
ಮಂಗಳೂರು: ಕೋರ್ ಕಮಿಟಿಯಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆದಿದೆ. ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ಕ್ರಮದ ಬಗ್ಗೆ ಮಾತುಕತೆ ಆಗಿದೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೂಡ ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಕಠಿಣ ಕಾನೂನು ಜಾರಿಗೆ ತರುವ ಬಗ್ಗೆ ನಿರ್ಧಾರವಾಗಿದೆ ಎಂದು ಕೋರ್ ಕಮಿಟಿ ಸಭೆ ಮುಗಿದ ಬಳಿಕ ಶಾಸಕ ಅರವಿಂದ ಲಿಂಬಾವಳಿ ಸುದ್ದಿಗೋಷ್ಠಿ ವೇಳೆ ಹೇಳಿದ್ದಾರೆ.
ಓದಿ, ಟಿವಿ9 ನಿನ್ನೆಯ ವರದಿ:
ಮಂಗಳೂರು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಲವ್ ಜಿಹಾದ್ ಕಾನೂನು ಬಗ್ಗೆ ಚರ್ಚೆ ಸಾಧ್ಯತೆ
ಕೋರ್ ಕಮಿಟಿ ಒಕ್ಕೂರಲಿನಿಂದ ಒಪ್ಪಿಗೆ
ಈ ಬಗ್ಗೆ ಕೋರ್ ಕಮಿಟಿ ಒಕ್ಕೂರಲಿನಿಂದ ಒಪ್ಪಿಗೆ ಸೂಚಿಸಿದೆ. ಸರ್ಕಾರದ ಮಟ್ಟದಲ್ಲಿ, ಅಧಿಕಾರಿಗಳು, ಮುಖಂಡರು ಚರ್ಚೆ ನಡೆಸಿ ಕಾನೂನು ತರಲು ಕೋರ್ ಕಮಿಟಿ ಸಲಹೆ ನೀಡಿದೆ. ಅದರ ಜೊತೆಗೆ ಗೋ ಹತ್ಯೆ ನಿಷೇಧ ಕಾನೂನು ಜಾರಿ ಬಗ್ಗೆಯೂ ಸಹ ಚರ್ಚೆ ನಡೆದಿದೆ. ಹಿಂದಿನ ಬಿಜೆಪಿ ಸರ್ಕಾರದ ಕಾಯ್ದೆಗೆ ಒಂದಷ್ಟನ್ನು ಸೇರಿಸಿ ಜಾರಿ ಮಾಡುವ ಬಗ್ಗೆ ಕಮಿಟಿ ಸಲಹೆ ಕೊಟ್ಟಿದೆ.