ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ ಕಾರು ಅಪಘಾತ

|

Updated on: Dec 18, 2019 | 10:47 AM

ವಿಜಯಪುರ: ನಿಡಗುಂದಿ ತಾಲೂಕಿನ ಗೊಳಸಂಗಿಯ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕಲಬುರಗಿ ಗ್ರಾಮಾಂತರ ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ ಕಾರು ಅಪಘಾತವಾಗಿದೆ. ಇಂದು ಆಲಮಟ್ಟಿಯಲ್ಲಿ ನಡೆಯಲಿರುವ ವಿಧಾನಸಭಾ ಸಚಿವಾಲಯ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡ ಕಲ್ಯಾಣ ಸಮಿತಿ ಸಭೆಗೆ ತೆರಳಿದ್ದಾರೆ. ಈ ವೇಳೆ ಶಾಸಕ ಮತ್ತಿಮೂಡ ಕಾರಿಗೆ ಬೈಕ್ ಸವಾರನೋರ್ವ ಅಡ್ಡ ಬಂದಿದ್ದಾನೆ. ಈ ಹಿನ್ನೆಲೆ ಅಪಘಾತ ತಡೆಯಲು ಶಾಸಕರ ಕಾರಿನ ಚಾಲಕ ಬ್ರೇಕ್ ಹಾಕಿದ್ದಾನೆ. ಈ ವೇಳೆ ಶಾಸಕರ ಕಾರಿಗೆ ಹಿಂದಿನಿಂದ ಮತ್ತೊಂದು ಕಾರು […]

ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ ಕಾರು ಅಪಘಾತ
Follow us on

ವಿಜಯಪುರ: ನಿಡಗುಂದಿ ತಾಲೂಕಿನ ಗೊಳಸಂಗಿಯ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕಲಬುರಗಿ ಗ್ರಾಮಾಂತರ ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ ಕಾರು ಅಪಘಾತವಾಗಿದೆ. ಇಂದು ಆಲಮಟ್ಟಿಯಲ್ಲಿ ನಡೆಯಲಿರುವ ವಿಧಾನಸಭಾ ಸಚಿವಾಲಯ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡ ಕಲ್ಯಾಣ ಸಮಿತಿ ಸಭೆಗೆ ತೆರಳಿದ್ದಾರೆ. ಈ ವೇಳೆ ಶಾಸಕ ಮತ್ತಿಮೂಡ ಕಾರಿಗೆ ಬೈಕ್ ಸವಾರನೋರ್ವ ಅಡ್ಡ ಬಂದಿದ್ದಾನೆ.

ಈ ಹಿನ್ನೆಲೆ ಅಪಘಾತ ತಡೆಯಲು ಶಾಸಕರ ಕಾರಿನ ಚಾಲಕ ಬ್ರೇಕ್ ಹಾಕಿದ್ದಾನೆ. ಈ ವೇಳೆ ಶಾಸಕರ ಕಾರಿಗೆ ಹಿಂದಿನಿಂದ ಮತ್ತೊಂದು ಕಾರು ಡಿಕ್ಕಿಯಾಗಿದೆ. ಶಾಸಕರ ಕಾರಿನ ಹಿಂಬದಿ ಜಖಂ ಆಗಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಕೂಡಗಿ ಎನ್‌ಟಿಪಿಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.