ಕೊರೊನಾ ಅಟ್ಟಹಾಸ ನಡುವೆ ಬಿಜೆಪಿ ಮಂಡಲ ಅಧ್ಯಕ್ಷನ ಹುಟ್ಟುಹಬ್ಬ ಆಚರಣೆ
ಬೆಂಗಳೂರು: ಕೊರೊನಾ ವೈರಸ್ ಸಿಲಿಕಾನ್ ಸಿಟಿಯನ್ನ ಬೆನ್ನು ಬಿಡದೇ ಕಾಡುತ್ತಿದೆ. ಕೊರೊನಾ ಅಟ್ಟಹಾಸದ ನಡುವೆಯೇ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲಾಗಿದೆ. ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷ ಕೇಶವ ಸಾಮಾಜಿಕ ಅಂತರ ಮರೆತು ತಮ್ಮ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಣೆ ಮಾಡಿಕೊಂಡಿದ್ದಾರೆ. ಸಹೋದರನ ಹುಟ್ಟುಹಬ್ಬ ಆಚರಣೆಯಲ್ಲಿ ರಾಯಪುರಂ ವಾರ್ಡ್ ಕಾರ್ಪೊರೇಟರ್ ಶಶಿಕಲಾ ಭಾಗಿಯಾಗಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಯಾವುದೇ ಸಂಭ್ರಮ, ಆಚರಣೆಗೆ ನಿಯಮಗಳನ್ನು ಹಾಕಲಾಗಿದೆ. ಆದರೆ ಸರ್ಕಾರದ ನಿಯಮವನ್ನು ಬಿಜೆಪಿ ಮಂಡಲ ಅಧ್ಯಕ್ಷರೇ ಉಲ್ಲಂಘಿಸಿದ್ದಾರೆ. ನೂರಾರು ಜನ ಹುಟ್ಟುಹಬ್ಬ ಆಚರಣೆಯಲ್ಲಿ […]
Follow us on
ಬೆಂಗಳೂರು:ಕೊರೊನಾ ವೈರಸ್ ಸಿಲಿಕಾನ್ ಸಿಟಿಯನ್ನ ಬೆನ್ನು ಬಿಡದೇ ಕಾಡುತ್ತಿದೆ. ಕೊರೊನಾ ಅಟ್ಟಹಾಸದ ನಡುವೆಯೇ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲಾಗಿದೆ. ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷ ಕೇಶವ ಸಾಮಾಜಿಕ ಅಂತರ ಮರೆತು ತಮ್ಮ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಣೆ ಮಾಡಿಕೊಂಡಿದ್ದಾರೆ.
ಸಹೋದರನ ಹುಟ್ಟುಹಬ್ಬ ಆಚರಣೆಯಲ್ಲಿ ರಾಯಪುರಂ ವಾರ್ಡ್ ಕಾರ್ಪೊರೇಟರ್ ಶಶಿಕಲಾ ಭಾಗಿಯಾಗಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಯಾವುದೇ ಸಂಭ್ರಮ, ಆಚರಣೆಗೆ ನಿಯಮಗಳನ್ನು ಹಾಕಲಾಗಿದೆ. ಆದರೆ ಸರ್ಕಾರದ ನಿಯಮವನ್ನು ಬಿಜೆಪಿ ಮಂಡಲ ಅಧ್ಯಕ್ಷರೇ ಉಲ್ಲಂಘಿಸಿದ್ದಾರೆ. ನೂರಾರು ಜನ ಹುಟ್ಟುಹಬ್ಬ ಆಚರಣೆಯಲ್ಲಿ ಭಾಗಿಯಾಗಿದ್ದರು.