ದೇಶದ ಎಲ್ಲಾ ನಾಗರಿಕರಿಗೆ ಲಸಿಕೆ ಕೊಟ್ಟು ಮುಗಿಸಬೇಕು ಎಂದರೆ ಎಷ್ಟು ದಿನ ಬೇಕು? ಇಲ್ಲಿದೆ ನೋಡಿ ವಿವರ
ಭಾರತದಲ್ಲಿ ಲಸಿಕೆಯ ಕೊರತೆಯಿಂದ ಈ ಸಮಸ್ಯೆ ಎದುರಾಗಿದೆ. ಈ ಸಮಸ್ಯೆಗೆ ಪರಿಹಾರ ಅಂದರೇ, ಕೊರೊನಾ ಲಸಿಕೆಯ ಕಡ್ಡಾಯ ಲೈಸೆನ್ಸ್ ಅನ್ನು ಲಸಿಕೆ ಉತ್ಪಾದಿಸುವ ಸಾಮರ್ಥ್ಯ, ಅನುಭವ, ಮೂಲಸೌಕರ್ಯ ಹೊಂದಿರುವ ಕಂಪನಿಗಳಿಗೆ ನೀಡಬೇಕು.
ದೇಶದಲ್ಲಿ ಈಗ ಕೊರೊನಾ ಲಸಿಕೆಗೆ ಬಾರಿ ಕೊರತೆ ಎದುರಾಗಿದೆ. ಈಗ ನೀಡುತ್ತಿರುವ ವೇಗದಲ್ಲಿ ಕೊರೊನಾ ಲಸಿಕೆ ನೀಡಿದರೇ, ದೇಶದ ಜನರಿಗೆ ಲಸಿಕೆ ನೀಡಲು 39 ತಿಂಗಳು ಬೇಕಾಗುತ್ತದೆ. ಜನರ ಜೀವ ಉಳಿಸಲು ಇರುವ ಮಾರ್ಗ ಒಂದೆ-ಜನರಿಗೆ ವೇಗವಾಗಿ ಲಸಿಕೆ ನೀಡುವುದೊಂದೇ ಈಗ . ಹಾಗಾಗಿ ನಮ್ಮ ದೇಶದಲ್ಲಿ ಕೊರೊನಾ ಲಸಿಕೆಯ ಉತ್ಪಾದನೆಯನ್ನು ಹೆಚ್ಚಳ ಮಾಡಲೇಬೇಕು. ಇಲ್ಲವೇ ವಿದೇಶದಿಂದ ಕೊರೊನಾ ಲಸಿಕೆಯನ್ನು ಆಮದು ಮಾಡಿಕೊಂಡು ಅತ್ಯಂತ ವೇಗವಾಗಿ ಎಲ್ಲರಿಗೂ ಕೊರೊನಾ ಲಸಿಕೆಯನ್ನು ನೀಡಬೇಕು. ಆಗ ಮಾತ್ರ ಭಾರತದ ಜನರನ್ನು ಕೊರೊನಾ ವೈರಸ್ ನಿಂದ ರಕ್ಷಿಸಲು ಸಾಧ್ಯ .
ಜನಸಂಖ್ಯೆ ಆಧಾರದಲ್ಲಿ ಲೆಕ್ಕ ಹಾಕಿದರೆ? ಭಾರತದಲ್ಲಿ ಸುಮಾರು 138 ಕೋಟಿ ಜನರಿದ್ದಾರೆ. ಹದಿನೆಂಟು ವರ್ಷಕ್ಕೂ ಮೇಲ್ಪಟ್ಟವರ ಲೆಕ್ಕ ತೆಗೆದುಕೊಂಡರೆ 100 ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡಬೇಕು. 100 ಕೋಟಿ ಜನರಿಗೆ 2 ಡೋಸ್ ನಂತೆ 200 ಕೋಟಿ ಡೋಸ್ ಬೇಕು. ಅಂದರೆ, ಭಾರತದಲ್ಲಿ ಇನ್ನೂ 187 ಕೋಟಿ ಡೋಸ್ ಲಸಿಕೆ ನೀಡಿಕೆ ಬಾಕಿ. ಅಂದರೆ, ಈಗ ನೀಡುತ್ತಿರುವ ವೇಗದಲ್ಲೇ ಲಸಿಕೆ ನೀಡಿಕೆ ಮುಂದುವರಿದರೇ, ಭಾರತದಲ್ಲಿ ಎಲ್ಲರಿಗೂ ಲಸಿಕೆ ನೀಡಲು 3.2 ವರ್ಷಗಳೇ ಬೇಕಾಗುತ್ತೆ.
ಲಸಿಕೆ ನೀಡುವ ವೇಗ ಜಾಸ್ತಿ ಮಾಡಿದರೆ? ಪ್ರತಿ ನಿತ್ಯ 40 ಲಕ್ಷ ಲಸಿಕೆ ನೀಡಿದರೇ, 468 ದಿನ ಬೇಕಾಗುತ್ತೆ. ತಿಂಗಳುಗಳ ಲೆಕ್ಕದಲ್ಲಿ 16 ತಿಂಗಳು ಬೇಕು. ವರ್ಷದ ಲೆಕ್ಕದಲ್ಲಿ 1.3 ವರ್ಷ ಸಮಯ ಬೇಕಾಗುತ್ತೆ. ಇನ್ನೂ ಪ್ರತಿ ನಿತ್ಯ 60 ಲಕ್ಷ ಡೋಸ್ ಲಸಿಕೆ ನೀಡಿದರೇ, ಭಾರತದಲ್ಲಿ ಎಲ್ಲರಿಗೂ ಲಸಿಕೆ ನೀಡಲು 312ದಿನ ಬೇಕಾಗುತ್ತೆ. ತಿಂಗಳುಗಳ ಲೆಕ್ಕದಲ್ಲಿ 10 ತಿಂಗಳು ಬೇಕು. ಆಗ ಒಂದು ವರ್ಷಕ್ಕಿಂತ ಕಡಿಮೆ ಸಮಯ ಬೇಕು. ಇನ್ನೂ ನಿತ್ಯ 80 ಲಕ್ಷ ಡೋಸ್ ಲಸಿಕೆ ನೀಡಿದರೇ, 234 ದಿನ ಬೇಕಾಗುತ್ತೆ. ತಿಂಗಳುಗಳ ಲೆಕ್ಕದಲ್ಲಿ 8 ತಿಂಗಳು ಕಾಲಾವಕಾಶ ಬೇಕಾಗುತ್ತೆ. ವರ್ಷದ ಲೆಕ್ಕದಲ್ಲಿ ಹೇಳುವುದಾದರೇ, 0.6 ವರ್ಷ ಬೇಕಾಗುತ್ತೆ.
ನಿತ್ಯ 1 ಕೋಟಿ ಡೋಸ್ ಲಸಿಕೆ ನೀಡಿದರೇ, ಭಾರತೀಯರೆಲ್ಲರಿಗೂ ಲಸಿಕೆ ನೀಡಲು 187 ದಿನ ಬೇಕು. ತಿಂಗಳುಗಳ ಲೆಕ್ಕದಲ್ಲಿ 6 ತಿಂಗಳು ಕಾಲಾವಕಾಶ ಬೇಕು. ವರ್ಷದ ಲೆಕ್ಕದಲ್ಲಿ ಅರ್ಧ ವರ್ಷವನ್ನೇ ತೆಗೆದುಕೊಳ್ಳುತ್ತೆ. ನಿತ್ಯ 1.20 ಕೋಟಿ ಡೋಸ್ ಲಸಿಕೆ ನೀಡಿದರೇ, 156 ದಿನ ಬೇಕಾಗುತ್ತೆ. ತಿಂಗಳುಗಳ ಲೆಕ್ಕದಲ್ಲಿ 5 ತಿಂಗಳು ಬೇಕಾಗುತ್ತೆ. ಇನ್ನೂ ನಿತ್ಯ 1.40 ಕೋಟಿ ಡೋಸ್ ಲಸಿಕೆ ನೀಡಿದರೇ, 134 ದಿನ ಬೇಕಾಗುತ್ತೆ. ತಿಂಗಳುಗಳ ಲೆಕ್ಕದಲ್ಲಿ 4.5 ತಿಂಗಳು ಬೇಕಾಗುತ್ತೆ. ಪ್ರತಿ ನಿತ್ಯ 1.60 ಕೋಟಿ ಡೋಸ್ ಲಸಿಕೆ ನೀಡಿದರೇ, ಭಾರತೀಯರೆಲ್ಲರಿಗೂ ಲಸಿಕೆ ನೀಡಲು 117 ದಿನ ಬೇಕಾಗುತ್ತೆ. 117 ದಿನವನ್ನ ತಿಂಗಳುಗಳ ಲೆಕ್ಕದಲ್ಲಿ ಹೇಳುವುದಾದರೇ, 3.9 ತಿಂಗಳು ಬೇಕಾಗುತ್ತೆ.
ಈಗ ಕೊಡುತ್ತಿರುವ ವೇಗದಲ್ಲಿ ಹೋದರೆ? | |||
ಪ್ರತಿ ದಿನ ಎಷ್ಟು ಲಕ್ಷ ಜನರಿಗೆ ಲಸಿಕೆ | ಎಷ್ಟು ದಿನ ಬೇಕು | ತಿಂಗಳು | ವರ್ಷ |
ಈಗ 16 ಲಕ್ಷ ಜನರಿಗೆ ಲಸಿಕೆ | 1,169 ದಿನ | 39 | 3.2 |
20 ಲಕ್ಷ ಲಸಿಕೆ | 935 ದಿನ | 31 | 2.6 |
40 ಲಕ್ಷ ಲಸಿಕೆ | 468 ದಿನ | 16 | 1.3 |
60ಲಕ್ಷ ಲಸಿಕೆ | 312ದಿನ | 10 | 0.9 |
80 ಲಕ್ಷ ಲಸಿಕೆ | 234 ದಿನ | 8 | 0.6 |
1 ಕೋಟಿ ಡೋಸ್ ಲಸಿಕೆ | 187 | 6 | 0.5 |
1.20ಕೋಟಿ ಡೋಸ್ ಲಸಿಕೆ | 156 | 5 | 0.4 |
1.40 ಕೋಟಿ ಲಸಿಕೆ | 134 | 4.5 | 0.4 |
1.60 ಕೋಟಿ ಲಸಿಕೆ | 117 | 3.9 | 0.3 |
ಲಸಿಕೆ ಉತ್ಪಾದನೆ ಜಾಸ್ತಿ ಮಾಡುವುದು ಹೇಗೆ? ಭಾರತದಲ್ಲಿ ಲಸಿಕೆಯ ಕೊರತೆಯಿಂದ ಈ ಸಮಸ್ಯೆ ಎದುರಾಗಿದೆ. ಈ ಸಮಸ್ಯೆಗೆ ಪರಿಹಾರ ಅಂದರೇ, ಕೊರೊನಾ ಲಸಿಕೆಯ ಕಡ್ಡಾಯ ಲೈಸೆನ್ಸ್ ಅನ್ನು ಲಸಿಕೆ ಉತ್ಪಾದಿಸುವ ಸಾಮರ್ಥ್ಯ, ಅನುಭವ, ಮೂಲಸೌಕರ್ಯ ಹೊಂದಿರುವ ಕಂಪನಿಗಳಿಗೆ ನೀಡಬೇಕು. ಕೊರೊನಾ ಲಸಿಕೆಯ ಕಡ್ಡಾಯ ಲೈಸೆನ್ಸ್ ನೀಡಿಕೆಯನ್ನು ಏಕೆ ಪರಿಗಣಿಸಬಾರದು ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಕೇಳಿದೆ. ದೇಶದಲ್ಲಿ ಸದ್ಯ ಸೆರಮ್ ಇನ್ಸ್ ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಕಂಪನಿಗಳು ಮಾತ್ರ ಲಸಿಕೆ ಉತ್ಪಾದಿಸುತ್ತಿವೆ. ಇವುಗಳ ಜೊತೆಗೆ ಇನ್ನೂ ಯಾವ್ಯಾವ ಕಂಪನಿಗಳಿಗೆ ಲಸಿಕೆ ಉತ್ಪಾದಿಸುವ ಸಾಮರ್ಥ್ಯ, ಅನುಭವ, ಮೂಲಸೌಕರ್ಯ ಇದೆ ಎನ್ನುವುದನ್ನು ಈಗ ನಿಮ್ಮ ಮುಂದೆ ಇಡುತ್ತೇವೆ.
ಗ್ರಾಫಿಕ್ಸ್–ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಇರುವ ಕಂಪನಿಗಳು 1-ಭಾರತ್ ಬಯೋಟೆಕ್, ಹೈದರಾಬಾದ್ 2-ಬಯೋಲಾಜಿಕಲ್ ಇ, ಹೈದರಾಬಾದ್ 3-ಬಯೋಮೆಡ್, ಗಾಜಿಯಾಬಾದ್, ಉತ್ತರ ಪ್ರದೇಶ 4-ಕ್ಯಾಡಿಲಾ ಹೆಲ್ತ್ ಕೇರ್ , ಅಹಮದಾಬಾದ್, ಗುಜರಾತ್ 5-ಕ್ಯಾಡಿಯಾ ಫಾರ್ಮಾಸೂಟಿಕಲ್ಸ್ ಲಿ. ಅಹಮದಾಬಾದ್ 6-ಚಿರೋನ್ ಬೆಹರಿಂಗ್, ಭರೂಚ್, ಗುಜರಾತ್ 7-ಡಾನೋ ವ್ಯಾಕ್ಸಿನ್ ಅಂಡ್ ಬಯೋಲಾಜಿಕಲ್ ಪ್ರೈ. ಲಿ., ಹೈದರಾಬಾದ್ 8-ಗ್ರೀನ್ ಸಿಗ್ನಲ್ ಬಯೋಫಾರ್ಮಾ ಲಿಮಿಟೆಡ್ 9-ಪನೆಸಿಯಾ, ಸೋಲನ್, ಹಿಮಾಚಲ ಪ್ರದೇಶ 10-ರಾನಬ್ಯಾಕ್ಸಿ ಲ್ಯಾಬ್, ಹೊಸಕೋಟೆ, ಬೆಂಗಳೂರು 11-ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ, ಪುಣೆ 12-ಶಾಂತಾ ಬಯೋಟೆಕ್ನಿಕ್ಸ್ ಲಿಮಿಟೆಡ್, ಮೇದಕ್, ತೆಲಂಗಾಣ 13-ಜಿಎಸ್‌ಕೆ ಏಷ್ಯಾ ಪ್ರೈ. ಲಿ, ನಾಸಿಕ್ 14-ಸನೋಪಿ ಪ್ಯಾಸ್ಚರ್ ಇಂಡಿಯಾ ಪ್ರೈ. ಲಿ. ಮುಂಬೈ 15-ಬಿಐಬಿಸಿಓಎಲ್, ಬುಲಂದಶಹರ್, ಯುಪಿ 16-ಹಾಫ್ ಕೈನೆ ಫಾರ್ಮಾಸೂಟಿಕಲ್ಸ್, ಮುಂಬೈ 17-ಹ್ಯೂಮನ್ ಬಯೋಲಾಜಿಕಲ್ ಇನ್ಸ್ ಟಿಟ್ಯೂಟ್, ಹೈದರಾಬಾದ್ 18-ಎಚ್‌ಎಲ್‌ಎಲ್, ಬಯೋಟೆಕ್ ಲಿಮಿಟೆಡ್, ಚೆನ್ನೈ. 19-ಬಿಸಿಜಿ ವ್ಯಾಕ್ಸಿನ್ , ಚೆನ್ನೈ 20-ಸಿಆರ್.ಐ, ಕಸೂಲಿ, ಹಿಮಾಚಲ ಪ್ರದೇಶ 21-ಪ್ಯಾಸ್ಚರ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ, ನೀಲಗಿರಿ, ತಮಿಳುನಾಡು.
ಹೀಗೆ ನಮ್ಮ ದೇಶದಲ್ಲಿ 21 ಲಸಿಕಾ ಕಂಪನಿಗಳಿವೆ. ಇವುಗಳ ಪೈಕಿ ಈಗಾಗಲೇ ಐದಾರು ಕಂಪನಿಗಳು ಕೊರೊನಾ ಲಸಿಕೆಯ ಉತ್ಪಾದನೆಯಲ್ಲಿ ತೊಡಗಿವೆ. ಇನ್ನೂಳಿದ 15 ಕಂಪನಿಗಳಿಗೂ ಕೊರೊನಾ ಲಸಿಕೆಯ ಕಡ್ಡಾಯ ಲೈಸೆನ್ಸ್ ನೀಡಿದರೇ, ಕೊರೊನಾ ಲಸಿಕೆಯ ಉತ್ಪಾದನೆಯನ್ನೇ ದೇಶದಲ್ಲಿ ಹೆಚ್ಚಿಸಲು ಸಾಧ್ಯ . ಆದರೇ, ಕೇಂದ್ರ ಸರ್ಕಾರವು ಕಂಪಲ್ಸರಿ ಲೈಸೆನ್ಸ್ ನೀಡಿಕೆಯು ಕೊನೆಯ ಅಸ್ತ್ರ ಎಂದು ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಹೇಳಿದೆ. ಕೇಂದ್ರ ಸರ್ಕಾರ ತನ್ನ ಈ ಹಟಮಾರಿ ಧೋರಣೆ ಬಿಟ್ಟು ತಕ್ಷಣವೇ ಕಡ್ಡಾಯ ಲೈಸೆನ್ಸ್ , ವಾಲೆಂಟರಿ ಲೈಸೆನ್ಸ್ ನೀಡುವ ತೀರ್ಮಾನ ಕೈಗೊಂಡರೇ, ವೇಗವಾಗಿ ಲಸಿಕೆ ಉತ್ಪಾದನೆ ಹೆಚ್ಚಾಗಲು ಸಾಧ್ಯ. ಜುಲೈ ತಿಂಗಳಿನಿಂದ ದೇಶದಲ್ಲಿ 13 ಕೋಟಿ ಡೋಸ್ ಲಸಿಕೆ ಉತ್ಪಾದಿಸಿರೂ, ದೇಶದ ಜನರಿಗೆ ವೇಗವಾಗಿ ಲಸಿಕೆ ನೀಡಲು ಅಂದಾಜು 13 ತಿಂಗಳ ಕಾಲಾವಕಾಶ ಬೇಕಾಗುತ್ತದೆ.
ಇದನ್ನೂ ಓದಿ:
ಭಾರತದಲ್ಲಿ ಪತ್ತೆಯಾಗಿರುವ ಕೊರೊನಾವೈರಸ್ನ ರೂಪಾಂತರಿ ವಿರುದ್ಧ ಲಸಿಕೆ ಪರಿಣಾಮಕಾರಿ : ವಿಶ್ವ ಆರೋಗ್ಯ ಸಂಸ್ಥೆ
(The details of duration of giving Corona vaccine to all Indians)
Published On - 8:27 pm, Tue, 11 May 21