ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ರದ್ದು ಎನ್ನಲಾದ ವೈರಲ್ ಆಡಿಯೊ ನಕಲಿ; ಬಿಜೆಪಿ ಶಾಸಕರಿಂದ ದೂರು ದಾಖಲು

| Updated By: guruganesh bhat

Updated on: Jul 19, 2021 | 6:56 PM

ಆಡಿಯೊ ಕ್ಲಿಪ್​ನಲ್ಲಿರುವ ಧ್ವನಿ ಮತ್ತು ಮಾಹಿತಿಯನ್ನು ನಳೀನ್ ಕುಮಾರ್ ಕಟೀಲ್ ನಿರಾಕರಿಸಿದ್ದಾರೆ. ಈ ಕುರಿತು ಟಿವಿ9ಗೆ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ನಾನು ಆ ರೀತಿ ಎಲ್ಲೂ ಮಾತನಾಡಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ರದ್ದು ಎನ್ನಲಾದ ವೈರಲ್ ಆಡಿಯೊ ನಕಲಿ; ಬಿಜೆಪಿ ಶಾಸಕರಿಂದ ದೂರು ದಾಖಲು
ನಳಿನ್ ಕುಮಾರ್ ಕಟೀಲ್
Follow us on

ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ರದ್ದು ( Nalin Kumar Kateel)ಎನ್ನಲಾದ ವೈರಲ್ ಆಡಿಯೋ  ನಕಲಿ ಆಡಿಯೋವೆಂದು ಆರೋಪಿಸಿ ತನಿಖೆ ನಡೆಸುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್‌ಗೆ ದೂರು ಸಲ್ಲಿಸಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್, ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್, ಪುತ್ತೂರು ಕ್ಷೇತ್ರದ ಶಾಸಕ ಸಂಜೀವ್ ಮಠಂದೂರು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ಒಟ್ಟಾಗಿ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ಆಡಿಯೋ ಸೃಷ್ಟಿಸಿ ವೈರಲ್ ಮಾಡಿದವರ ಬಂಧನಕ್ಕೆ ಒತ್ತಾಯಿಸಲಾಗಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ತುಣುಕು ಭಾನುವಾರ ವೈರಲ್ ಆಗಿತ್ತು. ಆದರೆ ಆಡಿಯೊದಲ್ಲಿರುವ ದನಿ ನನ್ನದಲ್ಲ. ಈ ಬಗ್ಗೆ ತನಿಖೆ ನಡೆಸುವಂತೆ ನಾನೇ ಮುಖ್ಯಮಂತ್ರಿಗೆ ದೂರು ನೀಡುತ್ತೇನೆ ಎಂದು ನಳಿನ್ ಕುಮಾರ್ ಟಿವಿ9 ಪ್ರತಿನಿಧಿಗೆ ಸ್ಪಷ್ಟನೆ ನೀಡಿದ್ದರು.

‘ಯಾರಿಗೂ ಹೇಳಬೇಡಿ ಈಶ್ವರಪ್ಪ, ಶೆಟ್ಟರ್ ಟೀಂ ತೆಗೆಯುತ್ತೇವೆ. ಪೂರ್ತಿ ಹೊಸ ಟೀಂ ಮಾಡ್ತಿದ್ದೇವೆ. ಈಗ ಸದ್ಯಕ್ಕೆ ಇನ್ನು ಯಾರಿಗೂ ಕೊಡಬೇಡಿ. ಏನೂ ತೊಂದರೆ ಇಲ್ಲ,‌ ಹೆದರಬೇಡಿ‌ ನಾವಿದ್ದೇವೆ. ಯಾರಾದ್ರೂ ಕೂಡ ನಮ್ಮ ಕೈಯಲ್ಲೇ ಇನ್ನೂ ಇರುತ್ತದೆ. ಮೂವರ ಹೆಸರಿದೆ, ಯಾವುದು ಬೇಕಾದ್ರೂ ಆಗಲು ಚಾನ್ಸ್​ ಇದೆ. ಇಲ್ಲಿನವರನ್ನು ಯಾರನ್ನೂ ಮಾಡಲ್ಲ,‌ ದೆಹಲಿಯಿಂದ್ಲೇ ಹಾಕ್ತಾರೆ’ ಎಂಬ ಮಾತುಗಳು ನಳಿನ್ ಕುಮಾರ್ ಅವರದ್ದು ಎನ್ನಲಾದ ಆಡಿಯೊ ಕ್ಲಿಪ್​ನಲ್ಲಿ ಇವೆ.

ಆಡಿಯೊ ಕ್ಲಿಪ್​ನಲ್ಲಿರುವ ಧ್ವನಿ ಮತ್ತು ಮಾಹಿತಿಯನ್ನು ನಳೀನ್ ಕುಮಾರ್ ಕಟೀಲ್ ನಿರಾಕರಿಸಿದ್ದಾರೆ. ಈ ಕುರಿತು ಟಿವಿ9ಗೆ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ನಾನು ಆ ರೀತಿ ಎಲ್ಲೂ ಮಾತನಾಡಿಲ್ಲ ಎಂದು ಹೇಳಿದ್ದಾರೆ.

ಯಾರೋ ಹುಚ್ಚರು ಈ ರೀತಿ ಮಾತನಾಡಿದ್ದಾರೆ. ಈ ಬಗ್ಗೆ ನಾನು ಮುಖ್ಯಮಂತ್ರಿಗೆ ದೂರು ನೀಡುತ್ತೇನೆ. ಈ ಆಡಿಯೋ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರುತ್ತೇನೆ ಎಂದು ಮಂಗಳೂರಿನಲ್ಲಿ ಮಂಗಳೂರಿನಲ್ಲಿ ನಳೀನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:

ಆ ಆಡಿಯೋ ನಳಿನ್ ಕುಮಾರ್ ಅವರದ್ದೇ; ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವ್ಯಂಗ್ಯ 

ನಳೀನ್ ಕುಮಾರ್​ದು ಎನ್ನಲಾದ ಆಡಿಯೋ ವೈರಲ್: ಆಪ್ತರ ಮೂಲಕ ಆಡಿಯೋ ಮಾಹಿತಿ ಪಡೆದುಕೊಂಡ ಉಸ್ತುವಾರಿ ಅರುಣ್ ಸಿಂಗ್

(BJP president Nalin Kumar alleged Viral audio Complaint filed by Dakshina Kannada BJP MLAs)