ಕ್ವಾರಂಟೈನ್ ಅವಧಿ ಮುಗಿಸಿ ಮನೆ ಸೇರುವ ಮೊದಲೇ ವ್ಯಕ್ತಿ ಸಾವು!
ಕಲಬುರಗಿ: ಕ್ವಾರಂಟೈನ್ ಅವಧಿ ಮುಗಿಸಿ ಮನೆಗೆ ಹೋಗುತ್ತಿದ್ದ ವ್ಯಕ್ತಿ ಮನೆ ತಲುಪುವ ಮೊದಲೇ ಮೃತಪಟ್ಟಿರುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ. ಇಂದಿರಾ ನಗರದ ನಿವಾಸಿ ಚಂದ್ರಕಾಂತ್ ನಾಯಿಕೋಡಿ(32) ಮೃತ ವ್ಯಕ್ತಿ. ಕಲಬುರಗಿ ನಗರದಲ್ಲಿರುವ ಬಿಸಿಎಂ ಹಾಸ್ಟೆಲ್ನಲ್ಲಿ ಚಂದ್ರಕಾಂತ್ ಕುಕ್ ಆಗಿದ್ದರು. ಕೊರೊನಾ ಸೋಂಕಿತನ ಸಂಪರ್ಕಕ್ಕೆ ಬಂದಿದ್ದರಿಂದ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಕಳೆದ 14 ದಿನಗಳಿಂದ ಚಂದ್ರಕಾಂತ್ ಕ್ವಾರಂಟೈನ್ನಲ್ಲಿದ್ದರು. ನಿನ್ನೆ ಕ್ವಾರಂಟೈನ್ ಅವಧಿ ಮುಗಿದಿದ್ದರಿಂದ ಮನೆಗೆ ಹೋಗುವಂತೆ ಸಿಬ್ಬಂದಿ ತಿಳಿಸಿದ್ದರು. ನಿನ್ನೆ ಸಂಜೆ ಸಂಬಂಧಿ ಜೊತೆ ಬೈಕ್ನಲ್ಲಿ ಮನೆಗೆ […]
ಕಲಬುರಗಿ: ಕ್ವಾರಂಟೈನ್ ಅವಧಿ ಮುಗಿಸಿ ಮನೆಗೆ ಹೋಗುತ್ತಿದ್ದ ವ್ಯಕ್ತಿ ಮನೆ ತಲುಪುವ ಮೊದಲೇ ಮೃತಪಟ್ಟಿರುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ. ಇಂದಿರಾ ನಗರದ ನಿವಾಸಿ ಚಂದ್ರಕಾಂತ್ ನಾಯಿಕೋಡಿ(32) ಮೃತ ವ್ಯಕ್ತಿ.
ಕಲಬುರಗಿ ನಗರದಲ್ಲಿರುವ ಬಿಸಿಎಂ ಹಾಸ್ಟೆಲ್ನಲ್ಲಿ ಚಂದ್ರಕಾಂತ್ ಕುಕ್ ಆಗಿದ್ದರು. ಕೊರೊನಾ ಸೋಂಕಿತನ ಸಂಪರ್ಕಕ್ಕೆ ಬಂದಿದ್ದರಿಂದ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಕಳೆದ 14 ದಿನಗಳಿಂದ ಚಂದ್ರಕಾಂತ್ ಕ್ವಾರಂಟೈನ್ನಲ್ಲಿದ್ದರು. ನಿನ್ನೆ ಕ್ವಾರಂಟೈನ್ ಅವಧಿ ಮುಗಿದಿದ್ದರಿಂದ ಮನೆಗೆ ಹೋಗುವಂತೆ ಸಿಬ್ಬಂದಿ ತಿಳಿಸಿದ್ದರು.
ನಿನ್ನೆ ಸಂಜೆ ಸಂಬಂಧಿ ಜೊತೆ ಬೈಕ್ನಲ್ಲಿ ಮನೆಗೆ ಬರುವಾಗ ಅಸ್ವಸ್ಥಗೊಂಡಿದ್ದರು. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದ್ರೆ ನಿನ್ನೆ ಸಂಜೆಯೇ ಆಸ್ಪತ್ರೆಯಲ್ಲಿ ಚಂದ್ರಕಾಂತ್ ಮೃತಪಟ್ಟಿದ್ದಾರೆ. ಚಂದ್ರಕಾಂತ್ ಸಾವಿಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ.
Published On - 12:02 pm, Tue, 26 May 20