ಕೊರೊನಾ ಸೋಂಕಿತರಲ್ಲಿ ಕಡಿಮೆಯಾದ ಬ್ಲ್ಯಾಕ್ ಫಂಗಸ್, ಕೊವಿಡ್‌ನಿಂದ ಗುಣಮುಖರಾದವರಲ್ಲಿ ಹೆಚ್ಚಳ

ರಾಜ್ಯದಲ್ಲಿ ಈವರೆಗೆ 2,806 ಬ್ಲ್ಯಾಕ್ ಫಂಗಸ್ ಕೇಸ್ ಪತ್ತೆಯಾಗಿದೆ. ಬ್ಲ್ಯಾಕ್ ಫಂಗಸ್‌ಗೆ ಈವರೆಗೆ ಒಟ್ಟು 206 ಜನರು ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಈವರೆಗೆ 947 ಜನರಿಗೆ ಬ್ಲ್ಯಾಕ್ ಫಂಗಸ್ ಇದ್ದು ಬೆಂಗಳೂರಿನಲ್ಲಿ ಬ್ಲ್ಯಾಕ್ ಫಂಗಸ್‌ಗೆ ಒಟ್ಟು 72 ಜನರು ಬಲಿಯಾಗಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ, ಬೌರಿಂಗ್ ಆಸ್ಪತ್ರೆಯಲ್ಲಿ 395 ಬ್ಲ್ಯಾಕ್ ಫಂಗಸ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೊನಾ ಸೋಂಕಿತರಲ್ಲಿ ಕಡಿಮೆಯಾದ ಬ್ಲ್ಯಾಕ್ ಫಂಗಸ್, ಕೊವಿಡ್‌ನಿಂದ ಗುಣಮುಖರಾದವರಲ್ಲಿ ಹೆಚ್ಚಳ
ಪ್ರಾತಿನಿಧಿಕ ಚಿತ್ರ
Edited By:

Updated on: Jun 17, 2021 | 12:50 PM

ಬೆಂಗಳೂರು: ಕೊರೊನಾದಿಂದ ಗುಣಮುಖರಾಗಿದ್ದವರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿತ್ತು. ಕೊರೊನಾದಿಂದ ಗುಣಮುಖರಾಗಿ ಮತ್ತೆ ಜೀವನ ಶುರು ಮಾಡುವಷ್ಟರಲ್ಲಿ ಬ್ಲ್ಯಾಕ್ ಫಂಗಸ್ ಅವರ ದೇಹ ಸೇರಿ ನರಳಿ ನರಳಿ ಸಾಯುವಂತೆ ಮಾಡುತ್ತಿತ್ತು. ಆದರೆ ಈಗ ಕೊರೊನಾ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ಕಡಿಮೆಯಾಗಿದೆ. ಹಾಗೂ ಕೊವಿಡ್‌ನಿಂದ ಗುಣಮುಖರಾದವರಲ್ಲಿ ಕರಿಮಾರಿ ಹೆಚ್ಚಳವಾಗಿದೆ.

ರಾಜ್ಯದಲ್ಲಿ ಈವರೆಗೆ 2,806 ಬ್ಲ್ಯಾಕ್ ಫಂಗಸ್ ಕೇಸ್ ಪತ್ತೆಯಾಗಿದೆ. ಬ್ಲ್ಯಾಕ್ ಫಂಗಸ್‌ಗೆ ಈವರೆಗೆ ಒಟ್ಟು 206 ಜನರು ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಈವರೆಗೆ 947 ಜನರಿಗೆ ಬ್ಲ್ಯಾಕ್ ಫಂಗಸ್ ಇದ್ದು ಬೆಂಗಳೂರಿನಲ್ಲಿ ಬ್ಲ್ಯಾಕ್ ಫಂಗಸ್‌ಗೆ ಒಟ್ಟು 72 ಜನರು ಬಲಿಯಾಗಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ, ಬೌರಿಂಗ್ ಆಸ್ಪತ್ರೆಯಲ್ಲಿ 395 ಬ್ಲ್ಯಾಕ್ ಫಂಗಸ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊವಿಡ್ ಇಲ್ಲದೆ ಇದ್ದಾಗ ಶೇ 50 ರಷ್ಟು ಮರಣ ಪ್ರಮಾಣ ಇತ್ತು. ಕೊವಿಡ್ ಜೊತೆಗೆ ಬ್ಲ್ಯಾಕ್ ಫಂಗಸ್ ಬಂದ್ರೆ ಶೇ 80 ರಷ್ಟು ಮರಣ ಪ್ರಮಾಣವಿದೆ. ಕೊವಿಡ್ ನಿಂದ ಬ್ಲ್ಯಾಕ್ ಫಂಗಸ್ ಬಂದ್ರೆ ಸಾವು ಜಾಸ್ತಿಯಾಗುತ್ತಿದೆ. ಸದ್ಯ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ಗೆ ನೀಡುವ ಔಷಧ ದೊರೆಯುತ್ತಿದೆ.

ಬ್ಲ್ಯಾಕ್ ಫಂಗಸ್ ಔಷಧಗಳಿಗೆ ತೆರಿಗೆ ವಿನಾಯಿತಿ
ಕೊರೊನಾ ವಿರುದ್ಧ ಹೋರಾಡಲು ಬಳಕೆಯಾಗುವ ಕೆಲವು ಔಷಧಗಳು, ಆಸ್ಪತ್ರೆ ಮತ್ತು ವೈದ್ಯಕೀಯ ಉಪಕರಣಗಳ ಮೇಲೆ ತೆರಿಗೆ ಪ್ರಮಾಣವನ್ನು ಇಳಿಕೆ ಮಾಡಲಾಗಿದೆ. ಸರಕು ಮತ್ತು ಸೇವಾ ತೆರಿಗೆ ಮಂಡಳಿ (ಜಿಎಸ್​ಟಿ ಕೌನ್ಸಿಲ್) ಜೂನ್ 12 ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ತೆರಿಗೆ ವಿನಾಯಿತಿಯನ್ನು ಕೆಲವು ಮಂತ್ರಿಗಳ ಸಲಹೆ, ಶಿಫಾರಸಿನಂತೆ ಕೈಗೊಳ್ಳಲಾಗಿದೆ ಎಮದು ಜಿಎಸ್​ಟಿ ಮಂಡಳಿ ತಿಳಿಸಿದೆ.

ಟೋಸಿಲಿಜುಮಾಬ್, ಅಂಫೋಟೆರಿಸಿನ್ ಬಿ ಇಂಜೆಕ್ಷನ್ ಮೇಲಿನ ಜಿಎಸ್‌ಟಿಯನ್ನು ಶೂನ್ಯಕ್ಕೆ ಇಳಿಕೆ ಮಾಡಲಾಗಿದೆ. ರೆಮಿಡಿಸಿವರ್ ಇಂಜೆಕ್ಷನ್ ಮೇಲಿನ ಜಿಎಸ್‌ಟಿ ಶೇ.5 ಕ್ಕೆ ಇಳಿಕೆ ಮಾಡಲಾಗಿದೆ. ಅಲ್ಲದೆ, ಅಂಬ್ಯುಲೆನ್ಸ್ ಮೇಲಿನ ಜಿಎಸ್‌ಟಿ ದರ ಕೂಡ ಇಳಿಕೆಯಾಗಿದೆ.

ಬ್ಲ್ಯಾಕ್ ಫಂಗಸ್​ಗೆ​ ಸಂಬಂಧಿಸಿದ ಔಷಧಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಕೊವಿಡ್​ಗೆ ಸಂಬಂಧಿಸಿದ 3 ವಸ್ತುಗಳಿಗೆ ಜಿಎಸ್​ಟಿ ಇಲ್ಲ ಎಂದು ದೆಹಲಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ್ದಾರೆ. ವಿತ್ತ ಸಚಿವಾಲಯದಲ್ಲಿ ಜಿಎಸ್​ಟಿ ಮಂಡಳಿ ಸಭೆ ನಡೆದ ನಂತರ ಅವರು ಮಾತನಾಡಿದ್ದಾರೆ.

ಇದನ್ನೂ ಓದಿ: ರೋಗಿಯ ಮಿದುಳಲ್ಲಿದ್ದ ಬ್ಲ್ಯಾಕ್ ಫಂಗಸ್​ ಹೊರತೆಗೆದ ವೈದ್ಯರು; ಅದರ ಅಳತೆ ನೋಡಿ ಕಂಗಾಲು