AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾಸಗಿ ಆಸ್ಪತ್ರೆಗಳ ಬೆಡ್ ಸ್ಟೇಟಸ್ ನೋಡಲು ‘ಸರ್ಚ್ ಮೈ ಬೆಡ್ ಪೋರ್ಟಲ್’ ಬಿಡುಗಡೆ

ಖಾಸಗಿ ಆಸ್ಪತ್ರೆ ಒಕ್ಕೂಟದ ಫನಾ ವತಿಯಿಂದ ಇಂದಿನಿಂದ ‘ಸರ್ಚ್ ಮೈ ಬೆಡ್ ಪೋರ್ಟಲ್’ ಕಾಱರಂಭಗೊಳ್ಳಲಿದೆ. ಬೆಳಗ್ಗೆ 11ಕ್ಕೆ ಸಚಿವ ಸುಧಾಕರ್ರಿಂದ ಪೋರ್ಟಲ್ಗೆ ಚಾಲನೆ ಸಿಕಿದ್ದು ಫನಾ ಅಧ್ಯಕ್ಷ ಡಾ.ಪ್ರಸನ್ನ, ಖಾಸಗಿ ಆಸ್ಪತ್ರೆ ಮಾಲೀಕರು ಭಾಗಿಯಾಗಿದ್ದಾರೆ. ಎಲ್ಲ ಖಾಸಗಿ ಆಸ್ಪತ್ರೆಗಳ ಬೆಡ್ ಸ್ಟೇಟಸ್ ಪೋರ್ಟಲ್​ನಲ್ಲಿ ಲಭ್ಯವಾಗಲಿದೆ.

ಖಾಸಗಿ ಆಸ್ಪತ್ರೆಗಳ ಬೆಡ್ ಸ್ಟೇಟಸ್ ನೋಡಲು ‘ಸರ್ಚ್ ಮೈ ಬೆಡ್ ಪೋರ್ಟಲ್’ ಬಿಡುಗಡೆ
ಪ್ರಾತಿನಿಧಿಕ ಚಿತ್ರ
Follow us
ಆಯೇಷಾ ಬಾನು
|

Updated on:May 09, 2021 | 1:00 PM

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೆಡ್ ಸಮಸ್ಯೆ ಎದುರಾಗಿದ್ದು ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದೆ ಸೋಂಕಿತರು ಬಂದ ವಾಹನದಲ್ಲೇ ನರಳುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೇ ನಗರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕಿಂಗ್ ದಂಧೆ ಕೂಡ ಬಯಲಾಗಿತ್ತು. ಸದ್ಯ ಖಾಸಗಿ ಆಸ್ಪತ್ರೆಗಳ ಬೆಡ್ ಬಗ್ಗೆ ಮಾಹಿತಿಗೆ ಪೋರ್ಟಲ್ ಬಿಡುಗಡೆ ಮಾಡಲಾಗುತ್ತಿದೆ.

ಖಾಸಗಿ ಆಸ್ಪತ್ರೆ ಒಕ್ಕೂಟದ ಫನಾ ವತಿಯಿಂದ ಇಂದಿನಿಂದ ‘ಸರ್ಚ್ ಮೈ ಬೆಡ್ ಪೋರ್ಟಲ್’ ಕಾಱರಂಭಗೊಳ್ಳಲಿದೆ. ಬೆಳಗ್ಗೆ 11ಕ್ಕೆ ಸಚಿವ ಸುಧಾಕರ್​ ಅವರಿಂದ ಪೋರ್ಟಲ್​ಗೆ ಚಾಲನೆ ಸಿಕಿದ್ದು ಫನಾ ಅಧ್ಯಕ್ಷ ಡಾ.ಪ್ರಸನ್ನ, ಖಾಸಗಿ ಆಸ್ಪತ್ರೆ ಮಾಲೀಕರು ಭಾಗಿಯಾಗಿದ್ದಾರೆ. ಎಲ್ಲ ಖಾಸಗಿ ಆಸ್ಪತ್ರೆಗಳ ಬೆಡ್ ಸ್ಟೇಟಸ್ ಪೋರ್ಟಲ್​ನಲ್ಲಿ ಲಭ್ಯವಾಗಲಿದೆ.

ಇನ್ನು ಈ ಪೋರ್ಟಲ್ ಮೂಲಕ ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಬಗ್ಗೆ ಪಕ್ಕಾ ಮಾಹಿತಿ ಸಿಗಲಿದೆ. ಬೆಡ್, ಐಸಿಯು, ವೆಂಟಿಲೇಟರ್ ಬೆಡ್ ಖಾಲಿ ಬಗ್ಗೆ ಮಾಹಿತಿ ಸಿಗಲಿದೆ. ಸೋಂಕಿತರು ಕುಳಿತಲ್ಲೇ ಬೆರಳಿನ ತುದಿಯಲ್ಲೇ ಪಿನ್ ಟು ಪಿನ್ ಮಾಹಿತಿ ಪಡೆಯಬಹುದು.

ಜೆಜೆ ನಗರದಲ್ಲಿ 30 ಆಕ್ಸಿಜನ್ ಬೆಡ್ ಬಿಬಿಎಂಪಿ ವ್ಯಾಪ್ತಿಯ ಜಗಜೀವನ್ ರಾಂನಗರದಲ್ಲಿ 30 ಹಾಸಿಗೆ ಸಾಮರ್ಥ್ಯದ ಹೆರಿಗೆ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ. 14 ಕೊವಿಡ್ ಆರೈಕೆ ಕೇಂದ್ರಗಳು ಹಾಗೂ 12 ಹೆರಿಗೆ ಆಸ್ಪತ್ರೆಗಳಲ್ಲಿರುವ ಹಾಸಿಗೆಗಳನ್ನು ಆಕ್ಸಿಜನ್ ಪೂರೈಕೆಯ ಬೆಡ್​ಗಳಾಗಿ ಪರಿವರ್ತಿಸಲಾಗುತ್ತಿದೆ.

ಇದನ್ನೂ ಓದಿ: ಮೈಸೂರು: ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಆಟೋದಲ್ಲೇ ಪ್ರಾಣ ಬಿಟ್ಟ ನಾನ್ ಕೊವಿಡ್ ವ್ಯಕ್ತಿ

Published On - 10:38 am, Sun, 9 May 21