ರಾಜ್ಯದಲ್ಲಿ ಶುದ್ಧ ಗಾಳಿ ಸಿಗುವ ಜಿಲ್ಲಾ ಕೇಂದ್ರ ಯಾವುದು ಗೊತ್ತಾ!?

ಯಾದಗಿರಿ: ದೇಶದ ರಾಜಧಾನಿ ದಿಲ್ಲಿಯಲ್ಲಿ ಮಾಲಿನ್ಯ ಬಾಂಬ್​ ಸ್ಪೋಟಗೊಂಡು ಜನ ಪರಿಶುದ್ಧ ಗಾಳಿಗಾಗಿ ಪರದಾಡುತ್ತಿದ್ದಾರೆ. ಆದ್ರೆ ನಮ್ಮ ರಾಜ್ಯದಲ್ಲಿ ಪರಿಶುದ್ಧ ಗಾಳಿ ಸಿಗುವ ನಗರ ಯಾವುದು ಗೊತ್ತಾ? ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಹಣೆ ಪಟ್ಟಿ ಕಟ್ಟಿಕೊಂಡಿರುವ ಯಾದಗಿರಿ, ಜಿಲ್ಲೆಯಾಗಿ ಹತ್ತು ವರ್ಷಗಳು ಕಳೆದ್ರು ಹೇಳಿಕೊಳ್ಳುವ ರೀತಿಯಲ್ಲಿ ಅಭಿವೃದ್ಧಿಯಾಗದೆ ಹಿಂದುಳಿದ ಜಿಲ್ಲೆ ಎಂದೇ ಗುರುತಿಸಲ್ಪಟ್ಟಿದೆ. ಆದ್ರೆ ಈ ಮಧ್ಯೆ ಜಿಲ್ಲಾ ಕೇಂದ್ರವಾದ ಯಾದಗಿರಿ ನಗರವು ಮಹತ್ತರ ಸಾಧನೆ ಮಾಡಿದೆ. ಅದೇನೆಂದ್ರೆ ಪರಿಶುದ್ಧ ಗಾಳಿ ಸಿಗುವ ಜಿಲ್ಲಾ ಕೇಂದ್ರ […]

ರಾಜ್ಯದಲ್ಲಿ ಶುದ್ಧ ಗಾಳಿ ಸಿಗುವ ಜಿಲ್ಲಾ ಕೇಂದ್ರ ಯಾವುದು ಗೊತ್ತಾ!?
Follow us
ಸಾಧು ಶ್ರೀನಾಥ್​
|

Updated on:Nov 04, 2019 | 1:55 PM

ಯಾದಗಿರಿ: ದೇಶದ ರಾಜಧಾನಿ ದಿಲ್ಲಿಯಲ್ಲಿ ಮಾಲಿನ್ಯ ಬಾಂಬ್​ ಸ್ಪೋಟಗೊಂಡು ಜನ ಪರಿಶುದ್ಧ ಗಾಳಿಗಾಗಿ ಪರದಾಡುತ್ತಿದ್ದಾರೆ. ಆದ್ರೆ ನಮ್ಮ ರಾಜ್ಯದಲ್ಲಿ ಪರಿಶುದ್ಧ ಗಾಳಿ ಸಿಗುವ ನಗರ ಯಾವುದು ಗೊತ್ತಾ? ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಹಣೆ ಪಟ್ಟಿ ಕಟ್ಟಿಕೊಂಡಿರುವ ಯಾದಗಿರಿ, ಜಿಲ್ಲೆಯಾಗಿ ಹತ್ತು ವರ್ಷಗಳು ಕಳೆದ್ರು ಹೇಳಿಕೊಳ್ಳುವ ರೀತಿಯಲ್ಲಿ ಅಭಿವೃದ್ಧಿಯಾಗದೆ ಹಿಂದುಳಿದ ಜಿಲ್ಲೆ ಎಂದೇ ಗುರುತಿಸಲ್ಪಟ್ಟಿದೆ. ಆದ್ರೆ ಈ ಮಧ್ಯೆ ಜಿಲ್ಲಾ ಕೇಂದ್ರವಾದ ಯಾದಗಿರಿ ನಗರವು ಮಹತ್ತರ ಸಾಧನೆ ಮಾಡಿದೆ. ಅದೇನೆಂದ್ರೆ ಪರಿಶುದ್ಧ ಗಾಳಿ ಸಿಗುವ ಜಿಲ್ಲಾ ಕೇಂದ್ರ ಎಂಬ ಕೀರ್ತಿಗೆ ಪಾತ್ರವಾಗಿದೆ.

ಯಾದಗಿರಿಯಲ್ಲಿ ಪರಿಶುದ್ಧ ಗಾಳಿಗೆ ಇಲ್ವೇ ಇಲ್ಲ ಕೊರತೆ! ಬರದ ನಾಡು. ಅಭಿವೃದ್ಧಿಯಲ್ಲಿ ಹಿಂದುಳಿದು ಗುಳೆ ಅನ್ನೋ ಶಾಪ ಯಾದಗಿರಿ ಜಿಲ್ಲೆಗೆ ಹಚ್ಚೆ ಹೊಡೆದಂತೆ ಇದೆ. ಅದ್ರಲ್ಲೂ ದೇಶದಲ್ಲಿ ಬಹುತೇಕ ನಗರಗಳು ಮಾಲಿನ್ಯ ಅನ್ನೋ ಮೃದಂಗಕ್ಕೆ ಸಿಲುಕಿ ಒದ್ದಾಡ್ತಿವೆ. ದೆಹಲಿಯಲ್ಲಂತೂ ಜನರು ನೆಮ್ಮದಿಯಿಂದ ಉಸಿರಾಡೋಕು ಸಾಧ್ಯವಾಗುತ್ತಿಲ್ಲ. ಆದ್ರೆ, ಯಾದಗಿರಿ ಜಿಲ್ಲೆ ದೇಶದಲ್ಲೇ ಶುದ್ಧ ಗಾಳಿ ನೀಡುತ್ತಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ. ಇಲ್ಲಿ ಪರಿಶುದ್ಧ ಗಾಳಿ ಸುಲಭವಾಗಿ ಸಿಗ್ತಿದೆ. ಇದ್ರಿಂದ ಯಾದಗಿರಿ ಜನರು ಫುಲ್ ಖುಷ್ ಆಗಿದ್ದಾರೆ ಜೊತೆ ಜೊತೆಗೆ ಹೆಮ್ಮೆ ಕೂಡ ವ್ಯಕ್ತಪಡಿಸಿದ್ದಾರೆ.

ಗಾಳಿ ಮಾಪನ ಸೂಚ್ಯಂಕ ವರದಿ ಪ್ರಕಾರ.. ಹಿಂದುಳಿದ ಜಿಲ್ಲೆ ಅನ್ನೋ ಹಣೆಪಟ್ಟಿ ಹೊಂದಿದ್ರೂ ಯಾದಗಿರಿ ಜಿಲ್ಲೆಯಲ್ಲಿ ಇಂಥಾ ವಾತಾವರಣಕ್ಕೆ ಕಾರಣ ಜನರ ಜಾಗೃತಿ. ಅಲ್ಲದೇ ನಗರ ಪ್ರದೇಶದಲ್ಲಿ ಕೈಗಾರಿಕೆಗಳು ಹೆಚ್ಚಾಗಿ ಇಲ್ಲ. ಅಲ್ಲದೇ ದೀಪಾವಳಿ ಹಬ್ಬದಂದು ಕೂಡ ಇಲ್ಲಿನ ಜನರು ಪರಿಸರ ಕಾಳಜಿ ತೋರಿದ್ದಾರೆ. ಇದ್ರಿಂದ ಪರಿಸರ ಮಾಲಿನ್ಯ ಅನ್ನೋದೆ ಆಗ್ತಿಲ್ಲ. ಇನ್ನು, ಗಾಳಿ ಮಾಪನ ಸೂಚ್ಯಂಕ ವರದಿ ಪ್ರಕಾರ ಯಾದಗಿರಿ ಜಿಲ್ಲೆ ಉತ್ತಮ ಪರಿಸರ ಹೊಂದಿದ ಜಿಲ್ಲೆ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಕ್ಟೋಬರ್ 28 ಹಾಗೂ 29ರಂದು ದಾಖಲಾದ ದತ್ತಾಂಶಗಳ ಪ್ರಕಾರ ಶೇ. 30ರಷ್ಟು ಮಾತ್ರ ಮಾಲಿನ್ಯ ಸೂಚ್ಯಂಕ ದಾಖಲಾಗಿದೆ.

Published On - 6:04 pm, Sun, 3 November 19

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!