AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​ಡಿಪಿಐ-ಪಿಎಫ್​​ಐ ಒಂದೇ ನಾಣ್ಯದ ಎರಡು ಮುಖಗಳು: ಸಂಸದ ತೇಜಸ್ವಿ ಸೂರ್ಯ

ಎಸ್​ಡಿಪಿಐ ಜೊತೆ ಕಾಂಗ್ರೆಸ್ ಕೈ ಜೋಡಿಸಿ ಕಾರ್ಪೊರೇಷನ್ ಚುನಾವಣೆ ಎದುರಿಸಿದೆ. ಕಾಂಗ್ರೆಸ್​ನ ಬಿ ಟಿಮ್ ನಂತೆ ಎಸ್​ಡಿಪಿಐ-ಪಿಎಫ್​​ಐ ಕೆಲಸ ಮಾಡುತ್ತಿವೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಎಸ್​ಡಿಪಿಐ-ಪಿಎಫ್​​ಐ ಒಂದೇ ನಾಣ್ಯದ ಎರಡು ಮುಖಗಳು: ಸಂಸದ ತೇಜಸ್ವಿ ಸೂರ್ಯ
ಸಂಸದ ತೇಜಸ್ವಿ ಸೂರ್ಯ
Follow us
ವಿವೇಕ ಬಿರಾದಾರ
|

Updated on: Apr 08, 2023 | 3:04 PM

ಬೀದರ್​: ಎಸ್​ಡಿಪಿಐ-ಪಿಎಫ್​​ಐ (SDPI-PFI) ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಎಸ್​ಡಿಪಿಐ ಜೊತೆ ಕಾಂಗ್ರೆಸ್ (Congress) ಕೈ ಜೋಡಿಸಿ ಕಾರ್ಪೊರೇಷನ್ ಚುನಾವಣೆ ಎದುರಿಸಿದೆ. ಕಾಂಗ್ರೆಸ್​ನ ಬಿ ಟಿಮ್​​ನಂತೆ ಎಸ್​ಡಿಪಿಐ-ಪಿಎಫ್​​ಐ ಕೆಲಸ ಮಾಡುತ್ತಿವೆ ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ಹೇಳಿದ್ದಾರೆ. ಎಸ್​ಡಿಪಿಐ-ಪಿಎಫ್​​ಐ, ಕಾಂಗ್ರೆಸ್​ ಜೊತೆ ಸೇರಿ ತಮ್ಮ ವೋಟ್​ ಬ್ಯಾಂಕ್​ ಗಟ್ಟಿಗೊಳಿಸಿಕೊಳ್ಳುತ್ತವೆ. ಪಿಎಫ್​ಐ ಕಾರ್ಯಕರ್ತರು ಎಸ್​ಡಿಪಿಐ ಜೊತೆ ಸೇರಿಕೋಳ್ಳುತ್ತಿರುವುದು ಜಗತ್ ಜಾಹೀರಾತಾಗಿದೆ. ಎಸ್​ಡಿಪಿಐ ವಿರುದ್ಧ ಕಾಂಗ್ರೆಸ್ ಮಾತನಾಡದೆ ಇರುವುದಕ್ಕೆ ಕಾರಣ ವೋಟ ಬ್ಯಾಂಕ್ ರಾಜಕಿಯಕ್ಕಾಗಿ ಎಂದು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ಮಾಡಿದರು.

ಜಿಲ್ಲೆಯ ಎಮ್ ಎಸ್ ಪಾಟೀಲ್ ಕಲ್ಯಾಣ ಮಂಟಪದಲ್ಲಿ ವಿದ್ಯರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರ ಮುಖ ನೋಡಿ ಜನ ವೋಟ್ ಹಾಕುತ್ತಾರೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದರು.

ಇದನ್ನೂ ಓದಿ: ವಿವಾದಗಳ ಬಳಿಕ ಬಸಪ್ಪನ ಮೊರೆ ಹೋದ ರೋಹಿಣಿ ಸಿಂಧೂರಿ: 10 ನಿಮಿಷ ಕಳೆದರೂ ಪಾದ ನೀಡದ ಇಷ್ಟಾರ್ಥ ಸಿದ್ದಿ ಬಸವ

ಪ್ರಧಾನಿ ಮೋದಿ ಮುಖ ನೋಡಿ ವೋಟ ಕೇಳಿದರೇ ಚಪ್ಪಲಿಯಿಂದ ಹೊಡಿರಿ ಎಂದು ಶ್ರೀರಾಮ ಸೇನೆ ಸ್ಥಾಪಕ ಪ್ರಮೋದ ಮುತಾಲಿಕ್​ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಈ ರೀತಿ ಮಾತನಾಡುವವರಿಗೆ ಜನ ಸರಿಯಾದ ಉತ್ತರ, ಸರಿಯಾದ ಸಮಯದಲ್ಲಿ ಕೊಡುತ್ತಾರೆ. ಕಾದು ನೋಡಿ, ಮೇ 13 ರಂದು ಯಾರಿಗೆ ಯಾವ ರೀತಿ ಜನ ಉತ್ತರ ಕೊಡುತ್ತಾರೆಂದು ಎಂದು ಹೇಳಿದ್ದಾರೆ.

ಇದನ್ನೂ ಓದಿ: SSLC ಇಂಗ್ಲೀಷ್​​ ಪರೀಕ್ಷೆಯಲ್ಲಿ ಸಾಮೂಹಿಕ ನಕಲು, 9 ಶಿಕ್ಷಕರು ಅಮಾನತ್ತು

ಫಸ್ಟ್ ಟೈಮ್ ವೋಟ ಮಾಡುವ ಯುವಕರು ಪ್ರಧಾನಿ ಮೋದಿ ಪರವಾಗಿದ್ದಾರೆ. ಉಕ್ರೇನ್ ರಷ್ಯಾ ನಡುವೆ ಯುದ್ಧ ನಡೆಯುತ್ತಿದೆ ಹೀಗಾಗಿ ಪೆಟ್ರೋಲ್ ದರ ಹೆಚ್ಚಾಗುವುದು ಸಹಜ. ಯುವಕರು ಫಸ್ಟ್ ಟೈಮ್​ ಚುನಾವಣೆಯಲ್ಲಿ ಮತದಾನ ಮಾಡುತ್ತಿದ್ದಿರಿ. ಬಿಜೆಪಿ ಪೂರ್ಣ ಬಹುಮತ ಬಂದರೇ ಓಳ್ಳೆ ನಿರ್ಧಾರಗಳು ತೆಗೆದುಕೊಳ್ಳಲು ಅನುಕೂಲ ಆಗುತ್ತೆ. ಚೌಚೌ ಬಾತ್ ಸರ್ಕಾರ ಬಂದರೇ ರಾಜ್ಯದಲ್ಲಿ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ನೀವು ಹಾಕಿದ ಒಂದು ವೋಟಿನಿಂದ ದೇಶದಲ್ಲಿ ಏರ್ ಪೋರ್ಟ್​ಗಳು ಹೆಚ್ಚಾಗಿವೆ. ಬ್ರಿಟನ್ ದೇಶವನ್ನು ಹಿಂದಕ್ಕೆ ಹಾಕಿ ಭಾರತ ಈಗ ನಂಬರ್ ಒನ್ ಆಗಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ