ಮನ್ಮುಲ್ನಲ್ಲಿ ಹಾಲಿಗೆ ನೀರು ಬೆರೆಸಿದ ಕೇಸ್ಗೆ ಮೆಗಾ ಟ್ವಿಸ್ಟ್.. ಹಗರಣ ಕೈಬಿಡುವಂತೆ ಒತ್ತಡ ಹಾಕಿದ್ರಾ H.D.ದೇವೇಗೌಡ?
ಮಂಡ್ಯ ಜಿಲ್ಲಾ ಹಾಲು ಒಕ್ಕೂಟ.. ನಿತ್ಯ ಒಂಬತ್ತುವರೆ ಲಕ್ಷ ಲೀಟರ್ ಹಾಲು ಸಂಗ್ರಹವಾಗುವ ಈ ಡೇರಿ ವಂಚನೆ ಮೂಲಕ ಸಖತ್ ಸುದ್ದಿಯಲ್ಲಿದೆ. ರೈತರಿಂದ ಗಟ್ಟಿ ಗಟ್ಟಿ ಹಾಲು ಸಂಗ್ರಹವಾಗಿ, ಈ ಡೇರಿಗೆ ಬರ್ತಿದ್ದಂತೆ ನೀರಾಗಿ ಪರಿವರ್ತನೆಯಾಗ್ತಿತ್ತು. ಇದರ ಅಸಲಿಯತ್ತು ಏನು ಅಂತಾ ಚೆಕ್ ಮಾಡಲು ಹೋದಾಗ ದೊಡ್ಡ ಹಗರಣವೆ ಬಯಲಾಗಿತ್ತು.
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಬೆಳಕಿಗೆ ಬಂದಿದ್ದ ನೀರು ಮಿಶ್ರಿತ ಹಾಲು ಸರಬರಾಜು ಪ್ರಕರಣ ದಿನೇ ದಿನೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಹಗರಣ ಮುಚ್ಚಿ ಹಾಕೋಕೆ ಪ್ರಯತ್ನ ನಡೆಯುತ್ತಿದ್ಯಾ ಅನ್ನೋ ಅನುಮಾನದ ನಡುವೆ ಬಹಿರಂಗವಾಗಿರೊ ಆಡಿಯೋ ಬಾಂಬ್ ಹಗರಣಕ್ಕೆ ಸಖತ್ ಟ್ವಿಸ್ಟ್ ನೀಡಿದೆ. ಹಾಗಿದ್ರೆ ಏನದು ಆಡಿಯೋ.. ಅದರಲ್ಲಿ ಮಾತನಾಡಿದ್ದು ಯಾರು ಅನ್ನೋ ಡೀಟೆಲ್ಸ್ ಇಲ್ಲಿದೆ.
ಕೇಸ್ಗೆ ಸ್ಫೋಟಕ ಟ್ವಿಸ್ಟ್ ಕೊಟ್ಟ ಮಂಡ್ಯ ನಾಯಕರ ‘ಆಡಿಯೋ’..! ಮಂಡ್ಯ ಜಿಲ್ಲಾ ಹಾಲು ಒಕ್ಕೂಟ.. ನಿತ್ಯ ಒಂಬತ್ತುವರೆ ಲಕ್ಷ ಲೀಟರ್ ಹಾಲು ಸಂಗ್ರಹವಾಗುವ ಈ ಡೇರಿ ವಂಚನೆ ಮೂಲಕ ಸಖತ್ ಸುದ್ದಿಯಲ್ಲಿದೆ. ರೈತರಿಂದ ಗಟ್ಟಿ ಗಟ್ಟಿ ಹಾಲು ಸಂಗ್ರಹವಾಗಿ, ಈ ಡೇರಿಗೆ ಬರ್ತಿದ್ದಂತೆ ನೀರಾಗಿ ಪರಿವರ್ತನೆಯಾಗ್ತಿತ್ತು. ಇದರ ಅಸಲಿಯತ್ತು ಏನು ಅಂತಾ ಚೆಕ್ ಮಾಡಲು ಹೋದಾಗ ದೊಡ್ಡ ಹಗರಣವೆ ಬಯಲಾಗಿತ್ತು. ಹಾಲಿಗೆ ನೀರು ಬೆರಸಿ ಕೋಟಿ ಕೋಟಿ ಲೂಟಿ ಹೊಡೆಯುಲಾಗುತಿತ್ತು.
ಇದಾದ ನಂತರ ಇದೇ ತಿಂಗಳ 14 ರಂದು ಸಿಎಂ ಯಡಿಯೂರಪ್ಪ ಬೆಂಗಳೂರಿನಲ್ಲಿ ಮಾತನಾಡಿ ಹಗರಣದ ಕುರಿತು ಸಿಐಡಿ ತನಿಖೆ ನಡೆಸಲಾಗುವುದು ಅಂತಾ ಹೇಳಿದ್ದರು. ಇನ್ನೇನು ಹಗರಣ ಕುರಿತು ಸತ್ಯಾಂಶ ಹೊರಬೀಳಲಿದೆ ಅಂತಾ ಜಿಲ್ಲೆಯ ಜನ ನಿರೀಕ್ಷೆ ಹೊಂದಿದ್ರು. ಆದ್ರೆ 12 ದಿನ ಕಳೆದರೂ ಅಧಿಕೃತ ಆದೇಶ ಹೊರ ಬೀಳಲಿಲ್ಲ. ಈ ನಡುವೆ ಹಗರಣ ಹಳ್ಳ ಹಿಡಿಯೋದು ಗ್ಯಾರಂಟಿ ಅಂತಾ ತಿಳಿಯೋ ವೇಳೆಗೆ ಮಾಜಿ ಸಚಿವ ಚಲುವರಾಯಸ್ವಾಮಿ ಹಾಗೂ ಮನ್ಮುಲ್ ಮಾಜಿ ಅಧ್ಯಕ್ಷ ಜವರೇಗೌಡ ನಡುವೆ ನಡೆದಿದೆ ಎನ್ನಲಾದ ಆಡಿಯೋ ಒಂದು ವೈರಲ್ ಆಗಿದೆ. ಹಗರಣಕ್ಕೆ ಟ್ವಿಸ್ಟ್ ನೀಡಿರೊ ಆಡಿಯೋದಲ್ಲಿರೋ ಮಾಹಿತಿ ಪ್ರಕಾರ ಹಗರಣ ಕೈ ಬಿಡುವಂತೆ ಮಾಜಿ ಪ್ರಧಾನಿ ದೇವೇಗೌಡ, ಯಡಿಯೂರಪ್ಪ ಮೇಲೆ ಒತ್ತಡ ಹಾಕಿದ್ದಾರಂತೆ. ಈ ಹಗರಣದಲ್ಲಿ ದೊಡ್ಡ ದೊಡ್ಡವರ ಕೈವಾಡ ಇರುವುದರಿಂದ ಸರ್ಕಾರ ಯಾವುದಾದರೂ ಸ್ವತಂತ್ರ ಸಂಸ್ಥೆಯ ಮೂಲಕ ತನಿಖೆ ನಡೆಸಬೇಕೆಂದು ಒತ್ತಾಯಿಸಲಾಗ್ತಿದೆ. ಇದೇ ತಿಂಗಳ 14 ರಂದು ಮಂಡ್ಯ ತಾಲೂಕಿನ ಹನಕೆರೆ ಗ್ರಾಮಕ್ಕೆ ಭೇಟಿ ನೀಡಿದ್ದ ಮಾಜಿ ಸಿಎಂ ಹೆಚ್ ಡಿಕೆ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು.
ಹೀಗಿರುವಾಗ ಈಗ ಮಾಜಿ ಸಚಿವ ಚಲುವರಾಯಸ್ವಾಮಿ ಹಾಗೂ ಜವರೇಗೌಡ ನಡುವೆ ನಡೆದಿದೆ ಎನ್ನಲಾದ ಆಡಿಯೋದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಬಗ್ಗೆ ಮತ್ತೆ ದೇವೇಗೌಡರ ಬಗ್ಗೆ ಪ್ರಸ್ತಾಪ ಮಾಡಿರೋದು ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿದೆ. ಮಂಡ್ಯ ಜಿಲ್ಲೆಯ ಮಟ್ಟಿಗೆ ಬಹುದೊಡ್ಡ ದೊಡ್ಡ ಹಗರಣವಾಗಿರೊ ಈ ಪ್ರಕರಣದಲ್ಲಿ ದೊಡ್ಡ ದೊಡ್ಡವರ ಕೈವಾಡ ಎಂಬ ಮಾತು ಕೇಳಿ ಬರ್ತಿತ್ತು. ಈಗ ವೈರಲ್ ಆಗಿರೋ ಆಡಿಯೋ ಮೂಲಕ ಆ ಮಾತು ನಿಜವಾಗಿದೆ.
ಇದನ್ನೂ ಓದಿ: ಮನ್ಮುಲ್ನಲ್ಲಿ ನೀರು ಮಿಶ್ರಿತ ಹಾಲು ಪೂರೈಕೆ; 6 ಅಧಿಕಾರಿಗಳು ಅಮಾನತು
Published On - 7:43 am, Sun, 27 June 21