ಕಾಂಗ್ರೆಸ್ನಲ್ಲಿ ಮತ್ತೆ ಮುನ್ನೆಲೆಗೆ ಬಂದ ದಲಿತ ಸಿಎಂ ಅಸ್ತ್ರ.. ಇಂದು ದೆಹಲಿಗೆ ತೆರಳಲಿರುವ ಬಿ.ಕೆ.ಹರಿಪ್ರಸಾದ್

ದೆಹಲಿಯಲ್ಲಿ ವರಿಷ್ಠರ ಭೇಟಿಯಾಗಿ ಬಿ.ಕೆ.ಹರಿಪ್ರಸಾದ್ ರಾಜ್ಯ ರಾಜಕೀಯದ ಬಗ್ಗೆ ವಿಸ್ತೃತ ಚರ್ಚೆ ನಡೆಸುವ ಸಾಧ್ಯತೆ ಇದೆ. ಸಿಎಂ ಹೇಳಿಕೆ ವಿಚಾರವಾಗಿ ನಿನ್ನೆಯಷ್ಟೇ ಪರಮೇಶ್ವರ್, ಹರಿಪ್ರಸಾದ್, ಕೆ.ಹೆಚ್.ಮುನಿಯಪ್ಪ ಕಾಂಗ್ರೆಸ್ ಪಕ್ಷದ 3ನೇ ಗುಂಪು ಸಭೆ ನಡೆಸಿದ್ದರು.

ಕಾಂಗ್ರೆಸ್ನಲ್ಲಿ ಮತ್ತೆ ಮುನ್ನೆಲೆಗೆ ಬಂದ ದಲಿತ ಸಿಎಂ ಅಸ್ತ್ರ.. ಇಂದು ದೆಹಲಿಗೆ ತೆರಳಲಿರುವ ಬಿ.ಕೆ.ಹರಿಪ್ರಸಾದ್
ಬಿ.ಕೆ. ಹರಿಪ್ರಸಾದ್
Follow us
| Updated By: ಆಯೇಷಾ ಬಾನು

Updated on: Jun 27, 2021 | 1:00 PM

ಬೆಂಗಳೂರು: ಬಿಜೆಪಿ ಪಾಳೆಯದಲ್ಲಿ ಸಿಎಂ ನಾಯಕತ್ವ ಬದಲಾವಣೆಯ ಕೂಗು ಕಡಿಮೆಯಾಗುತ್ತಿದ್ದಂತೆ ಕಾಂಗ್ರೆಸ್ನಲ್ಲಿ ಈ ಕೂಗು ಹೇಳಿಸುತ್ತಿದೆ. ದಲಿತ ಸಿಎಂ ಅಸ್ತ್ರ ಕಾಂಗ್ರೆಸ್ನಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ದಲಿತ ಸಿಎಂ ಅಸ್ತ್ರ ಪ್ರಯೋಗಕ್ಕೆ ನಾಯಕರು ದೆಹಲಿ ಯಾತ್ರೆಗೆ ಮುಂದಾಗಿದ್ದಾರೆ. ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಇಂದು ದೆಹಲಿಗೆ ತೆರಳಲಿದ್ದಾರೆ.

ದೆಹಲಿಯಲ್ಲಿ ವರಿಷ್ಠರ ಭೇಟಿಯಾಗಿ ಬಿ.ಕೆ.ಹರಿಪ್ರಸಾದ್ ರಾಜ್ಯ ರಾಜಕೀಯದ ಬಗ್ಗೆ ವಿಸ್ತೃತ ಚರ್ಚೆ ನಡೆಸುವ ಸಾಧ್ಯತೆ ಇದೆ. ಸಿಎಂ ಹೇಳಿಕೆ ವಿಚಾರವಾಗಿ ನಿನ್ನೆಯಷ್ಟೇ ಪರಮೇಶ್ವರ್, ಹರಿಪ್ರಸಾದ್, ಕೆ.ಹೆಚ್.ಮುನಿಯಪ್ಪ ಕಾಂಗ್ರೆಸ್ ಪಕ್ಷದ 3ನೇ ಗುಂಪು ಸಭೆ ನಡೆಸಿದ್ದರು. ಈಗ ಇದೇ ಸಭೆ ಬೆನ್ನೆಲೆ ಬಿ.ಕೆ.ಹರಿಪ್ರಸಾದ್ ದೆಹಲಿ ವಿಮಾನ ಹತ್ತಲಿದ್ದಾರೆ. ಹೀಗಾಗಿ ಕಾಂಗ್ರೆಸ್ ಮೂರನೇ ಬಣದಿಂದ ಮತ್ತೆ ದಲಿತ ಸಿಎಂ ಅಸ್ತ್ರ? ಶುರುವಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಈಗಾಗಲೇ ಪರಮೇಶ್ವರ್, ಮುನಿಯಪ್ಪರಿಂದ ದಲಿತ ನಾಯಕರ ಜೊತೆಗೆ ಸಂಪರ್ಕ ಶುರು ಮಾಡಿದ್ದಾರೆ. ಅಹಿಂದಕ್ಕೆ ಟಾಂಗ್ ಕೊಡಲು ದಲಿತ ಸಮ್ಮೇಳನ ನಡೆಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಕೊವಿಡ್ ಹಿನ್ನೆಲೆಯಲ್ಲಿ ಯೋಜನೆ ಮೊಟಕುಗೊಳಿಸಿದ್ದ 3ನೇ ಬಣ. ಸಿಎಂ ಚರ್ಚೆ ಮುನ್ನೆೆಲೆಗೆ ಬಂದ ಹಿನ್ನೆಲೆ ದಲಿತಾಸ್ತ್ರ ಪ್ರಯೋಗ ಮಾಡಲಾಗಿದೆ.

ಇದನ್ನೂ ಓದಿRenukacharya on Zameer Ahmed : ಜಮೀರ್​ಗೆ ಡಿಕೆ ಶಿವಕುಮಾರ್ ಖಡಕ್​ ಎಚ್ಚರಿಕೆ ಕೊಟ್ಟಿದ್ದಾರೆ!