ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ದೆಹಲಿ ಭೇಟಿ ಬಗ್ಗೆ ಡಿಕೆಶಿ ಅಚ್ಚರಿಯ ಹೇಳಿಕೆ
ಸಿಎಂ ಸಿದ್ದರಾಮಯ್ಯ ಅಧಿಕಾರ ಹಂಚಿಕೆ ಮಾತನ್ನು ವಿಧಾನಸಭೆಯೊಳಗೆ ನಿಂತು ಶುಕ್ರವಾರ ಅಲ್ಲಗಳೆದಿದ್ದರು. ಎರಡೂವರೆ ವರ್ಷದ ತೀರ್ಮಾನ ಆಗಿಲ್ಲ. ಐದು ವರ್ಷವೂ ನಾನೇ ಸಿಎಂ ಎಂದಿದ್ದರು. ಈ ಬೆನ್ನಲ್ಲೇ ಹೈಕಮಾಂಡ್ ಕಡೆಗೆ ಕಾಂಗ್ರೆಸ್ನ ಗಮನ ಹೋಗಿದೆ. ಈ ನಡುವೆ ಡಿಕೆಶಿ ದೆಹಲಿಗೆ ಪ್ರಯಾಣ ಬೆಳೆಸಲು ಸಜ್ಜಾಗಿದ್ದಾರೆ.
ಬೆಂಗಳೂರು, ಡಿಸೆಂಬರ್ 20: ಹೈಕಮಾಂಡ್ ನನ್ನ ಪರವಾಗಿದೆ. ಎರಡೂವರೆ ವರ್ಷದ ಅಗ್ರಿಮೆಂಟೇ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಶುಕ್ರವಾರ ಹೇಳಿದ್ದರು. ಈ ಮಾತು ಸದ್ಯ ಅವರ ಬೆಂಬಲಿಗರಲ್ಲಿ ವಿಶ್ವಾಸ ಹೆಚ್ಚಿಸಿದೆ. ಜೊತೆಜೊತೆಗೆ ಡಿಸಿಎಂ ಡಿಕೆ ಶಿವಕುಮಾರ್ ಬಣ ಹಾಗೂ ಹೈಕಮಾಂಡ್ಗೂ ಸಂದೇಶ ರವಾನೆ ಆಗಿದೆ. ಈ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳುತ್ತಿರುವುದು ಕುತೂಹಲ ಮೂಡುವಂತೆ ಮಾಡಿದೆ. ದೆಹಲಿಗೆ ತೆರಳುವ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಹೈಕಮಾಂಡ್ ನಮ್ಮಿಬ್ಬರಿಗೂ ಏನೋ ಹೇಳಿದೆ. ಹೈಕಮಾಂಡ್ ನಾಯಕರು ಕರೆದಾಗ ಇಬ್ಬರೂ ಒಟ್ಟಿಗೆ ದೆಹಲಿಗೆ ಹೋಗುತ್ತೇವೆ ಎಂದಿದ್ದಾರೆ. ಆದರೆ ವರಿಷ್ಠರು ಹೇಳಿದ್ಯಾವ ವಿಚಾರ ಎಂಬ ಬಗ್ಗೆ ಗುಟ್ಟು ಮಾತ್ರ ಬಿಟ್ಟುಕೊಟ್ಟಿಲ್ಲ.
Latest Videos
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ

