಹೇಳು ಈಶ್ವರಪ್ಪ ಗೆಲ್ಲಲ್ಲಿ ಬಿಡು, ನೀನು ವಾಪಸ್ ತೆಗೆದುಕೋ ಎಂದರು.

ಇದನ್ನೂ ಓದಿ:ಈಶ್ವರಪ್ಪಗೆ ಮೋದಿ ಫೋಟೊ ಬಳಕೆ ಮಾಡುವ ಅಧಿಕಾರವಿಲ್ಲ: ಆರ್. ಅಶೋಕ್

ನಾನು 3 ಲಕ್ಷ ಅಂತರದಲ್ಲಿ ಗೆಲ್ಲುತ್ತೇನೆ

ರಾಘವೇಂದ್ರ ಅವರಿಗೆ ಹೇಳು, ನಾನು ಈಗಲೂ ಕೂಡಾ ಬಿಜೆಪಿ. ನಾನು ಸ್ಪರ್ಧೆ ಮಾಡಲು ನಿರ್ಧರಿಸಿ ಆಗಿದೆ. ನಾನು ಸ್ಪರ್ಧೆ ಮಾಡಿದರೆ ಬಿಜೆಪಿಯವರು ಏನು ಮಾಡಬಹುದು ಉಚ್ಚಾಟನೆ ಮಾಡಬಹುದು, ಅಷ್ಟೇ ತಾನೇ‌ ಇನ್ನೇನೂ ಮಾಡಲು ಸಾಧ್ಯ. ನಾನೇನು ಪಕ್ಷ ಬಿಟ್ಟು ಹೋಗಿದ್ದೇನಾ?, ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿಗೆ ಹೋಗಿದ್ದರು. ಜಗದೀಶ್ ಶೆಟ್ಟರ್ ಕಾಂಗ್ರೆಸ್ ಗೆ ಹೋಗಿ ಮತ್ತೆ ಪಕ್ಷಕ್ಕೆ ಸೇರಿ ಟಿಕೆಟ್ ತೆಗೆದುಕೊಂಡಿದ್ದಾರೆ. ನಾನೇನು ಹಾಗೆ ಮಾಡಿದ್ದೇನಾ?, ನಾನು ಈ ಬಾರಿ 3 ಲಕ್ಷ ಅಂತರದಲ್ಲಿ ಗೆಲ್ಲುತ್ತೇನೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:13 pm, Sun, 7 April 24

ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ