AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕಿತ್ಸೆಗೆ ಬಂದ ಮಹಿಳೆ ಆಭರಣ ನಾಪತ್ತೆ ಆರೋಪ, ಆಸ್ಪತ್ರೆಗಳಲ್ಲಿ ನಡೀತಿದಿಯಾ ಕಳ್ಳತನ

ಬೀದರ್: ಅದು ಸರ್ಕಾರಿ ಆಸ್ಪತ್ರೆ. ಜನ ಅಲ್ಲಿದ್ದವರನ್ನ ದೇವರು ಅಂತಾ ನಂಬಿ ಚಿಕಿತ್ಸೆಗೆ ಹೋಗ್ತಾರೆ. ಆದ್ರೆ ಅವರು ಮಾಡ್ತಿದ್ದ ಕಳ್ಳ ಕೆಲಸ ಎಂತವರನ್ನೂ ಬೆಚ್ಚಿಬೀಳಿಸುತ್ತೆ. ಹೀಗೆ ಮಾಡಬಾರದ್ದನ್ನ ಮಾಡಿದ ಖದೀಮರು ಪೊಲೀಸರ ಅತಿಥಿಗಳಾಗಿದ್ದಾರೆ. ಚಿಕಿತ್ಸೆಗೆ ಬಂದ ಮಹಿಳೆ ಆಭರಣ ನಾಪತ್ತೆ..! ಅಂದಹಾಗೆ ಗಡಿ ಜಿಲ್ಲೆ ಬೀದರ್​ನ ಬ್ರಿಮ್ಸ್ ಸರ್ಕಾರಿ ಆಸ್ಪತ್ರೆ ಈಗಾಗಲೇ ನಾನಾ ಸಮಸ್ಯೆಗಳಿಂದ ನರಳುತ್ತಿದೆ. ಈ ಮಧ್ಯೆ ಮತ್ತೊಂದು ಸ್ಫೋಟಕ ಮಾಹಿತಿ ಬಯಲಾಗಿದ್ದು, ಆಸ್ಪತ್ರೆ ಸಿಬ್ಬಂದಿಯ ಕಳ್ಳಾಟವೂ ಬಯಲಾಗಿದೆ. ಚಿಕಿತ್ಸೆಗೆ ಅಂತಾ ಬರುವವರ ವಸ್ತುಗಳ ಮೇಲೆ […]

ಚಿಕಿತ್ಸೆಗೆ ಬಂದ ಮಹಿಳೆ ಆಭರಣ ನಾಪತ್ತೆ ಆರೋಪ, ಆಸ್ಪತ್ರೆಗಳಲ್ಲಿ ನಡೀತಿದಿಯಾ ಕಳ್ಳತನ
ಸಾಧು ಶ್ರೀನಾಥ್​
|

Updated on: Dec 29, 2019 | 7:12 AM

Share

ಬೀದರ್: ಅದು ಸರ್ಕಾರಿ ಆಸ್ಪತ್ರೆ. ಜನ ಅಲ್ಲಿದ್ದವರನ್ನ ದೇವರು ಅಂತಾ ನಂಬಿ ಚಿಕಿತ್ಸೆಗೆ ಹೋಗ್ತಾರೆ. ಆದ್ರೆ ಅವರು ಮಾಡ್ತಿದ್ದ ಕಳ್ಳ ಕೆಲಸ ಎಂತವರನ್ನೂ ಬೆಚ್ಚಿಬೀಳಿಸುತ್ತೆ. ಹೀಗೆ ಮಾಡಬಾರದ್ದನ್ನ ಮಾಡಿದ ಖದೀಮರು ಪೊಲೀಸರ ಅತಿಥಿಗಳಾಗಿದ್ದಾರೆ.

ಚಿಕಿತ್ಸೆಗೆ ಬಂದ ಮಹಿಳೆ ಆಭರಣ ನಾಪತ್ತೆ..! ಅಂದಹಾಗೆ ಗಡಿ ಜಿಲ್ಲೆ ಬೀದರ್​ನ ಬ್ರಿಮ್ಸ್ ಸರ್ಕಾರಿ ಆಸ್ಪತ್ರೆ ಈಗಾಗಲೇ ನಾನಾ ಸಮಸ್ಯೆಗಳಿಂದ ನರಳುತ್ತಿದೆ. ಈ ಮಧ್ಯೆ ಮತ್ತೊಂದು ಸ್ಫೋಟಕ ಮಾಹಿತಿ ಬಯಲಾಗಿದ್ದು, ಆಸ್ಪತ್ರೆ ಸಿಬ್ಬಂದಿಯ ಕಳ್ಳಾಟವೂ ಬಯಲಾಗಿದೆ. ಚಿಕಿತ್ಸೆಗೆ ಅಂತಾ ಬರುವವರ ವಸ್ತುಗಳ ಮೇಲೆ ಆಸ್ಪತ್ರೆ ಸಿಬ್ಬಂದಿ ಕಣ್ಣು ಬಿದ್ದಿದೆ. ಇದು ಬಯಲಾಗಿದ್ದು, ಸಕ್ಕರೆ ಕಾರ್ಖಾನೆಯಲ್ಲಿ ಗಾಯಗೊಂಡ ಮಹಿಳೆಯೊಬ್ರು ಆಸ್ಪತ್ರೆ ಸೇರಿದಾಗ. ಡಿಸೆಂಬರ್ 26 ರಂದು ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನಲ್ಲಿರುವ ಮಹಾತ್ಮಾ ಗಾಂಧಿ ಸಕ್ಕರೆ ಕಾರ್ಖಾನೆಯಲ್ಲಿ ಪಂಚಶೀಲಾ ಎಂಬ ಮಹಿಳೆ ತಲೆಗೆ ಪೆಟ್ಟು ಮಾಡಿಕೊಂಡಿದ್ದರು.

ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವಾಗ, ಸಿಟಿ ಸ್ಕ್ಯಾನ್​ಗೆ ಸೂಚಿಸಲಾಗಿತ್ತು. ಈ ವೇಳೆ ಮಹಿಳೆ ತನ್ನ ಮೈಮೇಲಿದ್ದ ಒಡವೆಯನ್ನ ಬಿಚ್ಚಿಟ್ಟಿದ್ದು. ಅದನ್ನ ವಾರ್ಡ್ ಬಾಯ್​ಗಳು ಕದ್ದಿದ್ದರಂತೆ. ಮಹಿಳೆ ಪ್ರಶ್ನಿಸಿದಾಗ ಆಭರಣ ಇರಲೇ ಇಲ್ಲ ಅಂತಾ ಸುಳ್ಳು ಹೇಳಿದ್ದಾರೆ. ಪಂಚಶೀಲಾ ಈ ವಿಷಯವನ್ನ ಪತಿಗೆ ತಿಳಿಸಿದಾಗ ಕಿರಾತಕರ ಕೃತ್ಯ ಬಯಲಾಗಿದ್ದು, ಬೀದರ್ ನ್ಯೂಟೌನ್ ಠಾಣೆ ಪೊಲೀಸರು ಆರೋಪಿಗಳಾದ ಸೂರ್ಯಕಾಂತ್ ಹಾಗೂ ರಮೇಶ್ ಮಾಣಿಕ್​ನನ್ನ ಕಂಬಿ ಹಿಂದೆ ತಳ್ಳಿದ್ದಾರೆ.

ಈ ರೀತಿ ಪ್ರಕರಣಗಳು ಇದೇ ಮೊದಲೇನಲ್ಲ. ಈ ಹಿಂದೆಯೂ ಇಂತಹ ಹಲವು ಪ್ರಕರಣಗಳು ಆಸ್ಪತ್ರೆಯಲ್ಲಿ ನಡೆದಿದ್ದರೂ ಬೆಳಕಿಗೆ ಬಂದಿಲ್ಲ. ಆದರೆ ಈ ಪ್ರಕರಣ ಬೆಳಕಿಗೆ ಬಂದಿದೆ ಅನ್ನೋದು ಸ್ಥಳೀಯರ ಆರೋಪ.

ಅಂದಹಾಗೆ ಬ್ರಿಮ್ಸ್ ಆಸ್ಪತ್ರೆಗೆ ನಮ್ಮ ರಾಜ್ಯದ ಜನ ಮಾತ್ರ ಬರೋದಿಲ್ಲ. ಆಂಧ್ರ, ತೆಲಂಗಾಣ, ಮಹಾರಾಷ್ಟ್ರದ ಗಡಿಯಲ್ಲಿ ವಾಸವಿರುವ ಬಡವರಿಗೂ ಈ ಆಸ್ಪತ್ರೆ ಸಂಜೀವಿನಿ. ಆದ್ರೆ, ಆಸ್ಪತ್ರೆ ಸಿಬ್ಬಂದಿ ಅಂತಹವರನ್ನೇ ಟಾರ್ಗೆಟ್ ಮಾಡ್ತಿರೋದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್