BJP ಮುಖಂಡನ ಸ್ಕಾರ್ಪಿಯೋ ಗಾಡಿ ಬೈಕ್ಗೆ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು
ಬಿಜೆಪಿ ಮುಖಂಡನೊಬ್ಬನ ಸ್ಕಾರ್ಪಿಯೋ ವಾಹನ ಬೈಕ್ಗೆ ಡಿಕ್ಕಿಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಜಿಲ್ಲೆಯ ರಾಣೆಬೆನ್ನೂರಿನ ಪಿ.ಬಿ.ರಸ್ತೆಯಲ್ಲಿ ನಡೆದಿದೆ. ಶಂಕರಗೌಡ ಪಾಟೀಲ್ (52) ಮೃತ ಬೈಕ್ ಸವಾರ.

ಬೈಕ್ಗೆ ಡಿಕ್ಕಿ ಹೊಡೆದ ಸ್ಕಾರ್ಪಿಯೋ
ಹಾವೇರಿ: ಬಿಜೆಪಿ ಮುಖಂಡನೊಬ್ಬನ ಸ್ಕಾರ್ಪಿಯೋ ವಾಹನ ಬೈಕ್ಗೆ ಡಿಕ್ಕಿಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಜಿಲ್ಲೆಯ ರಾಣೆಬೆನ್ನೂರಿನ ಪಿ.ಬಿ.ರಸ್ತೆಯಲ್ಲಿ ನಡೆದಿದೆ. ಶಂಕರಗೌಡ ಪಾಟೀಲ್ (52) ಮೃತ ಬೈಕ್ ಸವಾರ.
ಬಿಜೆಪಿ ಮುಖಂಡ ವಿಶ್ವನಾಥ್ ಪಾಟೀಲ್ಗೆ ಸೇರಿದ ಸ್ಕಾರ್ಪಿಯೋ ವಾಹನ ಬೈಕ್ಗೆ ಡಿಕ್ಕಿಯಾದ ನಂತರ ಅದರ ಮೇಲೆ ಹರಿದುಹೋಗಿದೆ. ಇನ್ನು ಘಟನೆ ಬೆಳಕಿಗೆ ಬರುತ್ತಿದ್ದಂತೆ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಪತ್ನಿ ಸ್ಥಳದಲ್ಲೇ ದುರ್ಮರಣ
Published On - 4:31 pm, Mon, 7 December 20