AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಸೋಂಕಿತರಿಗೆ ಧೈರ್ಯ ತುಂಬಿದ ಬೀದರ್​ ಜಿಲ್ಲಾಸ್ಪತ್ರೆಯ ವೈದ್ಯರು

ದಿನ ಕಳೆದಂತೆ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕಿಗೆ ಜನ ಭಯಭೀತರಾಗಿದ್ದಾರೆ. ಹೀಗಿರುವಾಗ ಧೈರ್ಯವೊಂದೇ ರೋಗಕ್ಕೆ ಮದ್ದು ಎಂಬ ಕಾರಣಕ್ಕೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕು ಆಸ್ಪತ್ರೆ ವೈದ್ಯರು ರೋಗಿಗಳಿಗೆ ತಿಳುವಳಿಕೆಯ ಮಾತುಗಳನ್ನಾಡಿ ಧೈರ್ಯ ಹೇಳಿದ್ದಾರೆ.

ಕೊರೊನಾ ಸೋಂಕಿತರಿಗೆ ಧೈರ್ಯ ತುಂಬಿದ ಬೀದರ್​ ಜಿಲ್ಲಾಸ್ಪತ್ರೆಯ ವೈದ್ಯರು
ರೋಗಿಗಳಿಗೆ ಧೈರ್ಯ ತುಂಬಿದ ಬೀದರ್​ ಜಿಲ್ಲಾಸ್ಪತ್ರೆಯ ವೈದ್ಯರು
shruti hegde
|

Updated on: May 09, 2021 | 10:14 AM

Share

ಬೀದರ್: ದಿನ ಕಳೆದಂತೆ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕಿಗೆ ಜನ ಭಯಭೀತರಾಗಿದ್ದಾರೆ. ಹೀಗಿರುವಾಗ ಧೈರ್ಯವೊಂದೇ ರೋಗಕ್ಕೆ ಮದ್ದು ಎಂಬ ಕಾರಣಕ್ಕೆ ಜಿಲ್ಲೆಯ ಬಸವಕಲ್ಯಾಣ ತಾಲೂಕು ಆಸ್ಪತ್ರೆ ವೈದ್ಯರು ರೋಗಿಗಳಿಗೆ ತಿಳುವಳಿಕೆಯ ಮಾತುಗಳನ್ನಾಡಿ ಧೈರ್ಯ ಹೇಳಿದ್ದಾರೆ. ಇದರಿಂದ ಖುಷಿಗೊಂಡ ರೋಗಿಗಳು ಆಸ್ಪತ್ರೆಯ ಬೆಡ್​ ಮೇಲೆಯೇ ಕುಣಿದು ಕುಪ್ಪಳಿಸಿದ್ದಾರೆ.

ಕೊವಿಡ್​ನಿಂದ ರಾಜ್ಯದೆಲ್ಲೆಡೆ ಉಂಟಾದ ಪರಿಸ್ಥಿತಿ ನೋಡಿ ಕೊವಿಡ್ ಪಾಸಿಟಿವ್​ ವರದಿ ಕೇಳಿದಾಕ್ಷಣ ಹೆದರುವ ಸ್ಥಿತಿ ಎದುರಾಗಿದೆ. ಕೊರೊನಾ ಸೋಂಕು ದೃಢ ಪಟ್ಟಿದ್ದೆ ಜನರೆಲ್ಲಾ ಭಯಗೊಳ್ಳುತ್ತಿದ್ದಾರೆ. ಹೀಗಿರುವಾಗ ಅವರಿಗೆ ಧೈರ್ಯ ತುಂಬಿ ಸಂತೈಸಿ ಹೆಗಲು ಕೊಡುವವರು ಬೇಕಿತ್ತು. ಇದೇ ಸಮಯದಲ್ಲಿ ಜಿಲ್ಲಾ ಆಸ್ಪತ್ರೆಯ ವೈದ್ಯರು ರೋಗಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿರುವುದು ರೋಗಿಗಳಿಗೆ ಆತ್ಮಸ್ಥೈರ್ಯ ಮೂಡಿದೆ. ಇದರಿಂದ ಸೋಂಕಿನಿಂದ ಹೋರಾಡಬಹುದು ಎಂಬ ಧೈರ್ಯ ರೋಗಿಗಳಿಗೆ ಬಂದಿದೆ.

ನಿಮ್ಮ ಜೊತೆ ನಾವಿದ್ದೇವೆ, ಯಾವುದಕ್ಕೂ ಹೆದರದಿರಿ ಎಂದು ವೈದ್ಯರು ಹೇಳಿದ ಮಾತುಗಳನ್ನು ಕೇಳಿದ ರೋಗಿಗಳು ಖುಷಿಯಿಂದ ಆಸ್ಪತ್ರೆಯ ಬೆಡ್​ ಮೇಲೆಯೇ ಕುಣಿದಿದ್ದಾರೆ. ಇದನ್ನು ಗಮನಿಸಿದ ವೈದ್ಯರು, ರೋಗಿಗಳಿಗೆ ಚಿಕಿತ್ಸೆಯ ಜೊತೆಗೆ ಧೈರ್ಯವೇ ಮದ್ದು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬೀದರ್: ಬ್ರಿಮ್ಸ್ ಅವ್ಯವಸ್ಥೆ ಕಂಡು ಸಚಿವ ಡಾ.ಕೆ.ಸುಧಾಕರ್ ಕೆಂಡಾಮಂಡಲ

Corona Curfew ಸರ್ಕಾರದ ಆದೇಶಕ್ಕೆ ತಲೆ ಕೆಡಿಸಿಕೊಳ್ಳದ ಬೀದರ್ ಜಿಲ್ಲಾಡಳಿತ.. ಕಲಬುರಗಿಯಲ್ಲಿ ಬೇಕಾಬಿಟ್ಟಿ ತಿರುಗಿದವರಿಗೆ ಲಾಠಿ ಏಟು