ರಾಜ್ಯದ ವಿವಿಧೆಡೆ ಬಣವೆ, ಜಮೀನಿಗೆ ಬೆಂಕಿ; ಅಪಾರ ಪ್ರಮಾಣದ ಬೆಳೆ ನಾಶ
ಈಶಪ್ಪ ಕುಂಬಾರ, ಬಸಪ್ಪ ಮಡಿವಾಳರ ಸೇರಿದಂತೆ ಹಲವು ರೈತರ ಬಣವಿಗಳಿಗೆ ಬೆಂಕಿ ಬಿದ್ದಿದೆ. ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗ: ಜಿಲ್ಲೆಯ ಕೋನಾಪುರ ಬಳಿ ಆಕಸ್ಮಿಕ ಬೆಂಕಿಗೆ 20 ಬಣವೆ ಬೆಂಕಿಗಾಹುತಿಯಾಗಿವೆ. ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೋನಾಪುರದ ಸೇಂಗಾ ಹೊಟ್ಟಿನ 20 ಬಣವೆಗಳು ಬೆಂಕಿಗೆ ಸುಟ್ಟು ಹೋಗಿವೆ. ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಗದಗ: ರೈತರು ಸಂಗ್ರಹಿಸಿಟ್ಟಿದ್ದ 12 ಬಣವೆಗಳಿಗೆ ಬೆಂಕಿ ಬಿದ್ದ ಘಟನೆ ಜಿಲ್ಲೆಯ ಬೆಟಗೇರಿಯ ಬಣ್ಣದ ನಗರದಲ್ಲಿ ಸಂಭವಿಸಿದೆ. ಪಕ್ಕದಲ್ಲಿರುವ ಸ್ಮಶಾನದಿಂದ ಕಿಡಿ ತಾಕಿ ಅಗ್ನಿ ಅವಘಡ ಘಟಿಸಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.
ಈಶಪ್ಪ ಕುಂಬಾರ, ಬಸಪ್ಪ ಮಡಿವಾಳರ ಸೇರಿದಂತೆ ಹಲವು ರೈತರ ಬಣವಿಗಳಿಗೆ ಬೆಂಕಿ ಬಿದ್ದಿದೆ. ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಮನಗರ: ಕಿಡಿಗೇಡಿಗಳ ಕೃತ್ಯದಿಂದ ಜಮೀನಿಗೆ ಬೆಂಕಿ ಬಿದ್ದು, ಬೆಳೆ ಸುಟ್ಟು ಭಸ್ಮವಾಗಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೋಟೆಕೊಪ್ಪ ಎಂಬಲ್ಲಿ ಇಂದು (ಏಪ್ರಿಲ್ 5) ಸಂಭವಿಸಿದೆ. ಇದರಿಂದಾಗಿ ಕೋಟೆಕೊಪ್ಪ ಗ್ರಾಮದಲ್ಲಿ ಲಕ್ಷಾಂತರ ಮೌಲ್ಯದ ಬೆಳೆ ನಾಶವಾಗಿದೆ.
ಕೆಂಪಶಿವನಯ್ಯ ಎಂಬುವವರಿಗೆ ಸೇರಿದ ಜಮೀನಿಗೆ ಬೆಂಕಿ ಬಿದ್ದಿದೆ. ಮಾವಿನ ಗಿಡ, ತೆಂಗಿನ ಮರ, ನಿಂಬೆಗಿಡ, ತೇಗದ ಮರ ಜೊತೆಗೆ ಜಮೀನಿನಲ್ಲಿದ್ದ ಒಂದು ಶೆಡ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೋಲಾರದಿಂದ ವಿದೇಶಕ್ಕೆ ಸುವಾಸೆನೆಯ ದ್ರವ್ಯ ರಫ್ತು; ಧವನ ಬೆಳೆದು ಲಾಭ ಗಳಿಸುತ್ತಿರುವ ರೈತರು
ಇದನ್ನೂ ಓದಿ: ಪ್ರಧಾನಿ ಮೋದಿ ಬಳಿ ಸೆಲೆಬ್ರಿಟಿಗಳ ಬರ್ತ್ ಡೇ ವಿಶ್ ಮಾಡಲು ಸಮಯವಿದೆ, ರೈತರಿಗಾಗಿ ಸಮಯವಿಲ್ಲ: ಸತೀಶ್ ಜಾರಕಿಹೊಳಿ
Published On - 11:09 pm, Mon, 5 April 21