ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನ, ಆಸ್ತಿಗಾಗಿ ಶರಣೆಯರ ಕಚ್ಚಾಟ; ವಿಡಿಯೋ ಜಾಲತಾಣಗಳಲ್ಲಿ ವೈರಲ್

basavagiri basava seva pratishthana: ಅಕ್ಕ ಅನ್ನಪೂರ್ಣ ಚೇತರಿಸಿಕೊಂಡ ಬಳಿಕ ಆಗಸ್ಟ್ 1ರಂದು ಬಸವಗಿರಿಗೆ ವಾಪಸಾಗಿ ಬಂದಿದ್ದಾರೆ. ಅಧ್ಯಕ್ಷಗಿರಿ ಬಿಡುವಂತೆ ಅಕ್ಕ ಅನ್ನಪೂರ್ಣ ಬಿಗಿಪಟ್ಟು ಹಿಡಿದಿದ್ದಾರೆ. ಆದರೆ ಅಧ್ಯಕ್ಷ ಸ್ಥಾನ ಬಿಡಲು ಡಾ. ಗಂಗಾಂಬಿಕೆ ಒಪ್ಪಿಲ್ಲ. ಈ ಹಿನ್ನೆಲೆಯಲ್ಲಿ ಪರಸ್ಪರ ಕಚ್ಚಾಟದಲ್ಲಿ ತೊಡಗಿದ್ದಾರೆ. ಇಬ್ಬರೂ ಅಕ್ಕನವರು ಕೂಡಾ ಸಂಬಂಧಿಗಳು. ಚಿಕ್ಕದಿಂನಿಂದಲೂ ಒಂದೆಡೆಯಿದ್ದು ಶಿಕ್ಷಣ ಪಡೆದು ಧಾರ್ಮಿಕ ಕ್ಷೇತ್ರಕ್ಕೆ ಕಾಲಿಟ್ಟದ್ದರು.

ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನ, ಆಸ್ತಿಗಾಗಿ ಶರಣೆಯರ ಕಚ್ಚಾಟ; ವಿಡಿಯೋ ಜಾಲತಾಣಗಳಲ್ಲಿ ವೈರಲ್
ಡಾ. ಗಂಗಾಂಭಿಕೆ ಮತ್ತು ಅನ್ನಪೂರ್ಣ
Follow us
TV9 Web
| Updated By: sandhya thejappa

Updated on:Aug 14, 2021 | 1:44 PM

ಬೀದರ್: ನಗರದ ಸುಪ್ರಸಿದ್ದ ಬಸವಗಿರಿಯ ಬಸವಸೇವಾ ಪ್ರತಿಷ್ಠಾನದ ಶರಣೆಯರ ಕಚ್ಚಾಟ ತಾರಕ್ಕೇರಿದೆ. ಅಕ್ಕ ಅನ್ನಪೂರ್ಣಾ ಹಾಗೂ ಡಾ. ಗಂಗಾಂಬಿಕೆ ನಡುವೆ ನಡೆದ ಜಗಳದ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವು ದಿನಗಳಿಂದ ಬೂದಿಮುಚ್ಚಿದ ಕೆಂಡದಂತಿದ್ದ ಬಸವಗಿರಿಯ ಶರಣು ಉದ್ಯಾಣದಲ್ಲಿ ಆತಂರಿಕ ಕಚ್ಚಾಟವೀಗ ಬೀದಿಗೆ ಬಿದ್ದಿದೆ. ಪೂಜ್ಯ ಅಕ್ಕ ಅನ್ನಪೂರ್ಣಾ, ಹಾಗೂ ಅಕ್ಕ ಡಾ. ಗಂಗಾಭಿಕೆ ಪಾಟೀಲ್ ಅವರ ನಡುವೆ ಆಗಾಗ ನಡೆಯುತ್ತಿದ್ದ ಸಮರವೀಗ ತಾರಕ್ಕೇರಿದ್ದು ಪೊಲೀಸ್ ಠಾಣೆಯ ಮೆಟ್ಟಿಲು ಸಹ ತುಳಿಯುವಂತೆ ಮಾಡಿದ್ದು ಅಕ್ಕದ್ವಯರ ಭಕ್ತರಲ್ಲಿ ತಳಮಳ ಸೃಷ್ಟಿಸುವಂತೆ ಮಾಡಿದೆ.

ತೀವ್ರ ಅನಾರೋಗ್ಯಕ್ಕೀಡಾಗಿದ್ದ ಅಕ್ಕ ಅನ್ನಪೂರ್ಣಾ ಹೈದರಾಬಾದ್ ನಲ್ಲಿ ಕೆಲವು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರು ದೀರ್ಘಕಾಲ ಚಿಕಿತ್ಸೆಯನ್ನ ಪಡೆದುಕೊಂಡು ಮರಳಿ ಅಗಷ್ಟ್ ಒಂದರಂದು ಬಸವಗಿರಿಗೆ ಬಂದಿದ್ದರು. ಅಕ್ಕಅನ್ನಪೂಣಾಘ ಬಸವಗಿರಿಗೆ ಆಗಮಿಸಿದ ನಂತರ ಇವರಲ್ಲಿ ಪರಸ್ಪರ ನಡುವಿನ ಸಂಘರ್ಷ ತಾರಕ್ಕೇರುತ್ತಲೇ ಸಾಗಿದೆ.

ಕಳೆದ ಎರಡು ದಿನಗಳ ಹಿಂದೆ ಬಸವಗಿರಿಯ ಮನೆಯಲ್ಲಿ ಅಕ್ಕ ಅನ್ನಪೂರ್ಣಾ ಹಾಗೂ ಡಾ. ಗಂಗಾಂಭಿಕಾ ನಡುವೆ ಕೈ ಕೈ ಮಿಲಾಯಿಸುವ ತನಕ ಜಗಳ ನಡೆದಿದೆ ಇವರು ಜಗಳ ಮಾಡುವ ದೃಶ್ಯವನ್ನ ಅಲ್ಲಿಯೇ ಇದ್ದ ಅವರ ಭಕ್ತರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇದು ಸಹಜವಾಗಿಯೇ, ಅಕ್ಕ ಅನ್ನಪೂರ್ಣಾ ಹಾಗೂ ಡಾ. ಗಂಗಾಂಬಿಕಾಗೆ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಭಕ್ತರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿದೆ.

ಬಸವಸೇವಾ ಪ್ರತಿಷ್ಠಾಣದ ಅಧ್ಯಕ್ಷ ಹಾಗೂ ಆಸ್ತಿಗಾಗಿ ಜಗಳ

ಇನ್ನೂ ಅಕ್ಕ ಅನ್ನಪೂರ್ಣಾ ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ಸಮಯವನ್ನ ನೋಡಿಕೊಂಡ ಕೆಲವು ಭಕ್ತರು ಅಕ್ಕ ಅನ್ನಪೂರ್ಣಾ ಅವರನ್ನ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಆ ಜಾಗದಲ್ಲಿ ಡಾ. ಗಂಗಾಂಭಿಕಾರನ್ನ ತಂದು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ವಿಚಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಕ್ಕ ಅನ್ನಪೂರ್ಣಾಗೆ ಗೊತ್ತಿರಲಿಲ್ಲ. ಅವರು ಗುಣಮುಖರಾಗಿ ಬಸವಗಿರಿಗೆ ಬರುತ್ತಿದ್ದಂತೆ ಈ ವಿಚಾರ ಗೊತ್ತಾಗಿದೆ. ಹೀಗಾಗಿ ನೀನು ಅಧ್ಯಕ್ಷ ಸ್ಥಾನವನ್ನ ನನಗೆ ಬಿಟ್ಟುಕೊಡಬೇಕು ಎಂದು ಅಕ್ಕ ಅನ್ನಪೂರ್ಣಾ ಪಟ್ಟುಹಿಡಿದ್ದಾರೆ.

ಅದಕ್ಕೆ ಡಾ. ಗಂಗಾಂಭಿಕಾ ಮಾತ್ರ ಸೊಪ್ಪು ಹಾಕುತ್ತಿಲ್ಲ. ಹೀಗಾಗಿ ಇಬ್ಬರ ನಡುವೆ ಜಗಳ ಶುರುವಾಗಿದೆ. ಇದರ ಜೊತೆಗೆ ಈಗ ಶ್ರಾವಣ ಮಾಸ ಪ್ರಾರಂಭವಾಗಿದ್ದರಿಂದ ಶ್ರಾವಣ ಮಾಸದ ನಿಮಿತ್ಯ ಅಕ್ಕ ಅನ್ನಪೂರ್ಣಾ ಅವರು ನಡೆಸಲು ಉದ್ದೇಶಿಸಿದ್ದ ಪ್ರವಚನಕ್ಕೆ ಈಗಿನ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಗಂಗಾಂಭಿಕೆ ಅಡ್ಡಿ ಪಡಿಸುತ್ತಿದ್ದಾರೆ. ಈ ಬಗ್ಗೆ ಡಾ. ಗಂಗಾಂಬಿಕೆ ಎಸ್ಪಿ ಹಾಗೂ ನೂತನ ಪೊಲೀಸ್ ಠಾಣೆಗೂ ಕೂಡಾ ದೂರು ನೀಡಿದ್ದು ಅವರು ಪ್ರವಚನ ನಡೆಸದಂತೆ ಮಾಡಿ ಎಂದು ಮನವಿ ಮಾಡಿದ್ದಾರೆ. ಅತ್ಯಂತ ಅನ್ಯೋನ್ಯವಾಗಿದ್ದ ಅಕ್ಕದ್ವಯರು ಈಗ ಜಗಳ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಅವರ ಭಕ್ತರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿದೆ.

ಅಪರೂಪದ ಸಂಬಂಧೀ ಜೋಡಿಯಲ್ಲಿ ಬಿರುಕು..

ಅಕ್ಕ ಅನ್ನಪೂರ್ಣಾ ಹಾಗೂ ಡಾ. ಗಂಗಾಂಭಿಕೆ ಅವರದ್ದು ಅಪರೂಪದ ಜೋಡಿ. ಒಂದೇ ನಾಣ್ಯದ ಎರಡು ಮುಖ ಇದ್ದಂತೆ ಜೀವನ ನಡೆಸಿದವರು. ರಾಷ್ಟ್ರೀಯ ಬಸವದಳದಿಂದ ಬಸವಗಿರಿ ನಿರ್ಮಾಣದವರೆಗೂ ಅಕ್ಕದ್ವಯರು ದೇಹ ಎರಡಾದರು ಒಂದು ಮನಸ್ಸಾಗಿ ಕೆಲಸ ಮಾಡಿದ್ದರು. ಆದರೆ ಈಗ ಇಬ್ಬರ ನಡುವೆ ಆಂತರಿಕ ಕಿತ್ತಾಟ ನಡೆಯುತ್ತಿರುವುದು, ಪರಸ್ಪರರ ಮುಖವನ್ನೂ ಸಹ ನೋಡದಷ್ಟು ಮಟ್ಟಿಗೆ ಕಚ್ಚಾಟ ಶುರುವಾಗಿದ್ದು ವಿಚಿತ್ರವೆನಿಸಿದೆ.

ಇಬ್ಬರೂ ಅಕ್ಕನವರು ಕೂಡಾ ಸಂಬಂಧಿಗಳು. ಚಿಕ್ಕಂದಿನಿಂದಲೂ ಒಂದೆಡೆಯಿದ್ದು ಶಿಕ್ಷಣ ಪಡೆದು ಧಾರ್ಮಿಕ ಕ್ಷೇತ್ರಕ್ಕೆ ಕಾಲಿಟ್ಟದ್ದರು. ಮೊದಲು ರಾಷ್ಟ್ರೀಯ ಬಸವದಳದ ಮೂಲಕ ಆಧ್ಯಾತ್ಮ ಸೇವೆ ಮಾಡಿದ ಇಬ್ಬರೂ, ನಂತರ ಬಸವಸೇವಾ ಪ್ರತಿಷ್ಠಾಪನೆ ಮಾಡಿ ಧಾರ್ಮಿಕ ಸೇವೆ ಮಾಡಿಕೊಂಡು ಬಂದಿದ್ದಾರೆ.

(two women fight for basava seva pratishthana chairperson post and property in basavagiri bidar)

Published On - 1:43 pm, Sat, 14 August 21

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?