Pomegranate Benefits: ರಕ್ತದೊತ್ತಡವಿರುವವರು ನಿತ್ಯ ಎಷ್ಟು ದಾಳಿಂಬೆ ಹಣ್ಣನ್ನು ತಿಂದರೆ ಸಮಸ್ಯೆ ಕಡಿಮೆ ಮಾಡಬಹುದು?

ರಕ್ತದೊತ್ತಡವಿರುವವರು ನಿತ್ಯ 3 ದಾಳಿಂಬೆ ಹಣ್ಣನ್ನು ತಿನ್ನಬೇಕು, ದಾಳಿಂಬೆಯಲ್ಲಿ ವಿಟಮಿನ್ ಕೆ, ಫೈಬರ್, ಪೊಟ್ಯಾಷಿಯಂ, ಸತು, ಕಬ್ಬಿಣ ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳು ಸೇರಿದಂತೆ ಅನೇಕ ಅಗತ್ಯ ಪೋಷಕಾಂಶಗಳು ದಾಳಿಂಬೆಯಲ್ಲಿ ಕಂಡುಬರುತ್ತವೆ.

Pomegranate Benefits: ರಕ್ತದೊತ್ತಡವಿರುವವರು ನಿತ್ಯ ಎಷ್ಟು ದಾಳಿಂಬೆ ಹಣ್ಣನ್ನು ತಿಂದರೆ ಸಮಸ್ಯೆ ಕಡಿಮೆ ಮಾಡಬಹುದು?
ದಾಳಿಂಬೆ ಹಣ್ಣು
Follow us
ನಯನಾ ರಾಜೀವ್
|

Updated on: Mar 05, 2023 | 9:00 AM

ರಕ್ತದೊತ್ತಡವಿರುವವರು ನಿತ್ಯ 3 ದಾಳಿಂಬೆ ಹಣ್ಣನ್ನು ತಿನ್ನಬೇಕು, ದಾಳಿಂಬೆಯಲ್ಲಿ ವಿಟಮಿನ್ ಕೆ, ಫೈಬರ್, ಪೊಟ್ಯಾಷಿಯಂ, ಸತು, ಕಬ್ಬಿಣ ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳು ಸೇರಿದಂತೆ ಅನೇಕ ಅಗತ್ಯ ಪೋಷಕಾಂಶಗಳು ದಾಳಿಂಬೆಯಲ್ಲಿ ಕಂಡುಬರುತ್ತವೆ. ದಾಳಿಂಬೆ ಅತ್ಯಂತ ಶಕ್ತಿಯುತವಾದ ಆಂಟಿ-ಅಥೆರೋಜೆನಿಕ್ ಏಜೆಂಟ್. ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳು ಇದರಲ್ಲಿ ಕಂಡುಬರುತ್ತವೆ, ಇದು ಅಪಧಮನಿಗಳನ್ನು ಸ್ವಚ್ಛವಾಗಿಡಲು ಮತ್ತು ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ಇದಷ್ಟೇ ಅಲ್ಲ ಹೃದಯವನ್ನು ಆರೋಗ್ಯವಾಗಿಡುವುದರ ಜೊತೆಗೆ ರಕ್ತನಾಳಗಳು ಬ್ಲಾಕ್ ಆಗುವುದನ್ನು ತಡೆಯುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವ ಜನರಿಗೆ ದಾಳಿಂಬೆ ಪ್ರಯೋಜನಕಾರಿಯಾಗಿದೆ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಪ್ರತಿನಿತ್ಯ ಮೂರು ದಾಳಿಂಬೆಯನ್ನು ಮೂರು ತಿಂಗಳು ತಿಂದರೆ ಅನೇಕ ಲಾಭಗಳನ್ನು ಕಾಣಬಹುದು. ಇದು ಅವರ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳ ಕಾರಣದಿಂದಾಗಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಮತ್ತಷ್ಟು ಓದಿ: Pomegranate Benefits: ನೀವು ದಾಳಿಂಬೆ ಹಣ್ಣು ಏಕೆ ತಿನ್ನಬೇಕು? 5 ಕಾರಣಗಳು ಇಲ್ಲಿವೆ

ನಿಮ್ಮ ಜೀವನಶೈಲಿಯಲ್ಲಿ ಕೆಲವು ಅಗತ್ಯ ಬದಲಾವಣೆಗಳನ್ನು ಮಾಡಿಕೊಂಡಾಗ ಮಾತ್ರ ದಾಳಿಂಬೆ ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಅಪಧಮನಿಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ಆರೋಗ್ಯವಂತ ಹೃದಯಕ್ಕಾಗಿ ಆರೋಗ್ಯಕರ ಆಹಾರ ಸೇವನೆ ಅಗತ್ಯ ಎಂದರು. ಇದು ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಜೊತೆಗೆ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ನಿರ್ವಹಿಸುತ್ತದೆ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.

ಜೀವನಶೈಲಿಯಲ್ಲಿ ಈ 8 ಪ್ರಮುಖ ಬದಲಾವಣೆಗಳನ್ನು ಮಾಡಿ 1. ಹೆಚ್ಚು ನಾರಿನಂಶವನ್ನು ಸೇವಿಸಿ: ಬಿಳಿ ಬ್ರೆಡ್ ಮತ್ತು ಪಾಸ್ತಾ ಬದಲಿಗೆ ಧಾನ್ಯಗಳನ್ನು ಸೇವಿಸಿ.

2. ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ.

3. ಆಹಾರದ ಕೊಲೆಸ್ಟ್ರಾಲ್ ಸೇವನೆಯನ್ನು ಮಿತಿಗೊಳಿಸಿ. ಹಾಲು ಮತ್ತು ಚೀಸ್ ಇತ್ಯಾದಿಗಳನ್ನು ಸಣ್ಣ ಪ್ರಮಾಣದಲ್ಲಿ ತೆಗೆದುಕೊಳ್ಳಿ.

4. ಬೀಜಗಳು ಮತ್ತು ಆವಕಾಡೊಗಳು ಅಥವಾ ಆಲಿವ್ ಎಣ್ಣೆಯಂತಹ ಆರೋಗ್ಯಕರ ಕೊಬ್ಬನ್ನು ಸೇವಿಸಿ

5. ಸಂಸ್ಕರಿಸಿದ ಆಹಾರ ಪದಾರ್ಥಗಳಲ್ಲಿ ಕಂಡುಬರುವ ಟ್ರಾನ್ಸ್ ಕೊಬ್ಬು ಮತ್ತು ಸ್ಯಾಚುರೇಟೆಡ್ ಕೊಬ್ಬನ್ನು ತಪ್ಪಿಸಿ.

6. ಕಡಿಮೆ ಪ್ರಮಾಣದಲ್ಲಿ ಉಪ್ಪನ್ನು ಸೇವಿಸಿ. ಏಕೆಂದರೆ ಉಪ್ಪು ಅಧಿಕ ಸೋಡಿಯಂ ಅನ್ನು ಹೊಂದಿರುತ್ತದೆ, ಇದು ಅಧಿಕ ರಕ್ತದೊತ್ತಡವನ್ನು ಉಂಟುಮಾಡುತ್ತದೆ.

7. ಆಲ್ಕೋಹಾಲ್ ಸೇವನೆಯನ್ನು ಕಡಿಮೆ ಮಾಡಿ. ಇದು ತ್ವರಿತ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಏಕೆಂದರೆ ಆಲ್ಕೋಹಾಲ್ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತದೆ.

8. ಧೂಮಪಾನವನ್ನು ತ್ಯಜಿಸಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ