ಮೇಡಂಗೆ ಹೋಂ ವರ್ಕ್ ತೋರಿಸಲು 8 ವರ್ಷದ ಬಾಲಕ 35 ಕಿ.ಮೀ. ಪ್ರಯಾಣಿಸಿದ!

ಧಾರವಾಡ: ಮೇಡಂ ನೀಡಿದ ಹೋಂ ವರ್ಕ್ ತೋರಿಸಲು 8 ವರ್ಷದ ಬಾಲಕನೊಬ್ಬ 35 ಕಿ.ಮೀ. ಪ್ರಯಾಣ ಮಾಡಿದ ಅಚ್ಚರಿಯ ಸಂಗತಿ ಜಿಲ್ಲೆಯ ಕುಂದಗೋಳ ತಾಲೂಕಿನ ಯರಿಬೂದಿಹಾಳದಲ್ಲಿ ಬೆಳಕಿಗೆ ಬಂದಿದೆ. ಯರಿಬೂದಿಹಾಳದಿಂದ ಹುಬ್ಬಳ್ಳಿಗೆ ಬರೋಬ್ಬರಿ 35 ಕಿ.ಮೀ. ಪ್ರಯಾಣಿಸಿದ 2 ನೇ ತರಗತಿ ಬಾಲಕ ಪವನ್ ಕಂಠಿ ತಮ್ಮ ಶಿಕ್ಷಕಿಗೆ ಹೋಂ ವರ್ಕ್​ ತೋರಿಸಲು ಬಂದಿದ್ದನು. ಪವನ್ ಕಂಠಿ ತಂದೆ ತಾಯಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಪವನ್​ಗೆ ಆನ್‌ಲೈನ್ ಕ್ಲಾಸ್‌ ಸೌಲಭ್ಯವಿಲ್ಲದ ಹಿನ್ನೆಲೆಯಲ್ಲಿ ಆತ ತನ್ನ ತಾಯಿ […]

ಮೇಡಂಗೆ ಹೋಂ ವರ್ಕ್ ತೋರಿಸಲು 8 ವರ್ಷದ ಬಾಲಕ 35 ಕಿ.ಮೀ. ಪ್ರಯಾಣಿಸಿದ!

Updated on: Oct 31, 2020 | 10:59 AM

ಧಾರವಾಡ: ಮೇಡಂ ನೀಡಿದ ಹೋಂ ವರ್ಕ್ ತೋರಿಸಲು 8 ವರ್ಷದ ಬಾಲಕನೊಬ್ಬ 35 ಕಿ.ಮೀ. ಪ್ರಯಾಣ ಮಾಡಿದ ಅಚ್ಚರಿಯ ಸಂಗತಿ ಜಿಲ್ಲೆಯ ಕುಂದಗೋಳ ತಾಲೂಕಿನ ಯರಿಬೂದಿಹಾಳದಲ್ಲಿ ಬೆಳಕಿಗೆ ಬಂದಿದೆ. ಯರಿಬೂದಿಹಾಳದಿಂದ ಹುಬ್ಬಳ್ಳಿಗೆ ಬರೋಬ್ಬರಿ 35 ಕಿ.ಮೀ. ಪ್ರಯಾಣಿಸಿದ 2 ನೇ ತರಗತಿ ಬಾಲಕ ಪವನ್ ಕಂಠಿ ತಮ್ಮ ಶಿಕ್ಷಕಿಗೆ ಹೋಂ ವರ್ಕ್​ ತೋರಿಸಲು ಬಂದಿದ್ದನು.

ಪವನ್ ಕಂಠಿ ತಂದೆ ತಾಯಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಪವನ್​ಗೆ ಆನ್‌ಲೈನ್ ಕ್ಲಾಸ್‌ ಸೌಲಭ್ಯವಿಲ್ಲದ ಹಿನ್ನೆಲೆಯಲ್ಲಿ ಆತ ತನ್ನ ತಾಯಿ ಜೊತೆ ನೇರವಾಗಿ ಬಂದು ತನ್ನ ಟೀಚರ್ ಅನುಸೂಯಾ ಸಜ್ಜನ್​​ಗೆ ಹೋಂ ವಕ್೯ ತೋರಿಸಿದ.

ಅಂದ ಹಾಗೆ, ಪವನ್​ ಈ ಹಿಂದೆ ಹುಬ್ಬಳ್ಳಿಯ ವಸತಿ ನಿಲಯದಲ್ಲಿದ್ದು ವಿದ್ಯಾಭ್ಯಾಸ ನಡೆಸುತ್ತಿದ್ದ. ಕೊರೊನಾ ಬಂದ ಮೇಲೆ ಸದ್ಯ ಶಾಲೆ ಬಂದ್ ಇರೋ ಹಿನ್ನೆಲೆಯಲ್ಲಿ ತನ್ನ ತಂದೆ ತಾಯಿ ಜೊತೆ ವಾಸವಿದ್ದಾನೆ. ಕಳೆದ ತಿಂಗಳು ತಾಯಿ ಜೊತೆ ಶಾಲೆಗೆ ಬಂದು ತನ್ನ ಕ್ಲಾಸ್ ಟೀಚರ್ ಅನುಸೂಯಾ ಸಜ್ಜನ್​ರನ್ನು ಭೇಟಿಯಾದ ಪವನ್​ಗೆ ಅವನ ಮೇಡಂ ಮತ್ತೆ ಒಂದು ತಿಂಗಳಿಗಾಗುವಷ್ಟು ಪಾಠ ಮತ್ತು ಹೋಂ ವಕ್೯ ನೀಡಿ ಕಳುಹಿಸಿದ್ದರು.

ಸದ್ಯ ಅವೆಲ್ಲವನ್ನ ಕಂಪ್ಲೀಟ್ ಮಾಡಿರೋ ಪವನ್ ತನ್ನ ತಾಯಿ ಜೊತೆ ಹಠ ಹಿಡಿದು ಹೊಂ ವರ್ಕ್ ತೋರಿಸಲು ಹುಬ್ಬಳ್ಳಿಗೆ ಇಂದು ಬಂದಿದ್ದನು. ಬಾಲಕನ ವಿದ್ಯಾಸಕ್ತಿಗೆ ಅವನ ಶಿಕ್ಷಕಿ ಮೆಚ್ಚುಗೆ ವ್ಯಕ್ತಪಡಿಸಿದ್ದು ವಿದ್ಯಾರ್ಥಿಗೆ ನೋಟ್‌ಬುಕ್ ಮತ್ತು ಪುಸ್ತಕ ನೀಡಿ ಕಳುಹಿಸಿದರು.

Published On - 10:55 am, Sat, 31 October 20

KUSHAL V
Loading...
Unable to load recommendations.
Follow Us