ಮಂಗಳಮುಖಿಯರಿಗೂ ತಟ್ಟಿದ ಲಾಕ್ಡೌನ್ ಬಿಸಿ, ಅವರ ಬದುಕು ದುಸ್ತರವಾಯ್ತು
ಕೊರೊನಾ ಮಹಾಮಾರಿಯ ಹರುಡುವಿಕೆಯನ್ನು ತಡೆಗಟ್ಟಲು ಸರ್ಕಾರ ಘೋಷಿಸಿದ ಲಾಕ್ಡೌನ್ ಕ್ರಮದಿಂದಾಗಿ ಅನೇಕ ವರ್ಗಗಳು ಸಂಕಷ್ಟಕ್ಕೆ ಸಿಲುಕಿವೆ. ಈ ವರ್ಗಗಳಲ್ಲಿ ಮಂಗಳಮುಖಿ ಸಮಾಜವೂ ಒಂದು. ಇಷ್ಟು ದಿನ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ಮಂಗಳಮುಖಿಯರಿಗೆ ಲಾಕ್ಡೌನ್ನಿಂದ ಬದುಕು ನಡೆಸಲು ಕಷ್ಟವಾಗುತ್ತಿದೆ. ಬರೀ ಬೆಂಗಳೂರಿನಂಥ ಮಹಾನಗರವಲ್ಲದೆ ಕರ್ನಾಟಕದ ಗಡಿ ಜಿಲ್ಲೆ ಬೀದರ್ನಲ್ಲಿರುವ ಮಂಗಳಮುಖಿಯರಿಗೂ ಇಂಥ ಕಷ್ಟದ ಪರಿಸ್ಥಿತಿ ಬಂದೊದಗಿದೆ. ಬೀದರ್ ಜಿಲ್ಲೆಯ ಹಲವು ಭಾಗಗಳಲ್ಲಿ ಸುಮಾರು 60 ಕ್ಕಿಂತಲ್ಲೂ ಹೆಚ್ಚು ತೃತೀಯಲಿಂಗಿಯರು ಜೀವನ ಸಾಗಿಸುತ್ತಿದ್ದಾರೆ. ಹಲವರು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದು ಈಗ ಲಾಕ್ಡೌನ್ನಿಂದ ಆದಾಯಕ್ಕೆ ಕಲ್ಲು ಬಿದ್ದು […]
ಕೊರೊನಾ ಮಹಾಮಾರಿಯ ಹರುಡುವಿಕೆಯನ್ನು ತಡೆಗಟ್ಟಲು ಸರ್ಕಾರ ಘೋಷಿಸಿದ ಲಾಕ್ಡೌನ್ ಕ್ರಮದಿಂದಾಗಿ ಅನೇಕ ವರ್ಗಗಳು ಸಂಕಷ್ಟಕ್ಕೆ ಸಿಲುಕಿವೆ. ಈ ವರ್ಗಗಳಲ್ಲಿ ಮಂಗಳಮುಖಿ ಸಮಾಜವೂ ಒಂದು. ಇಷ್ಟು ದಿನ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ಮಂಗಳಮುಖಿಯರಿಗೆ ಲಾಕ್ಡೌನ್ನಿಂದ ಬದುಕು ನಡೆಸಲು ಕಷ್ಟವಾಗುತ್ತಿದೆ. ಬರೀ ಬೆಂಗಳೂರಿನಂಥ ಮಹಾನಗರವಲ್ಲದೆ ಕರ್ನಾಟಕದ ಗಡಿ ಜಿಲ್ಲೆ ಬೀದರ್ನಲ್ಲಿರುವ ಮಂಗಳಮುಖಿಯರಿಗೂ ಇಂಥ ಕಷ್ಟದ ಪರಿಸ್ಥಿತಿ ಬಂದೊದಗಿದೆ.
ಬೀದರ್ ಜಿಲ್ಲೆಯ ಹಲವು ಭಾಗಗಳಲ್ಲಿ ಸುಮಾರು 60 ಕ್ಕಿಂತಲ್ಲೂ ಹೆಚ್ಚು ತೃತೀಯಲಿಂಗಿಯರು ಜೀವನ ಸಾಗಿಸುತ್ತಿದ್ದಾರೆ. ಹಲವರು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದು ಈಗ ಲಾಕ್ಡೌನ್ನಿಂದ ಆದಾಯಕ್ಕೆ ಕಲ್ಲು ಬಿದ್ದು ಕೇವಲ ಬಾಡಿಗೆಯಷ್ಟೇ ಅಲ್ಲದೆ, ಹಸಿವು ನೀಗಿಸಿಕೊಳ್ಳುವುದಕ್ಕೂ ಪರದಾಡುವಂತಾಗಿದೆ. ಲಾಕ್ಡೌನ್ ಕೊಂಚ ಸಡಿಲಿಕೆಯಾಗಿದ್ದರೂ ಕೊರೊನಾ ಭಯದಿಂದ ಜನರು ಜಿಲ್ಲೆಯಲ್ಲಿ ಹೆಚ್ಚು ಓಡಾಡುತ್ತಿಲ್ಲ. ಇದರಿಂದ ಇವರ ಸಂಪಾದನೆ ಬಹಳಷ್ಟು ಇಳಿಕೆ ಕಂಡಿದೆ.
ಜೊತೆಗೆ ಇವರಿಂದ ಸೋಂಕು ಹರಡುವ ಸಾಧ್ಯತೆಯಿದೆ ಎಂಬ ವದಂತಿಗಳೂ ಹರಿದಾಡುತ್ತಿರುವುದರಿಂದ ಇವರ ಹತ್ತಿರ ಬರಲು ಜನ ಹಿಂಜರಿಯುತ್ತಾರೆ. ಇದರ ಜೊತೆ ಪೊಲೀಸರು ಮತ್ತು ಜಿಲ್ಲಾಡಳಿತವು ಭಿಕ್ಷಾಟನೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ಸೂಚನೆ ನೀಡಿರುವುದರಿಂದ ಇವರಿಗೆ ದಿಕ್ಕೇ ತೋಚದಂತಾಗಿದೆ.
ಕೆಲವು ಸಮಾಜಸೇವಕರು ಮತ್ತು ಜಿಲ್ಲಾಡಳಿತವು ಲಾಕ್ಡೌನ್ ಸಮಯದಲ್ಲಿ ಇವರ ನೆರವಿಗೆ ಮುಂದೆ ಬಂದವು, ರೇಷನ್ ಕಿಟ್ ನೀಡಿದರು. ಆದರೆ ನೆರವಿನ ಪ್ರಮಾಣ ಅಷ್ಟಕಷ್ಟೆ ಆಗಿದೆ. ಹಾಗಾಗಿ ಈಗ ಇವರಿಗೆ ಉಳಿದಿರುವ ಒಂದೇ ಪರಿಹಾರ; ಸರ್ಕಾರದ ನೆರವು. ಸರ್ಕಾರ ಕೂಡ ತನ್ನ ಕಡೆಯಿಂದ ಈ ಸಮಾಜಕ್ಕೆ 500 ರೂಪಾಯಿಗಳ ಮಾಸಾಶನ ಘೋಷಣೆ ಮಾಡಿದೆ. ಆದರೆ ವಾಸ್ತವದಲ್ಲಿ ಇದರ ಲಾಭ ಕೆಲವರಿಗೆ ಮಾತ್ರ ದೊರಕುತ್ತಿದೆ. ಹಾಗಾಗಿ ಈಗಲಾದ್ರೂ ಸರ್ಕಾರ ಅವರ ಸಮಸ್ಯೆಗಳನ್ನು ಅರಿತು ಅವರ ನೆರವಿಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕಾಗಿದೆ -ಸುರೇಶ್ ನಾಯಕ್