‘ಬೋಸ್‌ರನ್ನು ಹಿಡಿದುಕೊಡ್ತೇನೆ ಎಂದಿದ್ದ ಗಾಂಧೀಜಿಯನ್ನ ದೇಶದ್ರೋಹಿ ಅನ್ನೋಕಾಗುತ್ತಾ!?’
ಬೆಂಗಳೂರು: ಹೆಚ್.ಎಸ್.ದೊರೆಸ್ವಾಮಿ ಹೇಳಿಕೆ ವಿಚಾರವಾಗಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದು, ದೊರೆಸ್ವಾಮಿ ಬಗ್ಗೆ ಬಿಜೆಪಿಗೆ ತುಂಬಾ ಗೌರವವಿದೆ. ಆದ್ರೆ ನಾವು ದೊರೆಸ್ವಾಮಿ ಹಾಗೂ ಯತ್ನಾಳ್ ಹೇಳಿಕೆಯನ್ನು ಸಮರ್ಥಿಸಲ್ಲ ಎಂದರು. ಪಾಕ್ ಪರ ಕೂಗಿದ ಅಮೂಲ್ಯಳನ್ನ ಮೊಮ್ಮಗಳು ಅಂತಾರೆ. ಈ ರೀತಿಯ ಹೇಳಿಕೆಗಳಿಂದ ಅವರು ಯಾವ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ್ರೆಂಬ ಅನುಮಾನ ಬರುತ್ತೆ. ಅವರು ಈ ರೀತಿಯ ಹೇಳಿಕೆಗಳನ್ನು ಸಮರ್ಥಿಸಿಕೊಂಡರೆ, ನಾವೂ ಶಾಸಕ ಯತ್ನಾಳ್ ಹೇಳಿಕೆ ಸಮರ್ಥಿಸಿಕೊಳ್ಳುತ್ತೇವೆ. ನಮಗೆ ಮಹಾತ್ಮ ಗಾಂಧೀಜಿ, ಸಾವರ್ಕರ್ ಇಬ್ಬರೂ ಒಂದೇ. ಇಬ್ಬರ ಉದ್ದೇಶವೂ […]
ಬೆಂಗಳೂರು: ಹೆಚ್.ಎಸ್.ದೊರೆಸ್ವಾಮಿ ಹೇಳಿಕೆ ವಿಚಾರವಾಗಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದು, ದೊರೆಸ್ವಾಮಿ ಬಗ್ಗೆ ಬಿಜೆಪಿಗೆ ತುಂಬಾ ಗೌರವವಿದೆ. ಆದ್ರೆ ನಾವು ದೊರೆಸ್ವಾಮಿ ಹಾಗೂ ಯತ್ನಾಳ್ ಹೇಳಿಕೆಯನ್ನು ಸಮರ್ಥಿಸಲ್ಲ ಎಂದರು.
ಪಾಕ್ ಪರ ಕೂಗಿದ ಅಮೂಲ್ಯಳನ್ನ ಮೊಮ್ಮಗಳು ಅಂತಾರೆ. ಈ ರೀತಿಯ ಹೇಳಿಕೆಗಳಿಂದ ಅವರು ಯಾವ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ್ರೆಂಬ ಅನುಮಾನ ಬರುತ್ತೆ. ಅವರು ಈ ರೀತಿಯ ಹೇಳಿಕೆಗಳನ್ನು ಸಮರ್ಥಿಸಿಕೊಂಡರೆ, ನಾವೂ ಶಾಸಕ ಯತ್ನಾಳ್ ಹೇಳಿಕೆ ಸಮರ್ಥಿಸಿಕೊಳ್ಳುತ್ತೇವೆ. ನಮಗೆ ಮಹಾತ್ಮ ಗಾಂಧೀಜಿ, ಸಾವರ್ಕರ್ ಇಬ್ಬರೂ ಒಂದೇ. ಇಬ್ಬರ ಉದ್ದೇಶವೂ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವುದಾಗಿತ್ತು. ಆದ್ರೆ ಅವರಿಬ್ಬರ ಮಾರ್ಗಗಳು ಬೇರೆಯಾಗಿದ್ದವು ಅಷ್ಟೆ.
ಗಾಂಧಿ ಶಾಂತಿ ಮಾರ್ಗವಾದರೆ, ಸಾವರ್ಕರ್ ಕ್ರಾಂತಿ ಮಾರ್ಗದವರು. ಅಂಡಮಾನ್ ಜೈಲಿಗೆ ಹೋಗಿ ಬಂದಿರೋರಿಗೆ ಗೊತ್ತು ಅಲ್ಲಿ ಪರಿಸ್ಥಿತಿಗಳು ಏನು ಎಂದು. ಗಾಂಧೀಜಿ ವೈಭವೀಕರಿಸಿ, ಸಾವರ್ಕರ್ ಕಡೆಗಣನೆ ಸರಿಯಲ್ಲ. ಸುಭಾಷ್‌ಚಂದ್ರ ಬೋಸ್‌ರನ್ನು ನಾನು ಹಿಡಿದುಕೊಡುತ್ತೇನೆಂದು ಗಾಂಧೀಜಿಯವರು ಹೇಳಿದ್ರು. ಹಾಗಂತ ಅವರನ್ನು ದೇಶದ್ರೋಹಿ ಎಂದು ಹೇಳಲಾಗುತ್ತಾ? ಅವೆಲ್ಲವೂ ಸಾಂದರ್ಭಿಕ ಅಷ್ಟೆ ಎಂದು ಸಚಿವ ಸಿ.ಟಿ.ರವಿ ಹೇಳಿದ್ರು.
Published On - 1:25 pm, Mon, 2 March 20