ಬಿಡಾಡಿ ವೃದ್ಧ ಪ್ರಾಣಿಗಳಿಗೆ ಸಾಯಿಗೋಕುಲ ನಿರ್ಮಾಣ, ಯಾಕೆ?

ಕೋಲಾರ: ಇವತ್ತಿನ ಕಾಲದಲ್ಲಿ ವಯಸ್ಸಾದ ತಂದೆ ತಾಯಿಯರನ್ನೇ ನೋಡಿಕೊಳ್ಳುವ ಮಕ್ಕಳು ಸಿಗೋದು ಕಷ್ಟ. ಅಂಥದರಲ್ಲಿ ವಯಸ್ಸಾದ ಹಸು, ಎಮ್ಮೆ, ಬಿಡಾಡಿ ದನಗಳ ಬಗ್ಗೆ ಯಾರಾದ್ರು ತಲೆ ಕೆಡಿಸಿಕೊಳ್ತಾರಾ? ಆದ್ರೆ ಇಲ್ಲೊಬ್ಬ ಮನುಷ್ಯ ಮುದಿಯಾದ ಬಿಡಾಡಿ ಪ್ರಾಣಿಗಳಿಗೆ ವೃದ್ಧಾಶ್ರಮವೊಂದನ್ನು ಮಾಡಿ ಮಾನವೀಯತೆ ಮೆರೆಯುತ್ತಿದ್ದಾರೆ. ನಮ್ಮ ಪುರಾಣಗಳಲ್ಲಿ ಹಸುವನ್ನು ಪುಣ್ಯಕೋಟಿ, ಕಾಮಧೇನು ಎಂದೆಲ್ಲಾ ಕರೆಯಲಾಗುತ್ತಿತ್ತು. ಜೊತೆಗೆ ಪ್ರಾಣಿ ಪಕ್ಷಿಗಳನ್ನು ದೇವರ ರೂಪದಲ್ಲಿ ಕಾಣಲಾಗುತ್ತಿತ್ತು. ಆದ್ರೆ ಇವತ್ತಿನ ಕಾಲಕ್ಕೆ ಅದೆಲ್ಲ ಅಸಾಧ್ಯದ ಮಾತು. ಯಾಕಂದ್ರೆ ಜನ್ಮಕೊಟ್ಟ ತಂದೆ-ತಾಯಿಯರನ್ನೇ ನೋಡಿಕೊಳ್ಳದ ಜನರ ನಡುವೆ […]

ಬಿಡಾಡಿ ವೃದ್ಧ ಪ್ರಾಣಿಗಳಿಗೆ ಸಾಯಿಗೋಕುಲ ನಿರ್ಮಾಣ, ಯಾಕೆ?
Follow us
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು

Updated on:May 31, 2020 | 2:27 PM

ಕೋಲಾರ: ಇವತ್ತಿನ ಕಾಲದಲ್ಲಿ ವಯಸ್ಸಾದ ತಂದೆ ತಾಯಿಯರನ್ನೇ ನೋಡಿಕೊಳ್ಳುವ ಮಕ್ಕಳು ಸಿಗೋದು ಕಷ್ಟ. ಅಂಥದರಲ್ಲಿ ವಯಸ್ಸಾದ ಹಸು, ಎಮ್ಮೆ, ಬಿಡಾಡಿ ದನಗಳ ಬಗ್ಗೆ ಯಾರಾದ್ರು ತಲೆ ಕೆಡಿಸಿಕೊಳ್ತಾರಾ? ಆದ್ರೆ ಇಲ್ಲೊಬ್ಬ ಮನುಷ್ಯ ಮುದಿಯಾದ ಬಿಡಾಡಿ ಪ್ರಾಣಿಗಳಿಗೆ ವೃದ್ಧಾಶ್ರಮವೊಂದನ್ನು ಮಾಡಿ ಮಾನವೀಯತೆ ಮೆರೆಯುತ್ತಿದ್ದಾರೆ.

ನಮ್ಮ ಪುರಾಣಗಳಲ್ಲಿ ಹಸುವನ್ನು ಪುಣ್ಯಕೋಟಿ, ಕಾಮಧೇನು ಎಂದೆಲ್ಲಾ ಕರೆಯಲಾಗುತ್ತಿತ್ತು. ಜೊತೆಗೆ ಪ್ರಾಣಿ ಪಕ್ಷಿಗಳನ್ನು ದೇವರ ರೂಪದಲ್ಲಿ ಕಾಣಲಾಗುತ್ತಿತ್ತು. ಆದ್ರೆ ಇವತ್ತಿನ ಕಾಲಕ್ಕೆ ಅದೆಲ್ಲ ಅಸಾಧ್ಯದ ಮಾತು. ಯಾಕಂದ್ರೆ ಜನ್ಮಕೊಟ್ಟ ತಂದೆ-ತಾಯಿಯರನ್ನೇ ನೋಡಿಕೊಳ್ಳದ ಜನರ ನಡುವೆ ಪ್ರಾಣಿ-ಪಕ್ಷಿಗಳ ಬಗ್ಗೆ ಮಾತಾಡೋದೆ ಬೇಡ. ಎಲ್ಲವನ್ನು ಕ್ಷಣಮಾತ್ರದಲ್ಲಿ ತಿಂದು ತೇಗುವ ಪರಿಸ್ಥಿತಿ ಇದೆ. ಆದ್ರೆ ಇಲ್ಲೊಬ್ಬ ಬೀದಿ ಬೀದಿಗಳಲ್ಲಿನ ಬಿಡಾಡಿ ಕರುಗಳನ್ನು, ಕುದುರೆಗಳನ್ನು ಸಾಕಿ ಸಲಹುತ್ತಿದ್ದಾರೆ.

14 ವರ್ಷಗಳಿಂದ ಬಿಡಾಡಿ ಪ್ರಾಣಿಗಳಿಗೆ ವೃದ್ಧಾಶ್ರಮ: ಇಂಥಾದೊಂದು ಆಶ್ರಮ ಇರೋದು ಕೋಲಾರ ತಾಲೂಕಿನ ಗಂಗಾಪುರ ಗ್ರಾಮದ ಬಳಿ. ಬೆಂಗಳೂರು ಮೂಲದ ನಾರಾಯಣ ಶರ್ಮಾ ಎಂಬುವರು ಗಂಗಾಪುರ ಗ್ರಾಮದ ಬಳಿ ಸುಮಾರು 14 ವರ್ಷಗಳಿಂದ ಸಾಯಿಗೋಕುಲ ಆಶ್ರಮ ನಿರ್ಮಾಣ ಮಾಡಿದ್ದಾರೆ. ಹಳ್ಳಿಗಳಲ್ಲಿನ ಮುದಿ ಹಾಗೂ ಗಾಯಗೊಂಡು ಕೆಲಸಕ್ಕೆ ಬಾರದೆಂದು ಕಸಾಯಿಖಾನೆಗೆ ಕಳಿಸುವಂತ ಹಸುಗಳನ್ನು ತಂದು ತಮ್ಮ ಆಶ್ರಮದಲ್ಲಿರಿಸಿಕೊಂಡು ಪ್ರೀತಿಯಿಂದ ಸಾಕಿ ಸಲಹುತ್ತಿದ್ದಾರೆ. ಸದ್ಯ ಆಶ್ರಮದಲ್ಲಿ ಸುಮಾರು 80 ಮುದಿ ಹಾಗೂ ಗಾಯಗೊಂಡ ಹಸುಗಳು, ಮೂರು ಕುದುರೆಗಳು, ಎಮ್ಮೆಗಳು, ಮೊಲ, ಪಾರಿವಾಳಗಳನ್ನು ಸಾಕಲಾಗುತ್ತಿದೆ.

ಮೂಲತಹ ನಾರಾಯಣ ಶರ್ಮ ಉದ್ಯಮಿ: ಮೂಲತಹ ಉದ್ಯಮಿಯಾಗಿರುವ ನಾರಾಯಣ ಶರ್ಮಾ ಇಂಥಾದೊಂದು ಆಶ್ರಮ ಸ್ಥಾಪನೆ ಮಾಡಲು ಕಾರಣವಿದೆ. ಅವರು ತಮ್ಮ ಚಿಕ್ಕವಯಸ್ಸಿನಲ್ಲಿ ತಮ್ಮ ಮನೆಯಲ್ಲಿದ್ದ ಹಸುವನ್ನು ಮೇಯಿಸಿಕೊಂಡು ಬರುವಾಗ ಕಾಲುಜಾರಿ ಚರಂಡಿಗೆ ಬಿದ್ದು ಗಾಯಗೊಂಡು ನರಳಿ ನರಳಿ ಹಸು ಸತ್ತು ಹೋಗಿತ್ತಂತೆ. ಅದು ಇವರ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಿತ್ತಂತೆ. ಜೊತೆಗೆ ಅವರ ತಾಯಿ ಸಹ ಮುಂದೊಂದು ದಿನ ಪ್ರಾಣಿಪಕ್ಷಿಗಳಿಗೆ ನೆರವಾಗುವಂತೆ ಕಿವಿಮಾತು ಹೇಳಿದ್ರಂತೆ.

ಹೀಗಾಗಿ ಕಳೆದ 14 ವರ್ಷಗಳಿಂದ ಸಾಯಿ ಗೋಕುಲ ಆಶ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಇವರ ಆಶ್ರಮಕ್ಕೆ ಅಕ್ಕ ಪಕ್ಕದ ಹಳ್ಳಿಗಳ ಮುದಿ ಹಸುಗಳು, ಪಟ್ಟಣಗಳ ಬಿಡಾಡಿ ದನಗಳು, ಕುದುರೆಗಳು, ಎಮ್ಮೆ ಹೀಗೆ ಹಲವಾರು ರೀತಿಯ ಪ್ರಾಣಿಗಳನ್ನು ತಂದು ಬಿಡುತ್ತಾರೆ. ಹಾಗೆ ತಂದು ಬಿಟ್ಟ ಪ್ರಾಣಿಗಳನ್ನು ಪ್ರೀತಿಯಿಂದ ಸಾಕಿ ಸಲಹಿ ಅವುಗಳಿಗೆ ಸಹಜ ಸಾವು ಬಂದ ಮೇಲೆ ಅಲ್ಲೇ ಆಶ್ರಮದ ಬಳಿ ಜಾಗದಲ್ಲಿ ಸಮಾಧಿ ಮಾಡಲಾಗುತ್ತೆ.

ಒಟ್ಟಾರೆ ವಯಸ್ಸಾದ ಮನುಷ್ಯರನ್ನೇ ನೋಡಿಕೊಳ್ಳದ ಜನರಿಲ್ಲದ ಈ ಕಾಲದಲ್ಲಿ ವಯಸ್ಸಾದ ಪ್ರಾಣಿ ಪಕ್ಷಿಗಳಿಗೆ ಪ್ರೀತಿಯ ಹಾರೈಕೆ ಮಾಡುತ್ತಿರುವ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಇವರ ಈ ಸಮಾಜಮುಖಿ ಕಾರ್ಯ ನಿಜಕ್ಕೂ ಎಂತಹವರಿಗೂ ಪ್ರೇರಣೆ ನೀಡುವಂತದ್ದು.

Published On - 12:39 pm, Sun, 31 May 20

ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ