ಬೆಂಗಳೂರು: ಮೂರು ದಿನಗಳಿಂದ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗದ ತರಬೇತಿ ನೌಕರನ ಮೇಲೆ ಬಿಎಂಟಿಸಿ ಸಾರಿಗೆ ಅಧಿಕಾರಿ ಬೆದರಿಕೆ ಹಾಕಿದ್ದಾರೆ. ಅಧಿಕಾರಿ ಹಾಗೂ ನೌಕರರ ಆಡಿಯೋ ಈಗ ಫುಲ್ ವೈರಲ್ ಆಗಿದೆ.
ಮಜಾ ಮಾಡ್ಕೊಂಡು ಮನೆಯಲ್ಲಿ ಕೂರಿರ್ತೀರಾ. ಮರ್ಯಾದೆಯಿಂದ ಬಂದು ಕೆಲಸಕ್ಕೆ ಹಾಜರಾಗಬೇಕು. ನಿನ್ನೆ ಕೆಲವರಿಗೆ ಆರ್ಡರ್ ಬಂದಿದೆ. ಇವತ್ತು ನಿನಗೆ ಆರ್ಡರ್ ಕಾಪಿ ಬರುತ್ತದೆ ಎಂದು ಗದರಿದ್ದಾರೆ. ಒಮ್ಮೆ ಆರ್ಡರ್ ಕಾಪಿ ಬಂದ ನಂತರ ಕಣ್ನೀರು ಹಾಕಿದ್ರೂ ಅಷ್ಟೇ ರಕ್ತ ಸುರಿಸಿದರೂ ಅಷ್ಟೇ. ನಗುವುದಕ್ಕೆ ಇನಗೆ ಇದೇ ಕೊನೆಯ ದಿನ ಎಂದಿ ಅಧಿಕಾರಿ ಹೌಹಾರಿದ್ದಾರೆ.
ಮೈಸೂರು ನಗರಕ್ಕೆ ನಗರ ನಿಲ್ದಾಣಕ್ಕೆ 2 ಸಾರಿಗೆ ಬಸ್: ಕಿಡಿಕಾರಿದ ಖಾಸಗಿ ಬಸ್ ಚಾಲಕರು
ನಗರ ನಿಲ್ದಾಣಕ್ಕೆ 2 ಸಾರಿಗೆ ಬಸ್ ಬಂದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಿಂದ ಖಾಸಗಿ ಬಸ್ಗಳೆಲ್ಲ ಹೊರ ನಡೆದಿವೆ. ಖಾಸಗಿ ವಾಹನಗಳ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸೊದ್ದಾರೆ. ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಸರ್ಕಾರಕ್ಕೆ ತಾಕತ್ತಿದ್ದರೆ ಬಸ್ ತಂದು ಎಲ್ಲಾ ಕಡೆ ಬಿಡಲಿ. ಇಲ್ಲ ಸಂಪೂರ್ಣವಾಗಿ ನಮಗೆ ಅವಕಾಶ ನೀಡಲೆಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: Bus Strike: ಸಾರಿಗೆ ಸಿಬ್ಬಂದಿ ನೌಕರರು ಹಠಮಾರಿತನದಿಂದ ಹೊರಬರಬೇಕು: ಸಚಿವ ಲಕ್ಷ್ಮಣ ಸವದಿ
Published On - 10:24 pm, Fri, 9 April 21