BKS Varma Obituary: ರಾಜಾ ರವಿವರ್ಮನ ಪೇಂಟಿಂಗ್ ನೋಡಿ, ತಮ್ಮ ಹೆಸರೇ ಬದಲಿಸಿಕೊಂಡಿದ್ದ ಬಿಕೆಎಸ್​ ವರ್ಮಾ ಜೀವನ ಕುರಿತ ವಿಶಿಷ್ಟ ಸಂಗತಿಗಳು ಇಲ್ಲಿವೆ

ಒಮ್ಮೆ ಬಿಕೆಎಸ್​ ವರ್ಮಾ ಅವರು ಮೈಸೂರಿನ ಜಗನ್ಮೋಹನ ಅರಮನೆಗೆ ತೆರಳಿದ್ದಾಗ ರಾಜಾ ರವಿ ವರ್ಮಾ ಅವರ ಚಿತ್ರಕಲೆಯನ್ನು ನೋಡಿ ಪ್ರೇರಿತರಾಗಿ ಅವರ ಹೆಸರನ್ನೇ ತನ್ನ ಹೆಸರಿನ ಮುಂದೆ ಇಟ್ಟುಕೊಂಡರಂತೆ, ಆಗಿನಿಂದ ಅವರ ಜೀವನ ದಿಶೆಯೇ ಬದಲಾಯಿತಂತೆ. 

BKS Varma Obituary: ರಾಜಾ ರವಿವರ್ಮನ ಪೇಂಟಿಂಗ್ ನೋಡಿ, ತಮ್ಮ ಹೆಸರೇ ಬದಲಿಸಿಕೊಂಡಿದ್ದ ಬಿಕೆಎಸ್​ ವರ್ಮಾ ಜೀವನ ಕುರಿತ ವಿಶಿಷ್ಟ ಸಂಗತಿಗಳು ಇಲ್ಲಿವೆ
ಚಿತ್ರ ಕಲಾವಿದ ಬಿಕೆಎಸ್​ ವರ್ಮಾ
Edited By:

Updated on: Feb 06, 2023 | 11:58 AM

ಒಮ್ಮೆ ಬಿಕೆಎಸ್​ ವರ್ಮಾ ಅವರು ಮೈಸೂರಿನ ಜಗನ್ಮೋಹನ ಅರಮನೆಗೆ ತೆರಳಿದ್ದಾಗ ರಾಜಾ ರವಿ ವರ್ಮಾ ಅವರ ಚಿತ್ರಕಲೆಯನ್ನು ನೋಡಿ ಪ್ರೇರಿತರಾಗಿ ಅವರ ಹೆಸರನ್ನೇ ತನ್ನ ಹೆಸರಿನ ಮುಂದೆ ಇಟ್ಟುಕೊಂಡರಂತೆ, ಆಗಿನಿಂದ ಅವರ ಜೀವನ ದಿಶೆಯೇ ಬದಲಾಯಿತಂತೆ.  ಖ್ಯಾತ ಚಿತ್ರ ಕಲಾವಿದ ಬಿಕೆಎಸ್​ ವರ್ಮಾ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವರ್ಷ ವಯಸ್ಸಾಗಿತ್ತು. ಅಂದಿನಿಂದ ಅವರು ನಂತರದ ದಿನಗಳಲ್ಲಿ ಬ್ಲೇಡಿನಿಂದ, ಉಗುರಿನಿಂದ, ಎಂಬಾಸಿಂಗ್, ಥ್ರೇಡ್ ಪೇಂಟಿಂಗ್ ಮಾಡಿ ಹಣಗಳಿಸಿದ್ದರು. ತಮ್ಮ ಎರಡೂ ಕೈಗಳ ಬೆರಳುಗಳನ್ನೇ ಉಪಯೋಗಿಸಿ ಸುಂದರವಾದ ಚಿತ್ತಾರಗಳನ್ನು ಮೂಡಿಸುತ್ತಿದ್ದ ಪರಿ ತುಂಬಾ ಚೆಂದ.

ಬಿಕೆಎಸ್​ ವರ್ಮಾ ಜನನ, ವಿದ್ಯಾಭ್ಯಾಸ
ತಾಯಿ, ಡಾ.ಜಯಲಕ್ಷ್ಮಮ್ಮ,ಆಯುರ್ವೇದ ಡಾಕ್ಟರ್, ತಂದೆ, ಸಂಗೀತ ಶಾಸ್ತ್ರಜ್ಞ ಪಂ.ಕೃಷ್ಣಚಾರ್. ವಿದ್ಯಾಭ್ಯಾಸ ಕೇವಲ 2ನೇ ತರಗತಿಯವರೆಗೆ ಮಾತ್ರ.
ಚಿಕ್ಕಂದಿನಲ್ಲೇ ಹಟವಾದಿಯಾಗಿ ತಾವು ಹಿಡಿದ ಕಾರ್ಯವನ್ನು ಯಶಸ್ವಿಯಾಗಿ ಪೂರೈಸುವ ಗುಣಹೊಂದಿದ್ದ ಶ್ರೀನಿವಾಸ್ ರವರು,
ಎ.ಎನ್.ಸುಬ್ಬರಾವ್ ಕಲಾಮಂದಿರದಲ್ಲಿ ತಮ್ಮ ಚಿತ್ರಕಲಾಭ್ಯಾಸ ಮಾಡಿದರು. ಕೆಲಕಾಲ ಪತ್ರಿಕೆಗಳಲ್ಲಿ ಆರ್ಟಿಸ್ಟ್ ಆಗಿ ದುಡಿದರು. ಮೈಸೂರು ಮಹಾರಾಜರ ಭಾವಚಿತ್ರವನ್ನು 2 ನಿಮಿಷಗಳಲ್ಲಿ ಬರೆದ ಅವರನ್ನು ಅರಸರು ಅಭಿನಂದಿಸಿದರು.

ಮತ್ತಷ್ಟು ಓದಿ: BKS Varma Death: ಖ್ಯಾತ ಚಿತ್ರ ಕಲಾವಿದ ಬಿಕೆಸ್​ಎಸ್ ವರ್ಮಾ ನಿಧನ

ನಿರಂತರವಾಗಿ ಈ ಕಲೆಯಲ್ಲಿ ಹೊಸಹೊಸ ಪ್ರಯೋಗಗಳನ್ನು ಮಾಡುತ್ತಾ ಅವಿರತವಾಗಿ ಶ್ರಮಿಸುತ್ತಿರುವ ವರ್ಮಾರವರು ಕನ್ನಡಿಗರು.ಬೆಂಗಳೂರಿನ ರಾಮಾಂಜನೇಯ ಗುಡ್ಡದ ಸೃಷ್ಟಿಯ ಹಿಂದೆ ಶ್ರೀನಿವಾಸ್ ರವರ ಕಲ್ಪನಾಶಕ್ತಿ ಅಡಗಿತ್ತು.
ಹೀಗೆ ಅಂತಾರಾಷ್ಟ್ರೀಯ ವಲಯದಲ್ಲಿ ಅತ್ಯಂತ ಮೇರುವ್ಯಕ್ತಿಯಾಗಿ ಬೆಳೆದಿರುವ, ಬಿ.ಕೆ.ಎಸ್.ವರ್ಮಾರವರು, ಇತ್ತೀಚೆಗೆ ಒಬ್ಬ ಸಮರ್ಥ ಕವಿಯಾಗಿಯೂ ಕಾಣಿಸಿಕೊಂಡಿದ್ದರು, ತಮ್ಮ ಚಿತ್ತಾರಗಳ ಸೃಷ್ಟಿಲೋಕದಿಂದ ಸ್ವಲ್ಪಹೊರಗೆ ಬಂದಾಗ, ಅವರು ವಿಹರಿಸುವುದು, ಒಬ್ಬ ಕವಿಯಾಗಿ.

ಬಿಕೆಎಸ್​ ವರ್ಮಾಗೆ ಸಂದ ಪ್ರಶಸ್ತಿಗಳು
ಬಿ.ಕೆ.ಎಸ್.ವರ್ಮಾ ಅವರ ಕಲಾಸೇವೆಯನ್ನು ಗುರುತಿಸಿ ಈಗಾಗಲೇ ಬೆಂಗಳೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ಯನ್ನು ನೀಡಿತ್ತು. ಪರಿಸರಪ್ರೇಮಕ್ಕೆ ಉದಾಹರಣೆಯಾದ ಅತ್ಯಂತ ಪ್ರಭಾವಿ ವರ್ಣಚಿತ್ರ, ವೃಕ್ಷಮಾಲಿನಿಗೆ, ಲಲಿತಕಲಾ ಅಕಾಡೆಮಿ ಪ್ರಶಸ್ತಿ ದೊರೆತಿದೆ.
ಅಮೆರಿಕ, ಸಿಂಗಪುರ, ಕುವೈಟ್, ಸೇರಿದಂತೆ ಹಲವಾರು ವಿದೇಶಗಳಲ್ಲಿ ತಮ್ಮ ಚಿತ್ತ್ರಕಲೆಯನ್ನು ಪ್ರದರ್ಶಿಸಿ ಭಾರತದ ಒಬ್ಬ ಹೆಮ್ಮೆಯ ಕಲಾವಿದರೆಂದು ಗುರುತಿಸಿಕೊಂಡಿದ್ದಾರೆ.

 

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 11:11 am, Mon, 6 February 23

Follow Us