ಜಿಮ್ಸ್ ಆಸ್ಪತ್ರೆಯ ಪ್ರಮುಖ ಗೇಟ್‌ಗಳಲ್ಲಿ ಬೌನ್ಸರ್‌ಗಳ ನೇಮಕ
ಗುತ್ತಿಗೆ ಆಧಾರದಲ್ಲಿ ವರ್ಷದ ಹಿಂದೆ ಬೌನ್ಸರ್ಸ್ ನೇಮಕ ಮಾಡಲಾಗಿತ್ತು. ಆದ್ರೆ ಬೌನ್ಸರ್ಗಳಿಂದಲೇ ತೊಂದರೆಯಾಗುತ್ತಿದೆ ಎಂದು ರೋಗಿಗಳ ಸಂಬಂಧಿಕರು ಆರೋಪ ಮಾಡಿದ್ದರು. ಸದ್ಯ ಈಗ ಅವಶ್ಯಕತೆ ಹೆಚ್ಚಿರುವುದರಿಂದ ಭದ್ರತೆಗಾಗಿ ಜಿಮ್ಸ್ ಕೊವಿಡ್ ಆಸ್ಪತ್ರೆ ಮುಂದೆ ಬೌನ್ಸರ್ಗಳನ್ನು ನೇಮಿಸಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಕಲಬುರಗಿ: ಜಿಲ್ಲೆಯ ಜಿಮ್ಸ್ ಆಸ್ಪತ್ರೆಯ ಪ್ರಮುಖ ಗೇಟ್‌ಗಳಲ್ಲಿ ಭದ್ರತೆಗಾಗಿ ಬೌನ್ಸರ್‌ಗಳನ್ನು ನೇಮಿಸಲಾಗಿದೆ. ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ತಡೆಯುವುದು. ಜನರ ಅನಗತ್ಯ ಓಡಾಟ ತಡೆಯಲು ಬೌನ್ಸರ್ಸ್ ನೇಮಕ ಮಾಡಲಾಗಿದೆ.
ಗುತ್ತಿಗೆ ಆಧಾರದಲ್ಲಿ ವರ್ಷದ ಹಿಂದೆ ಬೌನ್ಸರ್ಸ್ ನೇಮಕ ಮಾಡಲಾಗಿತ್ತು. ಆದ್ರೆ ಬೌನ್ಸರ್ಗಳಿಂದಲೇ ತೊಂದರೆಯಾಗುತ್ತಿದೆ ಎಂದು ರೋಗಿಗಳ ಸಂಬಂಧಿಕರು ಆರೋಪ ಮಾಡಿದ್ದರು. ಸದ್ಯ ಈಗ ಅವಶ್ಯಕತೆ ಹೆಚ್ಚಿರುವುದರಿಂದ ಭದ್ರತೆಗಾಗಿ ಜಿಮ್ಸ್ ಕೊವಿಡ್ ಆಸ್ಪತ್ರೆ ಮುಂದೆ ಬೌನ್ಸರ್ಗಳನ್ನು ನೇಮಿಸಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇನ್ನು ಈ ಬೌನ್ಸರ್ಸ್ಗಳು ವೈದ್ಯಕೀಯ ಸಿಬ್ಬಂದಿ ಮೇಲೆ ನಡೆಯಬಹುದಾದ ಹಲ್ಲೆಗಳನ್ನು ತಡೆಯುವುದು ಮತ್ತು ಜನರು ಬೇಕಾಬಿಟ್ಟಿಯಾಗಿ ಆಸ್ಪತ್ರೆಗಳಲ್ಲಿ ಓಡಾಡುವುದನ್ನು ತಡೆಯಲಿದ್ದಾರೆ.
ಕೊರೊನಾ ಎರಡನೇ ಅಲೆ ಪ್ರಭಾವ ಹೆಚ್ಚಾಗಿರುವುದರಿಂದ ಕೊರೊನಾ ತಡೆಯಲು ರೂಪಿಸಿರುವ ಕಟ್ಟುನಿಟ್ಟಿನ ನಿಯಮಗಳನ್ನು ಜನರು ಸರಿಯಾಗಿ ಪಾಲಿಸುತ್ತಿಲ್ಲ. ಆಸ್ಪತ್ರೆಗಳಲ್ಲೂ ಸೋಂಕಿತರು ಬೇಕಾಬಿಟ್ಟಿಯಾಗಿ ಅಲೆಯುವುದನ್ನೂ ನೋಡಿದ್ದೇವೆ. ಹೀಗಾಗಿ ಇವುಗಳನೆಲ್ಲ ತಡೆಯಲು ಜೊತೆಗೆ ವೈದ್ಯರ ಮೇಲೆ ನಡೆಯುವ ದಾಳಿಯನ್ನು ತಡೆಯಲು ಬೌನ್ಸರ್ಸ್ ನೇಮಕ ಮಾಡಿರುವುದು ಉಪಯುಕ್ತಕರ. ಬೌನ್ಸರ್ಸ್ ನೋಡಿ ಜನ ಭಯಪಡ್ತಾರೆ. ಆಗ ಸರಿಯಾದ ನಿಯಮಗಳ ಪಾಲನೆಯಾಗುತ್ತೆ ಎಂದು ಸಾರ್ವಜನಿಕರೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಐಸಿಯು ಸೇರಿ 350 ಆಕ್ಸಿಜನ್ ಬೆಡ್ ಭರ್ತಿ: ಜಿಲ್ಲಾಧಿಕಾರಿ ಸುಂದರೇಶ್ ಬಾಬು