ಬತ್ತಿಹೋದ ನೀರು-ಆಹಾರದ ಸೆಲೆಗಳು: ಕಾಡುಪ್ರಾಣಿಗಳ ಅರಣ್ಯರೋದನ!
ಕೋಲಾರ: ಅರಣ್ಯ ಪ್ರದೇಶದಲ್ಲಿರುವ ಜೀವ ಸಂಕುಲಕ್ಕೆ ಅಗತ್ಯ ಆಹಾರ ಹಾಗೂ ನೀರು ದೊರೆಯದೆ ತೊಂದರೆ ಅನುಭವಿಸುವಂತಾಗಿದ್ದು ಆಹಾರಕ್ಕಾಗಿ ನಾಡಿಗೆ ಬರುತ್ತಿರುವ ಮೂಕ ಜೀವಿಗಳು ಪ್ರಾಣ ಕಳೆದುಕೊಳ್ಳುವಂತಾಗಿದೆ. ಜಿಲ್ಲೆಯ ಅರಣ್ಯ ಪ್ರದೇಶದಲ್ಲಿನ ಜೀವಸಂಕುಲಕ್ಕೆ ಪ್ರಸಕ್ತ ಸಾಲಿನಲ್ಲಿ ಬರದ ಬಿಸಿ ಹೆಚ್ಚಾಗಿ ತಟ್ಟಿದ್ದು, ಪ್ರಾಣಿ ಪಕ್ಷಿಗಳು ಆಹಾರ ಮತ್ತು ಕುಡಿಯುವ ನೀರಿಗಾಗಿ ಮೂಕವೇದನೆ ಪಡುತ್ತಿವೆ. ಅಡವಿಯ ಹಳ್ಳ ಕೊಳ್ಳಗಳಲ್ಲಿ ಜೀವಸೆಲೆ ಬತ್ತಿದ್ದು, ಪ್ರಾಣಿ ಪಕ್ಷಿಗಳ ಗೋಳು ಹೇಳತೀರದಂತಾಗಿದೆ. ಅನ್ನ, ಆಹಾರ, ನೀರು ಅರಸಿ ಕಾಡಿನಿಂದ ನಾಡಿಗೆ ಬರುತ್ತಿರುವ ಪ್ರಾಣಿಗಳು ಆಕಸ್ಮಿಕವಾಗಿ […]
ಕೋಲಾರ: ಅರಣ್ಯ ಪ್ರದೇಶದಲ್ಲಿರುವ ಜೀವ ಸಂಕುಲಕ್ಕೆ ಅಗತ್ಯ ಆಹಾರ ಹಾಗೂ ನೀರು ದೊರೆಯದೆ ತೊಂದರೆ ಅನುಭವಿಸುವಂತಾಗಿದ್ದು ಆಹಾರಕ್ಕಾಗಿ ನಾಡಿಗೆ ಬರುತ್ತಿರುವ ಮೂಕ ಜೀವಿಗಳು ಪ್ರಾಣ ಕಳೆದುಕೊಳ್ಳುವಂತಾಗಿದೆ. ಜಿಲ್ಲೆಯ ಅರಣ್ಯ ಪ್ರದೇಶದಲ್ಲಿನ ಜೀವಸಂಕುಲಕ್ಕೆ ಪ್ರಸಕ್ತ ಸಾಲಿನಲ್ಲಿ ಬರದ ಬಿಸಿ ಹೆಚ್ಚಾಗಿ ತಟ್ಟಿದ್ದು, ಪ್ರಾಣಿ ಪಕ್ಷಿಗಳು ಆಹಾರ ಮತ್ತು ಕುಡಿಯುವ ನೀರಿಗಾಗಿ ಮೂಕವೇದನೆ ಪಡುತ್ತಿವೆ. ಅಡವಿಯ ಹಳ್ಳ ಕೊಳ್ಳಗಳಲ್ಲಿ ಜೀವಸೆಲೆ ಬತ್ತಿದ್ದು, ಪ್ರಾಣಿ ಪಕ್ಷಿಗಳ ಗೋಳು ಹೇಳತೀರದಂತಾಗಿದೆ.
ಅನ್ನ, ಆಹಾರ, ನೀರು ಅರಸಿ ಕಾಡಿನಿಂದ ನಾಡಿಗೆ ಬರುತ್ತಿರುವ ಪ್ರಾಣಿಗಳು ಆಕಸ್ಮಿಕವಾಗಿ ವಾಹನಗಳಿಗೆ ಸಿಲುಕಿ ಮೃತಪಡುತ್ತಿರುವುದು ಒಂದೆಡೆಯಾದರೆ, ಬೀದಿ ನಾಯಿಗಳ ದಾಳಿಗೆ ನಾಡಿಗೆ ಬರುವ ಜಿಂಕೆ, ಮೃಷ್ಣಮೃಗದಂತಹ ಪ್ರಾಣಿಗಳು ಪ್ರಾಣ ಕಳೆದುಕೊಳ್ಳುತ್ತಿವೆ.
ಜಿಲ್ಲೆಯಲ್ಲಿ ಸುಮಾರು 50,800 ಹೆಕ್ಟೇರ್ ಅರಣ್ಯ ಪ್ರದೇಶವಿದ್ದು, ಬಂಗಾರಪೇಟೆ ತಾಲೂಕಿನ ಕಾಮಸಮುದ್ರ, ಬೇತಮಂಗಲ ಮತ್ತು ಬಡಮಾಕನಹಳ್ಳಿ, ಕೋಲಾರ ತಾಲೂಕಿನ ಹರಟಿ, ಹುತ್ತೂರು ಮತ್ತು ಹೊಳಲಿ ಹೊಸೂರು, ಮಾಲೂರು ತಾಲೂಕಿನ ಎಸ್.ಕೆ.ಹೊಸಳ್ಳಿ, ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಮತ್ತು ಅಡ್ಡಗಲ್ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಜೀವನ ಸಂಕುಲವಿದೆ ಎಂದು ಅಂದಾಜಿಸಲಾಗಿದೆ.
ಜಿಂಕೆ, ಕೃಷ್ಣಮೃಗ ಹೆಚ್ಚು: ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಕೃಷ್ಣಮೃಗ ಹಾಗೂ ಜಿಂಕೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅರಣ್ಯ ಇಲಾಖೆ ಮಾಹಿತಿಯಂತೆ ಜಿಲ್ಲೆಯಲ್ಲಿ 1500ಕ್ಕೂ ಹೆಚ್ಚಿನ ಕೃಷ್ಣಮೃಗಗಳು ಹಾಗೂ 4 ಸಾವಿರಕ್ಕೂ ಹೆಚ್ಚಿನ ಜಿಂಕೆಗಳಿವೆ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ನವಿಲುಗಳು ಹಾಗೂ ಚಿರಂತೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ ಎನ್ನಲಾಗಿದೆ.
ನೀರು ಕೊಡಲು ತೊಟ್ಟಿಗಳ ನಿರ್ಮಾಣ: ಬೇಸಿಗೆಯ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶಗಳಲ್ಲಿನ ಹಳ್ಳ, ಹೊಂಡಗಳಲ್ಲಿನ ನೀರು ಬತ್ತಿರುತ್ತದೆ. ಹೀಗಾಗಿ ಅಕಾರಿಗಳು ಅರಣ್ಯ ಪ್ರದೇಶದ ಅಲ್ಲಲ್ಲಿ ಸಿಮೆಂಟ್ ತೊಟ್ಟಿಗಳನ್ನು ನಿರ್ಮಿಸಿ ಅವುಗಳಿಗೆ ಟ್ಯಾಂಕರ್ ನೀರು ತುಂಬಿಸುತ್ತಿರುವುದಾಗಿ ತಿಳಿಸಿದ್ದಾರೆ. ಆದರೂ, ಕಾಡು ಪ್ರಾಣಿಗಳು ಮಾತ್ರ ನೀರು ಅರಸಿ ಅರಣ್ಯದಂಚಿನ ಕೃಷಿ, ಜಮೀನು, ಗ್ರಾಮಗಳಿಗೆ ಬರುತ್ತಿರುವುದು ಕಂಡುಬಂದಿದೆ.
ಬೇಟೆಗಾರರ ಹಾವಳಿ: ಜಿಲ್ಲೆಯಲ್ಲಿ ಅರಣ್ಯ ಪ್ರದೇಶದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾತ್ರಿ ವೇಳೆ ಬೇಟೆಗಾರರ ಹಾವಳಿ ಶುರುವಾಗಿದ್ದು, ಆಹಾರ, ನೀರಿಗಾಗಿ ನಾಡಿಗೆ ಬರುವ ಕಾಡು ಪ್ರಾಣಿಗಳು ಬೇಟೆಗಾರರಿಗೆ ಬಲಿಯಾಗುತ್ತಿರುವ ಬಗ್ಗೆಯೂ ದೂರುಗಳಿವೆ.
ಜಿಂಕೆ ಹಾಗೂ ಕೃಷ್ಣಮೃಗಗಳಿಗೆ ಭಯ ಅವು ಹೆಚ್ಚಾಗಿ ಬಯಲು ಪ್ರದೇಶದಲ್ಲಿ ವಾಸಿಸುತ್ತವೆ. ಜಿಲ್ಲೆಯ ಕೆಲವೆಡೆಗಳಲ್ಲಿ ಹಲವು ವರ್ಷಗಳಿಂದ ಸೌದೆಗಾಗಿ ಮರಗಳನ್ನು ಕಡಿಯದ ಹಿನ್ನೆಲೆಯಲ್ಲಿ ಮರಗಳು ದಟ್ಟವಾಗಿ ಬೆಳೆದಿವೆ. ಪರಿಣಾಮ ದಟ್ಟ ಕಾಡಿನಲ್ಲಿ ವಾಸಿಸಲು ಭಯಬಿದ್ದು, ಬಯಲು ಪ್ರದೇಶಕ್ಕೆ ಬರುತ್ತವೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು. ಆದ್ರೆ ವಾಸ್ತವ ಸ್ಥಿತಿ ಬೇರೆಯೇ ಇಲ್ಲಿ
ಅಧಿಕಾರಿಗಳ ನಿರ್ಲಕ್ಷ್ಯ ಆರೋಪ: ಕೆಜಿಎಫ್ ನಗರದ ಹೊರ ವಲಯದ ಕೃಷ್ಣಾವರಂ, ಕಾಮಸಮುದ್ರ ಕಡೆ ಸಾಗುವ ಪ್ರದೇಶಗಳಲ್ಲಿ ಬೀದಿ ನಾಯಿಗಳ ದಾಳಿಯಿಂದ ನಿತ್ಯ ಕೃಷ್ಣಮೃಗಗಳು ಸಾಯುತ್ತಿರುವುದು ಕಂಡುಬರುತ್ತಿದೆ. ಆದರೆ, ಅರಣ್ಯ ಇಲಾಖೆ ಅಕಾರಿಗಳು ಅಗತ್ಯ ಕ್ರಮಗಳಿಗೆ ಮುಂದಾಗದಿರುವುದು ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲ್ಯಕ್ಷಕ್ಕೆ ಹಿಡಿದ ಕೈಗನ್ನಡಿ ಎನ್ನುತ್ತಾರೆ ಪ್ರಾಣಿಪ್ರಿಯರು.
Published On - 12:47 pm, Tue, 26 May 20