ಜರ್ಮನಿಯಲ್ಲಿ ಭಾರತ್ ಶಾಂತಿ ಮೆರವಣಿಗೆ; ಭಯೋತ್ಪಾದನಾ ದಾಳಿಗೆ ಅನಿವಾಸಿ ಭಾರತೀಯರಿಂದ ಖಂಡನೆ
ಐಕಮತ್ಯ ಮತ್ತು ಸಹಾನುಭೂತಿಯ ಬ್ಯಾನರ್ ಅಡಿಯಲ್ಲಿ ಆಯೋಜಿಸಲಾದ ಶಾಂತಿಯುತ ಮೆರವಣಿಗೆಯು ನ್ಯಾಯಕ್ಕಾಗಿ ಕರೆ, ಭಯೋತ್ಪಾದಕ ದಾಳಿಯನ್ನು ತಿರಸ್ಕರಿಸುವುದು, ಶಾಂತಿ ಮತ್ತು ಮಾನವೀಯತೆಯನ್ನು ಆಧರಿಸಿದ ಭವಿಷ್ಯವನ್ನು ರೂಪಿಸಲು ಕರೆ ನೀಡಿತು. ಈ ಮೆರವಣಿಗೆಯಲ್ಲಿ ಜರ್ಮನ್ ಹೃದ್ರೋಗ ತಜ್ಞ ಮತ್ತು ಬುಂಡೆಸ್ಟ್ಯಾಗ್ (2025) ಸದಸ್ಯ ಡಾ. ಹ್ಯಾನ್ಸ್ ಥೀಸ್, ಎಲ್‌ಎಚ್ ಮ್ಯೂನಿಚ್‌ನ ನಗರ ಕೌನ್ಸಿಲರ್ ಮತ್ತು ಅಪ್ಪರ್ ಬವೇರಿಯಾ ಜಿಲ್ಲಾ ಮಂಡಳಿಯ ಸದಸ್ಯ ಡೆಲಿ ಬಲಿಡೆಮಾಜ್ ಸೇರಿದಂತೆ ಪ್ರಮುಖ ಗಣ್ಯರು ಭಾಗವಹಿಸಿದ್ದರು.
ಮ್ಯೂನಿಚ್ (ಮೇ 6): ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಯನ್ನು (Pahalgam Terror Attack) ಖಂಡಿಸಿ ಜರ್ಮನಿಯ ಮ್ಯೂನಿಚ್‌ನಲ್ಲಿ ಅನಿವಾಸಿ ಭಾರತೀಯರು ಶಾಂತಿ ಮೆರವಣಿಗೆ ನಡೆಸಿದ್ದಾರೆ. ಭಯೋತ್ಪಾದನೆಯನ್ನು ಬಲವಾಗಿ ಖಂಡಿಸಿ ರಸ್ತೆಯುದ್ದಕ್ಕೂ ಮೆರವಣಿಗೆಯಲ್ಲಿ ಘೋಷಣೆ ಕೂಗಿದ ಅನಿವಾಸಿಗಳು ಕಾಶ್ಮೀರ ನಮ್ಮದು ಎಂದು ಹೇಳಿದ್ದಾರೆ. ಭಾರತದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಅಮಾನವೀಯ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದವರಿಗೆ ಶ್ರದ್ಧಾಂಜಲಿ ರೂಪದಲ್ಲಿ ಈ ಮೆರವಣಿಗೆ ನಡೆಸಲಾಯಿತು. ಈ ಭಾರತ್ ಶಾಂತಿ ಮೆರವಣಿಗೆಗಾಗಿ 700ಕ್ಕೂ ಹೆಚ್ಚು ಭಾರತೀಯ ಮೂಲದ ಅನಿವಾಸಿಗಳು ಮೇ 3ರಂದು ಮ್ಯೂನಿಚ್‌ನಲ್ಲಿ ಒಟ್ಟುಗೂಡಿದ್ದರು.
ಐಕಮತ್ಯ ಮತ್ತು ಸಹಾನುಭೂತಿಯ ಬ್ಯಾನರ್ ಅಡಿಯಲ್ಲಿ ಆಯೋಜಿಸಲಾದ ಶಾಂತಿಯುತ ಮೆರವಣಿಗೆಯು ನ್ಯಾಯಕ್ಕಾಗಿ ಕರೆ, ಭಯೋತ್ಪಾದಕ ದಾಳಿಯನ್ನು ತಿರಸ್ಕರಿಸುವುದು, ಶಾಂತಿ ಮತ್ತು ಮಾನವೀಯತೆಯನ್ನು ಆಧರಿಸಿದ ಭವಿಷ್ಯವನ್ನು ರೂಪಿಸಲು ಕರೆ ನೀಡಿತು. ಈ ಮೆರವಣಿಗೆಯಲ್ಲಿ ಜರ್ಮನ್ ಹೃದ್ರೋಗ ತಜ್ಞ ಮತ್ತು ಬುಂಡೆಸ್ಟ್ಯಾಗ್ (2025) ಸದಸ್ಯ ಡಾ. ಹ್ಯಾನ್ಸ್ ಥೀಸ್, ಎಲ್‌ಎಚ್ ಮ್ಯೂನಿಚ್‌ನ ನಗರ ಕೌನ್ಸಿಲರ್ ಮತ್ತು ಅಪ್ಪರ್ ಬವೇರಿಯಾ ಜಿಲ್ಲಾ ಮಂಡಳಿಯ ಸದಸ್ಯ ಡೆಲಿ ಬಲಿಡೆಮಾಜ್ ಸೇರಿದಂತೆ ಪ್ರಮುಖ ಗಣ್ಯರು ಭಾಗವಹಿಸಿದ್ದರು. ಡಾ. ಥೀಸ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಉಗ್ರರ ದಾಳಿಗೆ ಬಲಿಯಾದವರಿಗೆ ಪ್ರಾರ್ಥನೆ ಸಲ್ಲಿಸಿದರು ಮತ್ತು ಎಲ್ಲಾ ರೀತಿಯ ಭಯೋತ್ಪಾದನೆ ಹಾಗೂ ಧಾರ್ಮಿಕ ಉಗ್ರವಾದವನ್ನು ಖಂಡಿಸಿದರು.
ಉಗ್ರರ ದಾಳಿಯ ಸಂತ್ರಸ್ತರು ಮತ್ತು ಅವರ ಕುಟುಂಬಗಳನ್ನು ಗೌರವಿಸಲು ಒಂದು ನಿಮಿಷದ ಮೌನವನ್ನು ಆಚರಿಸಲಾಯಿತು, ನಂತರ ಭಾರತದ ರಾಷ್ಟ್ರಗೀತೆಯನ್ನು ಸಾಮೂಹಿಕವಾಗಿ ಹಾಡಲಾಯಿತು. “ಇದು ಕೇವಲ ಶಾಂತಿ ಮೆರವಣಿಗೆಯಾಗಿರಲಿಲ್ಲ; ಇದು ನ್ಯಾಯಕ್ಕಾಗಿ ಸಾಮೂಹಿಕ ಕೂಗಾಗಿತ್ತು” ಎಂದು ಮ್ಯೂನಿಚ್‌ನಲ್ಲಿರುವ ಕಾರ್ಯಕ್ರಮದ ಪ್ರಮುಖ ಸಂಘಟಕರಲ್ಲಿ ಒಬ್ಬರಾದ ಶೋಭಿತ್ ಸರಿನ್ ಹೇಳಿದರು. “ಭಯೋತ್ಪಾದನೆಗೆ ನಮ್ಮ ಜಗತ್ತಿನಲ್ಲಿ ಸ್ಥಾನವಿಲ್ಲ ಎಂಬುದನ್ನು ನಾವು ಸಾರಬೇಕಿದೆ” ಎಂದು ಮ್ಯೂನಿಚ್‌ನಲ್ಲಿರುವ ಕಾರ್ಯಕ್ರಮದ ಪ್ರಮುಖ ಸಂಘಟಕರಾದ ಶಿವಾಂಗಿ ಕೌಶಿಕ್ ಮತ್ತು ದಿವ್ಯಾಭ್ ತ್ಯಾಗಿ ಹೇಳಿದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು

