‘ಲಿಂಗಾಯತ, ಕುರುಬ, ವಾಲ್ಮೀಕಿ ಸಮುದಾಯಗಳು ಮೀಸಲಾತಿಗಾಗಿ ಬೊಬ್ಬೆ ಹಾಕ್ತಿದೆ.. ನಿಮ್ಗೂ ಕೊಡೋಣಪ್ಪ ಅನ್ನೋಕೆ ಅದೇನು ಕಡ್ಲೇಕಾಯಿನಾ?’

ಇಲ್ಲಿ ಲಿಂಗಾಯತ ಸಮಾಜ, ಕುರುಬ ಸಮಾಜ ಮತ್ತು ವಾಲ್ಮೀಕಿ ಸಮಾಜಗಳು ಮೀಸಲಾತಿಗಾಗಿ ಬೊಬ್ಬೆ ಹಾಕುತ್ತಿದೆ. ನಿಮ್ಗೂ ಕೊಡೋಣಪ್ಪ ಅನ್ನೋಕೆ ಅದೇನು ಕಡ್ಲೇಕಾಯಿನಾ? ರಾಜ್ಯವನ್ನು ಆಳುವ ಜನಪ್ರತಿನಿಧಿಗಳಿಗೆ ಸವಾಲು ಹಾಕ್ತಿದ್ದೇನೆ. ನಿಮಗೆ ಅಧಿಕಾರ ಕೊಟ್ಟವಱರು? ಎಂದು ಬ್ರಹ್ಮಾನಂದ ಶ್ರೀಗಳು ಪ್ರಶ್ನಿಸಿದರು.

‘ಲಿಂಗಾಯತ, ಕುರುಬ, ವಾಲ್ಮೀಕಿ ಸಮುದಾಯಗಳು ಮೀಸಲಾತಿಗಾಗಿ ಬೊಬ್ಬೆ ಹಾಕ್ತಿದೆ.. ನಿಮ್ಗೂ ಕೊಡೋಣಪ್ಪ ಅನ್ನೋಕೆ ಅದೇನು ಕಡ್ಲೇಕಾಯಿನಾ?’
ಬ್ರಹ್ಮಾನಂದ ಸರಸ್ವತಿಶ್ರೀ

Updated on: Feb 22, 2021 | 9:33 PM

ಉತ್ತರ ಕನ್ನಡ: ಸಿಎಂ ಬಿ.ಎಸ್​.ಯಡಿಯೂರಪ್ಪ ತುಂಬಾ ಒಳ್ಳೆಯವರು. ಸಿಎಂರನ್ನ ಕನ್ಫ್ಯೂಶನ್​ ಮಾಡಿ ನಿದ್ರೆ ಮಾಡದಂತೆ ಮಾಡಿದ್ದಾರೆ. ಸಿಎಂ ಬಿಎಸ್​ವೈ ಸ್ಥಿತಿ ಕಂಡು ತುಂಬಾ ಬೇಸರವಾಗುತ್ತದೆ. ಎಲ್ಲ ಸಮುದಾಯದವರೂ ನಮಗೆ ಮೀಸಲಾತಿ ಅಂತಿದ್ದಾರೆ ಎಂದು ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿ ಜಿಲ್ಲೆಯ ಭಟ್ಕಳದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಉಜಿರೆ ಬ್ರಹ್ಮಾನಂದ ಸರಸ್ವತಿಶ್ರೀ ಹೇಳಿಕೆ ಕೊಟ್ಟಿದ್ದಾರೆ.

ಬ್ರಹ್ಮಾನಂದ ಶ್ರೀ ಯಾವುದೇ ಜಾತಿಯ ಪರವಾಗಿ ಬಂದಿಲ್ಲ. 360 ಜಾತಿಯ ಕಣ್ಣೀರೊರೆಸುವ ಉದ್ದೇಶದಿಂದ ಬಂದಿದ್ದೇನೆ. ಇದನ್ನು ಸರ್ಕಾರ ನೆನಪಿಟ್ಟುಕೊಳ್ಳಬೇಕು ಎಂದು ಬ್ರಹ್ಮಾನಂದ ಶ್ರೀಗಳು ಹೇಳಿದರು. ಆಳುತ್ತಿರುವ ಸರ್ಕಾರ ಜಾತಿಯ ಬಲವಿದೆ ಎಂದು ದುಡುಕಿದ್ರೆ ಕುರುಕ್ಷೇತ್ರದಲ್ಲಿ ಕೌರವರ ವಿರುದ್ಧ ಪಾಂಡವರು ಗೆದ್ದಿದ್ದಾರೆ, ಇದು ನೆನಪಿರಲಿ ಎಂದು ಸರ್ಕಾರಕ್ಕೆ ಸ್ವಾಮೀಜಿ ಎಚ್ಚರಿಕೆ ಕೊಟ್ಟರು.

ದುರ್ಬಲ, ಹಿಂದುಳಿದವರು ವೋಟಿನ‌ ಮೂಲಕ ಮೇಲ್ವರ್ಗದವರಿಗೆ ಲಾಠಿ ಕೊಟ್ಟು ಬಡಿಸಿಕೊಳ್ಳುತ್ತಿದ್ದೀರಿ. ಸಂವಿಧಾನ ಅಂದರೆ ಅಜ್ಜನಿಂದ ಬಂದ ಆಸ್ತಿಯಲ್ಲ. ಪಾಲು ಮಾಡಿ ಕೊಡಲು ಅಜ್ಜನಿಂದ ಬಂದ ಆಸ್ತಿಯಲ್ಲ ಎಂದು ಸ್ವಾಮೀಜಿ ಗುಡುಗಿದರು.

2-3% ಇರೋ ನಾಯಕರು ಬುದ್ಧಿವಂತಿಕೆಯಿಂದ ನಿಮ್ಮ ಬೆನ್ನು ಸವರಿ ನಿಮ್ಮ ಮೇಲೆ ಸವಾರಿ ಮಾಡ್ತಿದ್ದಾರೆ. ಇದು ತುಂಬಾ ಬೇಸರದ ವಿಷಯವಾಗಿದೆ. ವೋಟಿನ ಲಾಠಿಯನ್ನು, ಶಸ್ತ್ರವನ್ನು ಕೊಟ್ಟರೆ ಅಧಿಕಾರಕ್ಕಾಗಿ ನಾಳೆ ನಿಮ್ಮ ಮೇಲೆ ಕಾಲಿಟ್ಟು ನಿಲ್ಲಲು ಪ್ರಯತ್ನಿಸ್ತಾರೆ. ಇಲ್ಲಿ ಲಿಂಗಾಯತ ಸಮಾಜ, ಕುರುಬ ಸಮಾಜ ಮತ್ತು ವಾಲ್ಮೀಕಿ ಸಮಾಜಗಳು ಮೀಸಲಾತಿಗಾಗಿ ಬೊಬ್ಬೆ ಹಾಕುತ್ತಿದೆ. ನಿಮ್ಗೂ ಕೊಡೋಣಪ್ಪ ಅನ್ನೋಕೆ ಅದೇನು ಕಡ್ಲೇಕಾಯಿನಾ? ರಾಜ್ಯವನ್ನು ಆಳುವ ಜನಪ್ರತಿನಿಧಿಗಳಿಗೆ ಸವಾಲು ಹಾಕ್ತಿದ್ದೇನೆ. ನಿಮಗೆ ಅಧಿಕಾರ ಕೊಟ್ಟವಱರು? ಎಂದು ಬ್ರಹ್ಮಾನಂದ ಶ್ರೀಗಳು ಪ್ರಶ್ನಿಸಿದರು.

ಅಂದ ಹಾಗೆ, ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿ ಜಿಲ್ಲೆಯ ಭಟ್ಕಳದಲ್ಲಿ ಇಂದು ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಹಿಂದುಳಿದ ವರ್ಗ ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. 2A ಮೀಸಲಾತಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆಗ್ರಹಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಶಾಸಕ ಸುನಿಲ್​ ನಾಯ್ಕ್​​, ಮಾಜಿ ಶಾಸಕ ಜೆ.ಡಿ.ನಾಯ್ಕ್ ಮತ್ತು ಜಿಲ್ಲೆಯ ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾದರು.

ಇದನ್ನೂ ಓದಿ: ಯತ್ನಾಳ್ ಕಾಂಗ್ರೆಸ್‌ನ B Team ನಂತೆ ಕೆಲಸ ಮಾಡ್ತಿದ್ದಾರೆ, ಮೀಸಲಾತಿ ಹೋರಾಟಕ್ಕೆ ರಾಜಕೀಯ ಒತ್ತಡ ಸಲ್ಲ: ಮುರುಗೆಶ್ ನಿರಾಣಿ