ಮೈಸೂರು: ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಪ್ರತಾಪ್ ಸಿಂಹ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಕಳೆದ ಕೆಲವು ದಿನಗಳಿಂದ ತಮ್ಮ ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಣಕ್ಕೆ ಓಡಾಟ ನಡೆಸಿದ್ದರು. ಇದೀಗ, ಪ್ರತಾಪ್ ಸಿಂಹಗೆ ಕೊರೊನಾ ಪಾಸಿಟಿವ್ ಆಗಿದ್ದು, ನನ್ನ ಜೊತೆ ಸಂಪರ್ಕಕ್ಕೆ ಬಂದಿರುವವರು ಕ್ವಾರಂಟೈನ್ ಆಗಿ ಎಂದು ಮನವಿ ಮಾಡಿದ್ದಾರೆ.
Dear all, morning I went to see a patient at Sri.Shantaveri Gopal Gowda hospital n had a Rapid Antigen Test n it was negative. Yet I went for RTPCR n it turned out to be positive though I don’t hv any symptoms. Whoever came in contact with me, pls isolate yourself. Sorry.
— Pratap Simha (@mepratap) May 11, 2021
ಜಿಲ್ಲಾವಾರು ಸೋಂಕಿತರ ವಿವರ ಇಂತಿದೆ
ಬಾಗಲಕೋಟೆ 676, ಬಳ್ಳಾರಿ 1,558, ಬೆಳಗಾವಿ 755, ಬೆಂಗಳೂರು ಗ್ರಾಮಾಂತರ 688, ಬೆಂಗಳೂರು ನಗರ 15,879, ಬೀದರ್ 158, ಚಾಮರಾಜನಗರ 411, ಚಿಕ್ಕಬಳ್ಳಾಪುರ 609, ಚಿಕ್ಕಮಗಳೂರು 537, ಚಿತ್ರದುರ್ಗ 193, ದಕ್ಷಿಣ ಕನ್ನಡ 915, ದಾವಣಗೆರೆ 212, ಧಾರವಾಡ 740, ಗದಗ 456, ಹಾಸನ 654, ಹಾವೇರಿ 465, ಕಲಬುರಗಿ 971, ಕೊಡಗು 892, ಕೋಲಾರ 913, ಕೊಪ್ಪಳ 414, ಮಂಡ್ಯ 1,359, ಮೈಸೂರು 2,170, ರಾಯಚೂರು 763, ರಾಮನಗರ 440, ಶಿವಮೊಗ್ಗ 1,108,
ತುಮಕೂರು 2,496, ಉಡುಪಿ 1,083, ಉತ್ತರ ಕನ್ನಡ 1084, ವಿಜಯಪುರ 485, ಯಾದಗಿರಿ ಜಿಲ್ಲೆಯಲ್ಲಿ 426 ಕೊವಿಡ್ ಸೋಂಕಿತರು ಪತ್ತೆಯಾಗಿದ್ದಾರೆ.
ಜಿಲ್ಲಾವಾರು ಮೃತರ ವಿವರ
ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 480 ಜನರು ನಿಧನರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆ 259, ಬಳ್ಳಾರಿ 28, ಉತ್ತರ ಕನ್ನಡ 18, ಹಾಸನ, ತುಮಕೂರು 16, ಬೆಂಗಳೂರು ಗ್ರಾಮಾಂತರ ಜಿಲ್ಲೆ 14, ಮೈಸೂರು, ಚಾಮರಾಜನಗರ 12, ಶಿವಮೊಗ್ಗ 10, ವಿಜಯಪುರ 8, ಬೀದರ್, ಕೊಡಗು, ಯಾದಗಿರಿ 7, ಚಿಕ್ಕಬಳ್ಳಾಪುರ, ಧಾರವಾಡ 6, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ಹಾವೇರಿ, ಕಲಬುರಗಿಗಳಲ್ಲಿ ಐವರು, ಬಾಗಲಕೋಟೆ, ದಾವಣಗೆರೆ ಜಿಲ್ಲೆಯಲ್ಲಿ ತಲಾ ಮೂವರು, ಗದಗ, ಕೋಲಾರ, ಕೊಪ್ಪಳ, ಮಂಡ್ಯ, ಉಡುಪಿ, ರಾಯಚೂರು, ರಾಮನಗರ ಜಿಲ್ಲೆಗಳಲ್ಲಿ ತಲಾ ಮೂವರು, ಬೆಳಗಾವಿಯಲ್ಲಿ ಇಬ್ಬರು ನಿಧನರಾಗಿದ್ದಾರೆ.
ಇದನ್ನೂ ಓದಿ: ಮಧ್ಯಾಹ್ನ ಊಟವಿಲ್ಲದೆ ಕೊರೊನಾ ಸೋಂಕಿತರ ಪರದಾಟ; ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ
ದೇಶದ ಎಲ್ಲಾ ನಾಗರಿಕರಿಗೆ ಲಸಿಕೆ ಕೊಟ್ಟು ಮುಗಿಸಬೇಕು ಎಂದರೆ ಎಷ್ಟು ದಿನ ಬೇಕು? ಇಲ್ಲಿದೆ ನೋಡಿ ವಿವರ
Published On - 8:35 pm, Tue, 11 May 21