ಮುಜರಾಯಿ ದೇವಸ್ಥಾನದ ಗೋಶಾಲೆಗೆ ಕೋಟ್ಯಂತರ ರೂ ಕಾಣಿಕೆ ಬರುತ್ತದೆ, ಆದರೆ ಗೋವುಗಳು ಬಡಕಲು ಬಡಕಲು! ಯಾಕೋ? ಹಣ ಎಲ್ಲಿ ಹೋಗುತ್ತಿದೆಯೋ?

| Updated By: ಸಾಧು ಶ್ರೀನಾಥ್​

Updated on: Mar 21, 2024 | 4:50 PM

ಇಲ್ಲಿನ ಬಡಕಲು ಹಸುಗಳ ಪರಿಸ್ಥಿತಿಯನ್ನ ಕಂಡ ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಗೋವುಗಳನ್ನ ಹಿಂದೂ ಸಮಾಜದಲ್ಲಿ ದೇವರಂತೆ ಪೂಜೆ ಮಾಡುತ್ತೇವೆ. ಅವುಗಳನ್ನ ರಕ್ಷಣೆ ಮಾಡುತ್ತೇವೆ ಅಂತಹ ಗೋವುಗಳ ನರಕಯಾತನೆ ನಮಗೆ ನೋಡಲು ಆಗುತ್ತಿಲ್ಲ ಎಂದು ದೇವಸ್ಥಾನಕ್ಕೆ ಬರುವ ಭಕ್ತರು ಮರುಕ ವ್ಯಕ್ತಪಡಿಸುತ್ತಾರೆ. ಈ ದೇವಸ್ಥಾನಕ್ಕೆ ವರ್ಷಕ್ಕೆ ಒಂದು ಕೋಟಿ ರೂಪಾಯಿಗೂ ಅಧಿಕ ಭಕ್ತರು ಕಾಣಿಕೆ ರೂಪದಲ್ಲಿ ಹಣ ನೀಡುತ್ತಾರೆ. ಅದರ ಒಂದು ಭಾಗವನ್ನಷ್ಟೇ ಗೋವುಗಳ ಹಸಿ ಮೇವಿಗೆ ಬಳಕೆ ಮಾಡಿದರೂ ಸಾಕು ಗೋವು ಮೈತುಂಬಿಕೊಂಡಿರುತ್ತವೆ. ಆದರೆ ಆ ಹಣ ಎಲ್ಲಿ ಹೋಗುತ್ತಿದೆಯೋ ಗೊತ್ತಾಗುತ್ತಿಲ್ಲ!?

ಮುಜರಾಯಿ ದೇವಸ್ಥಾನದ ಗೋಶಾಲೆಗೆ ಕೋಟ್ಯಂತರ ರೂ ಕಾಣಿಕೆ ಬರುತ್ತದೆ, ಆದರೆ ಗೋವುಗಳು ಬಡಕಲು ಬಡಕಲು! ಯಾಕೋ? ಹಣ ಎಲ್ಲಿ ಹೋಗುತ್ತಿದೆಯೋ?
ಮುಜರಾಯಿ ದೇವಸ್ಥಾನದ ಗೋಶಾಲೆಗೆ ಕೋಟ್ಯಂತರ ರೂ ಕಾಣಿಕೆ ಬರುತ್ತದೆ, ಆದರೆ ಗೋವುಗಳು ಬಡಕಲು
Follow us on

ವರ್ಷಕ್ಕೆ ನೂರಾರು ಗೋವುಗಳನ್ನ ಭಕ್ತರು ಆ ದೇವಸ್ಥಾನಕ್ಕೆ ಕೊಡುತ್ತಾರೆ. ಭಕ್ತರು ಹರಕೆ ರೂಪದಲ್ಲಿ ಗೋವುಗಳನ್ನ ದೇವಸ್ಥಾನಕ್ಕೆ ಕೊಡುವುದು (Donation) ಇಲ್ಲಿ ರೂಢಿಯಲ್ಲಿದೆ. ಅಂತಹ ಹಸುಗಳ (Cows) ಪಾಲನೆ ಪೋಷಣೆ ಮಾಡುವ ಜವಾಬ್ದಾರಿ ಮುಜರಾಯಿ ಇಲಾಖೆಯ (Muzrai Department) ಅಧಿಕಾರಿಗಳ ಮೇಲಿದೆ. ಹರಕೆ ರೂಪದಲ್ಲಿ ದೇವಸ್ಥಾನಕ್ಕೆ ಕೊಟ್ಟಿರುವ ಗೋವುಗಳಿಗೆ ಮೇವು, ಕುಡಿಯುವ ನೀರಿನ ಸಮಸ್ಯೆಯಿದೆ. ಆದರೂ ಗೋವುಗಳ ಮೂಕರೋದನೆ ಯಾರಿಗೂ ಕೇಳಿಸುತ್ತಿಲ್ಲ. ಅವ್ಯವಸ್ಥೆಯ ಆಗರವಾದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರೋ ದೇವಸ್ಥಾನದ ಗೋ ಶಾಲೆಗಳು… ಸರಿಯಾದ ಸಮಯಕ್ಕೆ ‌ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ, ಹೀಗಾಗಿ ಸೊರಗಿದ ಜಾನುವಾರು. ಸರಕಾರದ ಸುಪರ್ದಿಯಲ್ಲಿರುವ ದೇವಸ್ಥಾನದಲ್ಲಿನ ಗೋ ಶಾಲೆಗಳಲ್ಲಿ (Goshala) ಗೋವುಗಳ ರಕ್ಷಣೆ. ಹೌದು ಬೀದರ್ ಜಿಲ್ಲೆಯಲ್ಲಿ (Bidar) ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಹತ್ತಕ್ಕೂ ಹೆಚ್ಚು ದೇವಸ್ಥಾನಗಳು ಬರುತ್ತವೆ. ಈ ಪೈಕಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಾಪುರ ಗ್ರಾಮದಲ್ಲಿರುವ ಸುಪ್ರಸಿದ್ಧ ಮೈಲಾರ ಮಲ್ಲಣ್ಣ ದೇವಸ್ಥಾನ ಬೀದರ್ ತಾಲೂಕಿನ ಹೊನ್ನೀಕೇರಿ ಸಿದ್ಧೇಶ್ವರ ದೇವಸ್ಥಾನ ಹೆಚ್ಚು ಪ್ರಸಿದ್ಧಿಯನ್ನ ಪಡೆದುಕೊಂಡಿವೆ.

ಈ ದೇವಸ್ಥಾನಕ್ಕೆ ಪ್ರತಿ ವರ್ಷವೂ ನೂರಾರು ಸಂಖ್ಯೆಯಲ್ಲಿ ಗೋವುಗಳನ್ನ ಭಕ್ತರು ಹರಕೆಯ ರೂಪದಲ್ಲಿ ಇಲ್ಲಿಗೆ ತಂದು ಕೊಡುತ್ತಾರೆ. ಇಲ್ಲಿಗೆ ಭಕ್ತರು ಕೊಟ್ಟಿರುವ ಆಕಳು, ಕರುಗಳನ್ನ ಆರೈಕೆ ಮಾಡಬೇಕಾದ ಜವಾಬ್ದಾರಿ ಮುಜರಾಯಿ ಇಲಾಕೆಯ ಅಧಿಕಾರಿಗಳಿಗೆ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯವರಿಗಿದೆ.

ಆದರೆ ದೇವಸ್ಥಾನಕ್ಕೆ ಪ್ರತಿ ವರ್ಷವೂ ದೇಣಿಗೆ ರೂಪದಲ್ಲಿ ಲಕ್ಷಾಂತರ ರೂಪಾಯಿ ಹಣ ಬರುತ್ತದೆ. ಆ ಹಣವನ್ನ ಹೇಗೆ ಖರ್ಚುಮಾಡಬೇಕು ಅನ್ನೋದರಲ್ಲಿಯೇ ಮುಜರಾಯಿ ಇಲಾಖೆಯ ಅಧಿಕಾರಿಗಳು ಇದ್ದಾರೆಯೇ ಹೊರತು ಇಲ್ಲಿನ ದೇವಸ್ಥಾನದಲ್ಲಿರುವ ಗೋ ಶಾಲೆಯ ಗೋವುಗಳಿಗೆ ಮೇವು, ನೀರು, ಹಾಗೂ ಅವುಗಳು ಖಾಯಿಲೆ ಬಿದ್ದರೆ ಚಿಕಿತ್ಸೆ ಕೂಡಾ ಕೊಡಿಸುತ್ತಿಲ್ಲ.

ಇನ್ನು ಬೇಸಿಗೆಯ ಈ ಅವಧಿಯಲ್ಲಿ ಬೀದರ್ ನ ಕಾಡಿನಲ್ಲಿ ಹಸಿರು ಮಾಯವಾಗಿರುತ್ತದೆ. ಇಂತಹ ಸಮಯದಲ್ಲಿ ಮುಜರಾಯಿ ಇಲಾಖೆಯ ಅಧಿಕಾರಿಗಳು ದಿನಕ್ಕೆ ಒಂದು ಸಮಯವಾದರೂ ಇಲ್ಲಿನ ಗೋವುಗಳಿಗೆ ಹಸಿ ಮೇವನ್ನ ಹಾಕಬೇಕು. ಅದು ಇಲ್ಲಿ ಆಗುತ್ತಿಲ್ಲ. ಹೀಗಾಗಿ ಗೋವುಗಳು ಸೊರಗಿ ಹೋಗಿದ್ದು ಮುಜರಾಯಿ ಇಲಾಖೆಯ ಅಧಿಕಾರಿಗಳ ವಿರುದ್ಧ ಗೋಪ್ರಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಈ ಮಂದಿರದ ಆವರಣದಲ್ಲಿ ಮುಜರಾಯಿ ಇಲಾಖೆಯ ಕಾಯಂ ಗೋ ಶಾಲೆಗಳಿವೆ. 200 ಕ್ಕೂ ಅಧಿಕ ಗೋವುಗಳು ಇಲ್ಲಿವೆ, ಭಕ್ತರು ತಂದು ಬಿಡುವ ಹರಕೆಯ ಜಾನುವಾರಗಳನ್ನ ಹೊರತು ಪಡಿಸಿ ಕೆಲ ರೈತರು ಕೂಡಾ ಆಕಳುಗಳಿಗೆ ಮೇವು ಹಾಕಲು ಸಾಧ್ಯವಾಗದವರು ಕೂಡಾ ಇಲ್ಲಿ ಗೋವುಗಳನ್ನ ತಂದು ಬಿಟ್ಟಿದ್ದಾರೆ. ಇಲ್ಲಿನ ಆಕಳುಗಳಿಗೆ ಮೇವಿನ ಕೊರತೆಯಿಂದ ಜಾನುವಾರಗಳಿಗೆ ಬಂದಿರುವ ಖಾಯಿಲೆಯಿಂದ ಆಕಳು ಸಾವಿನ ಕದ ತಟ್ಟುತ್ತಿವೆ.

ಗೋವುಗಳ ಸಾವಿಗೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣ ಅನ್ನುವ ಮಾತುಗಳು ಕೂಡಾ ಕೇಳಿ ಬರುತ್ತಿದೆ. ಸುಮಾರು ದಿನಗಳಿಂದ ಆಕಳುಗಳು, ಕರುಗಳು ಒಂದೊಂದಾಗಿ ಸಾವನ್ನಪ್ಪುತ್ತಿದ್ದರೂ ಸಹ ಸಹಾಯಕ ಆಯಕ್ತರಾಗಲಿ, ತಹಶೀಲ್ದಾರ್ ಆಗಲಿ, ಜಿಲ್ಲಾಡಳಿತದ ಯಾವೊಬ್ಬ ಅಧಿಕಾರಿಯೂ ಬಂದು ಗೋವುಗಳ ಸಾವಿಗೆ ಕಾರಣ ತಿಳಿಯುವ ಮನಸ್ಸು ಮಾತ್ರ ಮಾಡುತ್ತಿಲ್ಲ.

ಹೊನ್ನಿಕೇರಿ ದೇವಸ್ಥಾನವೊಂದೇ ಅಲ್ಲ, ಬೀದರ್ ಜಿಲ್ಲೆಯ ಮೈಲಾರ ಮಲ್ಲಣ್ಣ ದೇವಸ್ಥಾನ, ಗೋ ಶಾಲೆಯೂ ಕೂಡಾ ಗೋವುಗಳ ಪರಿಸ್ಥಿತಿ ಹೇಳತೀರದಾಗಿದೆ. ಇಲ್ಲಿನ ಗೋವುಗಳ ಸ್ಥಿತಿಯನ್ನ ನೋಡಿದರೆ ಎಂಥವರ ಮನಸ್ಸು ಕೂಡಾ ಮರುಗದೇ ಇರಲಾರದು… ಎಲುಬುಗಳೇ ಕಾಣುವ ದೇಹ, ನೋವಿನಿಂದ ನರಳಾಡುತ್ತಿರುವ ಆಕಳು ಕರುಗಳು. ಇಲ್ಲಿನ ಪರಿಸ್ಥಿತಿಯನ್ನ ಕಂಡ ಭಕ್ತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ ಗೋವುಗಳನ್ನ ಹಿಂದೂ ಸಮಾಜದಲ್ಲಿ ದೇವರಂತೆ ಪೂಜೆ ಮಾಡುತ್ತೇವೆ. ಅವುಗಳನ್ನ ರಕ್ಷಣೆ ಮಾಡುತ್ತೇವೆ ಅಂತಹ ಗೋವುಗಳ ನರಕಯಾತನೆ ನಮಗೆ ನೋಡಲು ಆಗುತ್ತಿಲ್ಲ ಎಂದು ದೇವಸ್ಥಾನಕ್ಕೆ ಬರುವ ಭಕ್ತರು ಮರುಕ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ದೇವಸ್ಥಾನಕ್ಕೆ ವರ್ಷಕ್ಕೆ ಒಂದು ಕೋಟಿ ರೂಪಾಯಿಗೂ ಅಧಿಕ ಭಕ್ತರು ಕಾಣಿಕೆ ರೂಪದಲ್ಲಿ ಹಣ ಬರುತ್ತದೆ. ಅದರ ಒಂದು ಭಾಗವನ್ನಷ್ಟೇ ಗೋವುಗಳ ಹಸಿ ಮೇವಿಗೆ ಬಳಕೆ ಮಾಡಿದರೆ ಗೋವು ಮೈತುಂಬಿಕೊಂಡಿರುತ್ತವೆ. ಆದರೆ ಆ ಹಣ ಎಲ್ಲಿ ಹೋಗುತ್ತಿದೆಯೋ ಗೊತ್ತಾಗುತ್ತಿಲ್ಲ.

ಬೀದರ್ ಜಿಲ್ಲೆಯಲ್ಲಿ ಮುಜರಾಯಿ ಇಲಾಖೆಗೆ ಒಳಪಟ್ಟಿರುವ ದೇವಸ್ಥಾನದಲ್ಲಿ ಭಕ್ತರು ನೂರಾರು ಗೋವುಗಳನ್ನ ಹರಕೆ ರೂಪದಲ್ಲಿ ದೇವಸ್ಥಾನದಲ್ಲಿ ತಂದು ಬಿಡುತ್ತಿದ್ದಾರೆ. ಇಲ್ಲಿ ಬಿಟ್ಟಿರುವ ಗೋವುಗಳ ಲಾಲನೆ ಪಾಲನೆ ಮಾಡಬೇಕಾದ ಅಧಿಕಾರ ಮಜರಾಯಿ ಇಲಾಖೆಯ ಅಧಿಕಾರಿಗಳ ಮೇಲಿದೆ ಆದರೆ ಅವರು ನಮಗೂ ಅದಕ್ಕೂ ಸಂಬಂಧವೇ ಇಲ್ಲದವರಂತೆ ವರ್ತನೆ ಮಾಡುತ್ತಿದ್ದಾರೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಗೋವುಗಳ ರಕ್ಷಣೆ ಮಾಡಬೇಕಾಗಿದೆ. ಇಲ್ಲವಾದರೇ ಗೋ ಮಾತೆಯ ಶಾಪಕ್ಕೆ ಅಧಿಕಾರಿಗಳು ತುತ್ತಾಗುವುದರಲ್ಲಿ ಅನುಮಾನವೇ ಇಲ್ಲ.