ಬೀದರ್​: ಆಲಿಕಲ್ಲು ಮಳೆಗೆ ದಾಳಿಂಬೆ ಬೆಳೆ ಹಾನಿ, ಕಂಗಾಲಾದ ರೈತ ಸಹಾಯದ ನಿರೀಕ್ಷೆಯಲ್ಲಿ

ಆ ಜಿಲ್ಲೆಯ ಭೂಮಿ ಅಲ್ಲಿನ ಹವಾಮಾನ ಎಲ್ಲಾ ತೋಟಗಾರಿಕೆ ಬೆಳೆ ಬೆಳೆಯಲು ಸೂಕ್ತವಾಗಿದೆ. ಹೀಗಾಗಿಯೇ ರಾಜ್ಯದ ಎಲ್ಲ ಜಿಲ್ಲೆಯಲ್ಲಿ ಬೆಳೆಯುವ ಎಲ್ಲಾ ಬಗೆಯ ತೋಟಗಾಗರಿಕೆ ಬೆಳೆಯನ್ನ ಇಲ್ಲಿ ಬೆಳೆಯಲಾಗುತ್ತದೆ. ಆದರೆ, ಈ ವರ್ಷ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ದಾಳಿಂಬೆ ಬೆಳೆಸಿದ ರೈತ ಹೈರಾಣಾಗಿದ್ದು, ನಷ್ಟದ ಸುಳಿಯಲ್ಲಿ ಸಿಲುಕಿದ್ದಾನೆ.

ಬೀದರ್​: ಆಲಿಕಲ್ಲು ಮಳೆಗೆ ದಾಳಿಂಬೆ ಬೆಳೆ ಹಾನಿ, ಕಂಗಾಲಾದ ರೈತ ಸಹಾಯದ ನಿರೀಕ್ಷೆಯಲ್ಲಿ
ಬೀದರ್​ ದಾಳಿಂಬೆ ಬೆಳೆ ಹಾನಿ
Follow us
ಕಿರಣ್ ಹನುಮಂತ್​ ಮಾದಾರ್
|

Updated on: May 18, 2023 | 7:15 AM

ಬೀದರ್​: ಅಕಾಲಿಕ ಆಲಿಕಲ್ಲು ಮಳೆಗೆ ದಾಳಿಂಬೆ(Pomegranate)ಬೆಳೆಗಾರ ಕಂಗಾಲು, ಆಲಿಕಲ್ಲು ಮಳೆಯಿಂದಾಗಿ ದಾಳಿಂಬೆ ಬೆಳೆಗೆ ಅಂಟಿದ ರೋಗ, ಬೆಳೆ ಕುಂಟಿತ. ಗಿಡದಿಂದ ಕಾಯಿಗಳನ್ನ ಕಿತ್ತುಕೊಂಡು ಬಿಸಾಕುತ್ತಿರುವ ರೈತ. ಹೌದು ದಾಳಿಂಬೆ ಬೆಳೆ ಕೆಲವು ರೈತರನ್ನ ಕೈ ಹಿಡಿದರೆ ಇನ್ನೂ ಕೆಲವು ರೈತರನ್ನ ಪ್ರಪಾತಕ್ಕೆ ತಳ್ಳಿದೆ. ಜಿಲ್ಲೆಯಲ್ಲಿ ಇನ್ನೂರು ಹೆಕ್ಟರ್​ಗೂ ಅಧಿಕ ದಾಳಿಂಬೆಯನ್ನ ಇಲ್ಲಿ ಬೆಳೆಯಲಾಗುತ್ತಿದೆ. ಇಲ್ಲಿ ಬೆಳೆದ ಪಕ್ಕದ ತೆಲಂಗಾಣ ಹೈದ್ರಾಬಾದ್ ರಾಜ್ಯಕ್ಕೆ ಮಾರಾಟವಾಗುತ್ತಿದ್ದು, ದಾಳಿಂಬೆಗೆ ಭಾರೀ ಪ್ರಮಾಣದ ಬೇಡಿಕೆ ಇದೆ. ಇನ್ನು ಈ ವರ್ಷ ಬೆಸಿಗೆಯ ಅವಧಿಯಲ್ಲಿಯೇ ಆಲಿಕಲ್ಲು ಮಳೆಯಾಗಿದ್ದರಿಂದ ದಾಳಿಂಬೆ ಕಾಯಿಗೆ ಹೊಡೆತ ಬಿದ್ದಿದೆ. ಇದರಿಂದ ದಾಳಿಂಬೆಗೆ ರೋಗ ಅಂಟಿಕೊಂಡಿದ್ದು, ಕಾಯಿ ಒಡೆದು ರಸ ಸೋರುತ್ತಿದೆ. ಈ ಕಾರಣ ಒಂದು ಗಿಡದಲ್ಲಿ ಹತ್ತರಿಂದ ಇಪ್ಪತ್ತು ಕಾಯಿಗಳು ಕೆಟ್ಟು ಹೋಗಿದ್ದು ಅಂತಹ ಕಾಯಿಗಳನ್ನ ಗಿಡದಿಂದ ಬಿಡಿಸಿ ಬಿಸಾಕಲಾಗುತ್ತಿದೆ. ಇದು ಸಹಜವಾಗಿಯೇ ರೈತರಿಗೆ ಭಾರೀ ನಷ್ಟವನ್ನುಂಟು ಮಾಡಿದ್ದು, ವರ್ಷದಿಂದ ಗಿಡಕ್ಕೆ ಸಿಂಪಡಿಸಿದ ಔಷಧಿ, ಅದನ್ನ ನಿರ್ವಹಣೆ ಮಾಡಿದ ಹಣ ಕೂಡ ಬಾರದಂತಾಗಿದ್ದು, ಎಕರೆಗೆ ಎರಡು ಲಕ್ಷದವರೆಗೂ ನಷ್ಟವಾಗಿದೆ ಎಂದು ರೈತರು ಹೇಳುತ್ತಿದ್ದಾರೆ. ನಾನು ಐದು ವರ್ಷದಿಂದ ದಾಳಿಂಬೆ ಕೃಷಿಯಲ್ಲಿ ತೊಡಗಿಕೊಂಡಿದ್ದೇನೆ ಆದರೆ ಈ ವರ್ಷ ಮಾತ್ರ ದಾಳಿಂಬೆ, ಮಳೆಯಿಂದಾಗಿ ಕಾಯಿಗೆ ರೋಗ ಅಂಟಿಕೊಂಡಿದೆ. ಕಾಯಿಗಳು ಕೊಳತು ಹೋಗಿದ್ದು, ನಮಗೆ ಮತ್ತೆ ಸಾಲದ ಸುಳಿಗೆ ಸಿಲುಕುವಂತೆ ಮಾಡಿದೆ ಎಂದು ದಾಳಿಂಬೆ ಬೆಳೆಗಾರ ರೈತರು ಹೇಳುತ್ತಿದ್ದಾರೆ.

ಹಲವಾರು ರೋಗಗಳಿಗೆ ದಾಳಿಂಬೆ ಅದರ ಸಿಪ್ಪೆ ಮದ್ದಾಗಿರುವುದರಿಂದ ಜತೆಗೆ ರೋಗ ನಿರೋದಕ ಶಕ್ತಿಯನ್ನ ಹೊಂದಿರುವ ಕೆಂಪು ಮಣ್ಣು ಇರೋದ್ರಿಂದಾಗಿ ಜಿಲ್ಲೆಯಲ್ಲಿ ಬೆಳೆಸಿದ ದಾಳಿಂಬೆಗೆ ಮಾರುಕಟ್ಟೆಗೆ ಬೇಡಿಕೆ ಜಾಸ್ತಿಯಿದೆ. ಬೇರೆ ಜಿಲ್ಲೆಗೆ ಹೋಲಿಸಿದರೆ ಬೀದರ್ ಜಿಲ್ಲೆಯಲ್ಲಿ ದಾಳಿಂಬೆ ಬೆಳೆಯುವ ರೈತರ ಸಂಖ್ಯೆ ಕಡಿಯಿದ್ದರೂ ಕೂಡ ಇಲ್ಲಿನ ರೈತರು ದಾಳಿಂಬೆಯಿಂದ ಅತ್ಯಧಿಕ ಲಾಭ ಗಳಿಸುತ್ತಿದ್ದಾರೆ. ಆದರೆ, ಈ ವರ್ಷ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ರೈತರಿಗೆ ನಷ್ಟವನ್ನುಂಟು ಮಾಡಿದೆ. ಅದರಲ್ಲಿ ವಿಶೇಷವಾಗಿ ಜಿಲ್ಲೆಯ ಭಾಲ್ಕಿ ತಾಲೂಕಿನ ಏಣಕೂರು ಗ್ರಾಮದ ರೈತ ರಾಜಕುಮಾರ್ ಅವರು ಕಳೆದ 15 ವರ್ಷದಿಂದ ದಾಳಿಂಬೆಯನ್ನ ಬೆಳೆಸುತ್ತಿದ್ದಾರೆ. ದಾಳಿಂಬೆ ಬೆಳೆಯಿಂದಲೇ ಅತ್ಯಧಿಕ ಲಾಭವನ್ನ ಕೂಡ ಗಳಿಸುತ್ತಿದ್ದಾರೆ. ಆದರೆ, ತನ್ನ ಹದಿನೈದು ವರ್ಷದ ಅವಧಿಯಲ್ಲಿ ಈ ವರ್ಷ ಮಾತ್ರ ನನಗೆ ಮಳೆಯಿಂದಾಗಿ ದಾಳಿಂಬೆ ಬೆಳೆ ಹಾಳಾಗಿದೆ. ಹೀಗಾಗಿ ನನಗೆ ನಷ್ವವಾಗಿದ್ದು, ಈ ನಷ್ಷವನ್ನ ಯಾರು ತುಂಬುಕೊಡುತ್ತಾರೆಂದು ರೈತ ಅವಲತ್ತುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:Pomegranate Benefits: ರಕ್ತದೊತ್ತಡವಿರುವವರು ನಿತ್ಯ ಎಷ್ಟು ದಾಳಿಂಬೆ ಹಣ್ಣನ್ನು ತಿಂದರೆ ಸಮಸ್ಯೆ ಕಡಿಮೆ ಮಾಡಬಹುದು?

ಮಳೆಯಿಂದಾಗಿ ದಾಳಿಂಬೆ ಕಜ್ಜಿ ರೋಗಕ್ಕೆ ತುತ್ತಾಗಿ ಗಿಡದಲ್ಲಿ 30 ರಿಂದ 40 ಹಣ್ಣುಗಳು ಬಿಟ್ಟಿದ್ದವು. ಆದರೆ, ಈ ರೋಗದಿಂದ ಹಣ್ಣುಗಳೆಲ್ಲ ಒಡೆದುಹೋಗಿವೆ. ಇದರಿಂದ ಗಿಡದಲ್ಲಿರುವ ಎಲ್ಲ ಹಣ್ಣುಗಳನ್ನ ಕಿತ್ತು ಹಳ್ಳದಲ್ಲಿ ಸುರಿಯುವಂತಾ ಪರಿಸ್ಥಿತಿ ಎದುರಾಗಿದೆ. ಇಲ್ಲಿಯವರೆಗೆ 10 ಲಕ್ಷಕ್ಕೂ ಹೆಚ್ಚು ಹಣುಗಳನ್ನ ಹಳ್ಳದಲ್ಲಿ ಸುರಿದಿದ್ದೇವೆ. ನಮ್ಮ ಸಮಸ್ಯೆಯನ್ನ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಅರ್ಥ್​ಮಾಡಿಕೊಂಡರೆ ಒಳ್ಳೆಯದೆಂದು ಇಲ್ಲಿನ ರೈತರು ಎಚ್ಚರಿಸಿದ್ದಾರೆ. ಇನ್ನು ರೈತರ ನಷ್ಟಕ್ಕೆ ಸರಕಾರ ಕೂಡ ಸ್ಪಂದಿಸಬೇಕಿದೆ. ಯಾಕೆಂದ್ರೆ, ಕಳೆದ ವರ್ಷ ಕೂಡ ಬೀದರ್ ಜಿಲ್ಲೆಯಾದ್ಯಂತ ಆಲಿಕಲ್ಲು ಮಳೆ ಬಿದ್ದು ಕೋಟ್ಯಾಂತರ ರೂ ಬೆಳೆ ನಾಶವಾಗಿತ್ತು. ಆಗ ಕೂಡ ಮಳೆ ಮತ್ತು ಬಿರುಗಾಳಿ ರೈತನ ಬಾಳಲ್ಲಿ ಆಟವಾಡಿತ್ತು. ಈ ನಷ್ಟ ಪರಿಹಾರ ನೀಡುವಲ್ಲಿ ಸರಕಾರ ಕೂಡ ವಿಫಲವಾಗಿತ್ತು. ಆ ನಷ್ಟದ ಪರಿಹಾರ ಬಹುಭಾಗ ರೈತರಿಗೆ ಸಿಕ್ಕಿಲ್ಲ. ಸರಕಾರ ಸೂಕ್ತ ಸಂಧರ್ಭದಲ್ಲಿ ಪರಿಹಾರ ನೀಡಿ ರೈತನ ಕಣ್ಣೀರು ಒರೆಸುವ ಕಾರ್ಯ ಮಾಡಬೇಕಾಗಿದೆ.

ವರದಿ: ಸುರೇಶ್ ನಾಯಕ್ ಟಿವಿ9 ಬೀದರ್

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್