ಕಣ್ವ ಸಂಸ್ಥೆ ವಿರುದ್ಧ ಮತ್ತೊಂದು ಆರೋಪ, ರಿಯಲ್ ಎಸ್ಟೇಟ್​ನಲ್ಲೂ ಮಹಾ ವಂಚನೆ

ಬೆಂಗಳೂರು: ಕಳೆದ ಎರಡು ಮೂರು ದಿನಗಳ ಹಿಂದೆ ಕಣ್ವ ಸಂಸ್ಥೆಯ ವಂಚನೆಯನ್ನು ಬಟಾಬಯಲು ಮಾಡಲಾಗಿತ್ತು. ಇದೀಗ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಮಾಡಿದ ಮತ್ತೊಂದು ಆರೋಪ ಬಯಲಾಗಿದೆ. ಕಳೆದ 20 ವರ್ಷಗಳಿಂದ ಉತ್ತಮ ಹೆಸರು ಇಟ್ಟುಕೊಂಡಿದ್ದ ಕಣ್ವ ಸಂಸ್ಥೆ ಮೇಲೆ ಮೂರು ಆರೋಪಗಳು ಕೇಳಿ ಬಂದಿದ್ದವು. ಮುಖ್ಯವಾಗಿ ಕಣ್ವ ಕೋ ಆಪರೇಟಿವ್‌ ಸಂಸ್ಥೆ ಗ್ರಾಹಕರಿಗೆ ನೀಡಿದ್ದ ಚೆಕ್‌ಗಳು ಬೌನ್ಸ್‌ ಆಗಿರುವುದು. ಜತೆಗೆ ಗ್ರಾಹಕರು ಹೂಡಿಕೆ ಮಾಡಿರೋ ಹಣಕ್ಕೆ ಬ್ಯಾಂಕ್​ನಿಂದ ಸರಿಯಾಗಿ ಬಡ್ಡಿ ನೀಡದಿರುವುದು. ಹಾಗೂ ಕೆಲ ಗ್ರಾಹಕರ ಠೇವಣ […]

ಕಣ್ವ ಸಂಸ್ಥೆ ವಿರುದ್ಧ ಮತ್ತೊಂದು ಆರೋಪ, ರಿಯಲ್ ಎಸ್ಟೇಟ್​ನಲ್ಲೂ ಮಹಾ ವಂಚನೆ
sadhu srinath

|

Nov 04, 2019 | 2:00 PM

ಬೆಂಗಳೂರು: ಕಳೆದ ಎರಡು ಮೂರು ದಿನಗಳ ಹಿಂದೆ ಕಣ್ವ ಸಂಸ್ಥೆಯ ವಂಚನೆಯನ್ನು ಬಟಾಬಯಲು ಮಾಡಲಾಗಿತ್ತು. ಇದೀಗ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಮಾಡಿದ ಮತ್ತೊಂದು ಆರೋಪ ಬಯಲಾಗಿದೆ.

ಕಳೆದ 20 ವರ್ಷಗಳಿಂದ ಉತ್ತಮ ಹೆಸರು ಇಟ್ಟುಕೊಂಡಿದ್ದ ಕಣ್ವ ಸಂಸ್ಥೆ ಮೇಲೆ ಮೂರು ಆರೋಪಗಳು ಕೇಳಿ ಬಂದಿದ್ದವು. ಮುಖ್ಯವಾಗಿ ಕಣ್ವ ಕೋ ಆಪರೇಟಿವ್‌ ಸಂಸ್ಥೆ ಗ್ರಾಹಕರಿಗೆ ನೀಡಿದ್ದ ಚೆಕ್‌ಗಳು ಬೌನ್ಸ್‌ ಆಗಿರುವುದು. ಜತೆಗೆ ಗ್ರಾಹಕರು ಹೂಡಿಕೆ ಮಾಡಿರೋ ಹಣಕ್ಕೆ ಬ್ಯಾಂಕ್​ನಿಂದ ಸರಿಯಾಗಿ ಬಡ್ಡಿ ನೀಡದಿರುವುದು. ಹಾಗೂ ಕೆಲ ಗ್ರಾಹಕರ ಠೇವಣ ಅವಧಿ ಮುಗಿದ್ರೂ ಅವರ ಹಣವನ್ನ ವಾಪಸ್‌ ಕೊಡದೆ ಸತಾಯಿಸುತ್ತಿರುವುದು. ಹೀಗೆ ಕಣ್ವ ವಿರುದ್ಧ ಮೂರು ಆರೋಪಗಳು ಕೇಳಿ ಬಂದಿದ್ದವು. ಈಗ ಇದರ ಜೊತೆ ಕಣ್ವ ಗಾರ್ಡನ್ ಸಿಟಿ ರಿಯಲ್ ಎಸ್ಟೇಟ್ ಸಂಸ್ಥೆಯು ಗ್ರಾಹಕರಿಗೆ ಮೋಸ ಮಾಡಿರುವುದು ಬಯಲಾಗಿದೆ.

ಕೋ ಆಪರೇಟಿವ್ ಬ್ಯಾಂಕ್ ಅವ್ಯವಹಾರದ ಜೊತೆಗೆ ರಿಯಲ್ ಎಸ್ಟೇಟ್ ಉದ್ಯಮದಲ್ಲೂ ಗ್ರಾಹಕರಿಗೆ ಕಣ್ವ ಸಂಸ್ಥೆ ಮೋಸ ಮಾಡಿದೆ. ನೆಲಮಂಗಲದ ಬಳಿ ನಿವೇಶನ ಮಾರಾಟದಲ್ಲಿ ಜನರಿಗೆ ವಂಚನೆ ಮಾಡಿದೆ. ಒಂದೇ ಸೈಟನ್ನು ಇಬ್ಬಿಬ್ಬರಿಗೆ ಸೇಲ್ ಮಾಡಿದ ಆರೋಪ ಕೇಳಿ ಬಂದಿದೆ. ಹಣ ಕೊಟ್ಟು ಸೈಟ್ ಖರೀದಿ ಮಾಡಿದ್ರು ಮನೆ ಕಟ್ಟಲಾಗದೆ ನಿವೇಶನ ಮಾಲೀಕರು ಪರದಾಡುತ್ತಿದ್ದು, ಕೋರ್ಟ್ ಮೆಟ್ಟಿಲೇರಿದ್ದಾರೆ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada