ಯಡಿಯೂರಪ್ಪ ನಮ್ಮ ಪಕ್ಷದ ನಾಯಕರಷ್ಟೇ, ಮಾಲೀಕರಲ್ಲ; ವಂಶಪಾರಂಪರ್ಯ ಆಡಳಿತ ಬಿಜೆಪಿ ಡಿಎನ್​ಎನಲ್ಲೇ ಇಲ್ಲ: ಸಿ.ಟಿ. ರವಿ

| Updated By: ganapathi bhat

Updated on: Apr 05, 2022 | 12:47 PM

‌ಈಶ್ವರಪ್ಪ, ಯಡಿಯೂರಪ್ಪನವರು ಪಕ್ಷದ ಅಧ್ಯಕ್ಷರಾಗಿದ್ದವರು. ಅವರಿಗೆ ನಾನು ಹೇಳೋದಕ್ಕೆ ಸಾಧ್ಯವಾಗೋದಿಲ್ಲ. ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ ಎಂದು ಸಿ.ಟಿ. ರವಿ ತಿಳಿಸಿದ್ದಾರೆ.

ಯಡಿಯೂರಪ್ಪ ನಮ್ಮ ಪಕ್ಷದ ನಾಯಕರಷ್ಟೇ, ಮಾಲೀಕರಲ್ಲ; ವಂಶಪಾರಂಪರ್ಯ ಆಡಳಿತ ಬಿಜೆಪಿ ಡಿಎನ್​ಎನಲ್ಲೇ ಇಲ್ಲ: ಸಿ.ಟಿ. ರವಿ
ಸಿಟಿ ರವಿ
Follow us on

ಬೆಂಗಳೂರು: ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನಮ್ಮ ಪಕ್ಷದ ಸರ್ವೋಚ್ಛ ನಾಯಕರಷ್ಟೇ. ಯಡಿಯೂರಪ್ಪ ಪಕ್ಷದ ಮಾಲೀಕರಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಇಂದು (ಏಪ್ರಿಲ್ 5) ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಕರ್ನಾಟಕದಲ್ಲಿ ವಂಶ ಪಾರಂಪರ್ಯ ಆಡಳಿತ ಬರೋದಿಲ್ಲ. ವಂಶ ಪಾರಂಪರ್ಯ ನಮ್ಮ ಪಕ್ಷದಲ್ಲೇ ಇಲ್ಲ ಎಂಬ ವಿಚಾರವಾಗಿ ಮಾತನಾಡಿದ ಅವರು ಹೀಗೆ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಮಾಲೀಕರು ಅಂದರೆ ನೆಹರು ಕುಟುಂಬ. ಜೆಡಿಎಸ್‌ಗೆ ಮಾಲೀಕರು ಅಂದರೆ ದೇವೇಗೌಡರ ಕುಟುಂಬ. ಆದ್ರೆ ಬಿಜೆಪಿಗೆ ಮಾಲೀಕರು ಅಂದ್ರೆ ಕಾರ್ಯಕರ್ತರ ಕುಟುಂಬ. ಬಿಎಸ್‌ವೈ, ಮೋದಿ, ಅಮಿತ್ ಶಾ ಲೀಡರ್‌ಗಳಷ್ಟೇ. ಪಕ್ಷದಲ್ಲಿ ಸೆಂಟ್ರಲ್ ಬೋರ್ಡ್‌ನಿಂದಲೇ ಫೈನಲ್ ಡಿಸಿಷನ್. ಉತ್ತರಾಧಿಕಾರಿ ಪ್ರವೃತ್ತಿ ನಮ್ಮ ಪಾರ್ಟಿಯಲ್ಲಿ ಬೆಳೆದು ಬಂದಿಲ್ಲ. ಪಕ್ಷದ ನಿರ್ಣಯದ ಮೇಲೆ ಫ್ಯಾಮಿಲಿ ಪ್ರಭಾವ ಬೀರೋದಿಲ್ಲ ಎಂದು ಸಿ.ಟಿ. ರವಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ವಿರುದ್ಧ ಕೆ.ಎಸ್. ಈಶ್ವರಪ್ಪ ಬರೆದಿದ್ದ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ಆ ಪತ್ರ ನನಗೆ ತಲುಪಿಲ್ಲ. ಸಚಿವ ಈಶ್ವರಪ್ಪನವರೂ ನನಗೆ ದೂರವಾಣಿ ಕರೆ ಮಾಡಿದ್ದರು. ಮುಖ್ಯಮಂತ್ರಿ, ಅರುಣ್ ಸಿಂಗ್, ಜೆ.ಪಿ. ನಡ್ಡಾ ಜತೆ ಮಾತಾಡುವಂತೆ ಸಲಹೆ ನೀಡಿದ್ದೇನೆ. ಬಹಿರಂಗವಾಗಿ ಮಾತಾಡಲ್ಲ, ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸ್ತೇನೆ. ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಸಿ.ಟಿ. ರವಿ ಹೇಳಿದ್ದಾರೆ.

‌ಈಶ್ವರಪ್ಪ, ಯಡಿಯೂರಪ್ಪನವರು ಪಕ್ಷದ ಅಧ್ಯಕ್ಷರಾಗಿದ್ದವರು. ಅವರಿಗೆ ನಾನು ಹೇಳೋದಕ್ಕೆ ಸಾಧ್ಯವಾಗೋದಿಲ್ಲ. ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

ತಮಿಳುನಾಡು ಚುನಾವಣೆಯ ಕುರಿತಾಗಿ ಹೇಳಿದ ತಮಿಳುನಾಡು ರಾಜ್ಯದ ಬಿಜೆಪಿ ಉಸ್ತುವಾರಿಯೂ ಆಗಿರುವ ಸಿ.ಟಿ.ರವಿ, ಮೇಲ್ನೋಟಕ್ಕೆ ಡಿಎಂಕೆ, ಎಐಎಡಿಎಂಕೆ ನಡುವೆ ಸ್ಪರ್ಧೆ ಇದೆ. ಆದರೆ ಅಲ್ಲಿ ಚುನಾವಣೆಗೆ ಅಜೆಂಡಾ ಸೆಟ್ ಮಾಡಿದ್ದೇ ಬಿಜೆಪಿ. ದೇವಸ್ಥಾನಗಳ ಬಗ್ಗೆ, ಜಲ್ಲಿಕಟ್ಟು ವಿಷಯವನ್ನು ಮೊದಲು ತೆಗೆದುಕೊಂಡಿದ್ದೇ ಬಿಜೆಪಿ. ಬಿಜೆಪಿ ಇಪ್ಪತ್ತೇ ಸ್ಥಾನಗಳಲ್ಲಿ ಸ್ಪರ್ಧಿಸಿದ್ರೂ ಅದನ್ನು ಗಂಭೀರವಾಗಿ ಪರಿಗಣಿಸಿದೆ. ನಾಳೆಗೆ‌ ಬಿಜೆಪಿ ಸ್ಥಾಪನೆಯಾಗಿ 41 ವರ್ಷ. ಹೀಗಾಗಿ ನಾಳೆ ನಡೆಯುವ ಚುನಾವಣೆಯಲ್ಲಿ ಕಮಲ ಅರಳುತ್ತೆ. 234 ಕ್ಷೇತ್ರಗಳಲ್ಲಿ ನಮ್ಮ ಮೈತ್ರಿಯ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಸಿ.ಟಿ. ರವಿ ಹೇಳಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಹಂಚಿಕೊಂಡ ಫೊಟೊ ಟ್ವಿಟರ್​ನಲ್ಲಿ ವೈರಲ್

ಇದನ್ನೂ ಓದಿ: Tamil Nadu Assembly Elections 2021: ಮತದಾರರ ಪಟ್ಟಿಯಲ್ಲಿ ಶಶಿಕಲಾ ಹೆಸರು ನಾಪತ್ತೆ; ಇದು ಎಐಎಡಿಎಂಕೆ ಸಂಚು ಎಂದ ಎಎಂಎಂಕೆ

Published On - 10:32 pm, Mon, 5 April 21