
ಬೆಂಗಳೂರು: ಕಳೆದ ಎರಡು ಮೂರು ದಿನಗಳ ಹಿಂದೆ ಕಣ್ವ ಸಂಸ್ಥೆಯ ವಂಚನೆಯನ್ನು ಬಟಾಬಯಲು ಮಾಡಲಾಗಿತ್ತು. ಇದೀಗ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಮಾಡಿದ ಮತ್ತೊಂದು ಆರೋಪ ಬಯಲಾಗಿದೆ.
ಕಳೆದ 20 ವರ್ಷಗಳಿಂದ ಉತ್ತಮ ಹೆಸರು ಇಟ್ಟುಕೊಂಡಿದ್ದ ಕಣ್ವ ಸಂಸ್ಥೆ ಮೇಲೆ ಮೂರು ಆರೋಪಗಳು ಕೇಳಿ ಬಂದಿದ್ದವು. ಮುಖ್ಯವಾಗಿ ಕಣ್ವ ಕೋ ಆಪರೇಟಿವ್ ಸಂಸ್ಥೆ ಗ್ರಾಹಕರಿಗೆ ನೀಡಿದ್ದ ಚೆಕ್‌ಗಳು ಬೌನ್ಸ್ ಆಗಿರುವುದು. ಜತೆಗೆ ಗ್ರಾಹಕರು ಹೂಡಿಕೆ ಮಾಡಿರೋ ಹಣಕ್ಕೆ ಬ್ಯಾಂಕ್ನಿಂದ ಸರಿಯಾಗಿ ಬಡ್ಡಿ ನೀಡದಿರುವುದು. ಹಾಗೂ ಕೆಲ ಗ್ರಾಹಕರ ಠೇವಣ ಅವಧಿ ಮುಗಿದ್ರೂ ಅವರ ಹಣವನ್ನ ವಾಪಸ್ ಕೊಡದೆ ಸತಾಯಿಸುತ್ತಿರುವುದು. ಹೀಗೆ ಕಣ್ವ ವಿರುದ್ಧ ಮೂರು ಆರೋಪಗಳು ಕೇಳಿ ಬಂದಿದ್ದವು. ಈಗ ಇದರ ಜೊತೆ ಕಣ್ವ ಗಾರ್ಡನ್ ಸಿಟಿ ರಿಯಲ್ ಎಸ್ಟೇಟ್ ಸಂಸ್ಥೆಯು ಗ್ರಾಹಕರಿಗೆ ಮೋಸ ಮಾಡಿರುವುದು ಬಯಲಾಗಿದೆ.
Published On - 12:05 pm, Mon, 4 November 19