Breaking: ಮಾಜಿ ಶಾಸಕ ಎಸ್.ಕೆ.ಬಸವರಾಜನ್ ದಂಪತಿಗೆ ಜಾಮೀನು

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 01, 2022 | 5:24 PM

ಮಾಜಿ ಶಾಸಕ ಎಸ್.ಕೆ.ಬಸವರಾಜನ್ ದಂಪತಿಗೆ ಜಾಮೀನು, ಎಸ್.ಕೆ.ಬಸವರಾಜ್, ಪತ್ನಿ ಸೌಭಾಗ್ಯರಿಗೆ ಜಾಮೀನು ಮಂಜೂರು ಮಾಡಲಾಗಿದೆ.

Breaking: ಮಾಜಿ ಶಾಸಕ ಎಸ್.ಕೆ.ಬಸವರಾಜನ್ ದಂಪತಿಗೆ ಜಾಮೀನು
SK Basavarajan couple
Follow us on

ಚಿತ್ರದುರ್ಗ: ಮಾಜಿ ಶಾಸಕ ಎಸ್.ಕೆ.ಬಸವರಾಜನ್ ದಂಪತಿಗೆ ಜಾಮೀನು, ಎಸ್.ಕೆ.ಬಸವರಾಜ್, ಪತ್ನಿ ಸೌಭಾಗ್ಯರಿಗೆ ಜಾಮೀನು ಮಂಜೂರು ಮಾಡಲಾಗಿದೆ. ಹೆಚ್ಚುವರಿ ನ್ಯಾಯಾಲಯ​ ಸೂಚನೆ ಹಿನ್ನೆಲೆ ಕೋರ್ಟ್​ಗೆ  ಬಸವರಾಜನ್ ಹಾಗೂ ಸೌಭಾಗ್ಯ ಹಾಜರಾಗಿದ್ದಾರೆ.

ಮಾಜಿ ಶಾಸಕ ಎಸ್.ಕೆ.ಬಸವರಾಜನ್ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪೊಲೀಸರಿಂದ ಹಾಸ್ಟೆಲ್​ನಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಹಾಸ್ಟೆಲ್​​ನ ಮಹಿಳಾ ವಾರ್ಡನ್, ಎಸ್.ಕೆ.ಬಸವರಾಜನ್ ವಿರುದ್ಧ ​​ಅತ್ಯಾಚಾರಕ್ಕೆ ಯತ್ನ, ಹಿಂಸೆ ನೀಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದರು. ಆ. 26 ರಂದು ಎಸ್.ಕೆ.ಬಸವರಾಜನ್ ವಿರುದ್ಧ ಸೆಕ್ಷನ್​​ 354ರಡಿ ಪ್ರಕರಣ ದಾಖಲಾಗಿದೆ. ಬಸವರಾಜನ್ ಹಾಗೂ ಪತ್ನಿ ಸೌಭಾಗ್ಯ ಬಸವರಾಜನ್ ವಿರುದ್ಧ IPC ಸೆಕ್ಷನ್​​​ 341, 342, 504, 506ರಡಿ ಪ್ರಕರಣ ದಾಖಲಾಗಿತ್ತು.

ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಕೋರ್ಟ್ ಮೊರ ಹೋಗಿದ್ದಾರೆ. ಮುಂಜಾಗೃತವಾಗಿ ಜಾಮೀನು ಪಡೆಯಲು ಮುಂದಾಗಿದ್ದು ಇದೀಗ ಕೋರ್ಟ್ ಅವರಿಗೆ  ಜಾಮೀನು ಮಂಜೂರು ಮಾಡಿದೆ. ಮಾಜಿ ಶಾಸಕ ಬಸವರಾಜನ್​ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ  ಎಸ್.ಕೆ.ಬಸವರಾಜನ್​, ಪತ್ನಿ ಸೌಭಾಗ್ಯರಿಗೆ ಚಿತ್ರದುರ್ಗ ಜಿಲ್ಲಾ 1ನೇ ಹೆಚ್ಚುವರಿ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಲಾಗಿದೆ.   ಎಸ್.ಕೆ.ಬಸವರಾಜನ್​ ವಿರುದ್ಧ ಅತ್ಯಾಚಾರ ಆರೋಪದಡಿ ದೂರು ದಾಖಲಿಸಲಾಗಿದ್ದು
ಹಾಸ್ಟೆಲ್​ ಮಹಿಳಾ ವಾರ್ಡನ್​ ದೂರು ಕೂಡ ದಾಖಲಿಸಿದ್ದಾರೆ.  ಮುರುಘಾ ಮಠದ ಆಡಳಿತಾಧಿಕಾರಿಯಾಗಿದ್ದ S.K.ಬಸವರಾಜನ್, ಸೌಭಾಗ್ಯ ದಂಪತಿ ವಿರುದ್ಧ ಕೇಸ್​ ದಾಖಲಾಗಿತ್ತು.  ಬಸವರಾಜನ್ ವಿರುದ್ಧ ಅತ್ಯಾಚಾರಕ್ಕೆ ಯತ್ನ, ಬೆದರಿಕೆ ಆರೋಪ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಟಿವಿ9ಗೆ ಪ್ರತಿಕ್ರಿಯೆ ನೀಡಿದ ಬಸವರಾಜನ್​ 

ಮಾಜಿ ಶಾಸಕ ಬಸವರಾಜನ್​ ವಿರುದ್ಧ ಅತ್ಯಾಚಾರ ಆರೋಪ ಕೇಸ್‌ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ. ಟಿವಿ9 ಜೊತೆಗೆ ಮಾತನಾಡಿದ ಅವರು ಶ್ರೀಗಳ ವಿರುದ್ಧ ಕೇಸ್ ದಾಖಲಾಗಿದ್ದಕ್ಕೆ ನನ್ನ ವಿರುದ್ಧ ಸುಳ್ಳು ಕೇಸ್‌ ಹಾಕಿದ್ದಾರೆ. ಬೆಂಗಳೂರಿನಿಂದ ಮಕ್ಕಳನ್ನು ಕರೆದುಕೊಂಡು ಬಂದಿದ್ದು ನಿಜ, ನನ್ನ ಮನೆಯಲ್ಲಿ ಕೆಲ ದಿನ ಇಟ್ಟುಕೊಂಡಿದ್ದು ನಿಜ, ನಂತರದಲ್ಲಿ ಬಳಿಕ ಮಠಕ್ಕೆ ಮಕ್ಕಳು ಹೋಗಿದ್ದು ನಿಜ ಎಂದು ಹೇಳಿದ್ದಾರೆ. ಇಲ್ಲಿ ಯಾರು, ಯಾರನ್ನೂ ಬ್ಲ್ಯಾಕ್‌ಮೇಲ್ ಮಾಡುತ್ತಿಲ್ಲ. ಕೆಲವರ ಅಹಂನಿಂದ ಸಂಸ್ಥೆ ಹಾಳಾಗುತ್ತಿದೆ ಎಂದು ಹೇಳಿದ್ದಾರೆ.

ಯಾರು ತಪ್ಪು ಮಾಡಿದ್ದಾರೆಂದು ಕೋರ್ಟ್‌ನಲ್ಲಿ ತೀರ್ಮಾನವಾಗುತ್ತೆ, ಲೈಂಗಿಕ ಆರೋಪ ಇಲ್ಲ ಅನ್ನಲಾಗಲ್ಲ, ಸುಳ್ಳು ಅನ್ನುವುದಕ್ಕೆ ಆಗಲ್ಲ, ಎಷ್ಟು ದೊಡ್ಡ ಹುದ್ದೆಯಲ್ಲಿದ್ದರೂ ಆರೋಪ ಸುಳ್ಳು ಅನ್ನಲು ಆಗಲ್ಲ,  ಅವರಿಗೆ ಅಧಿಕಾರ ಇದೆ, ಹೀಗಾಗಿ ಹುದ್ದೆಯಿಂದ ತೆಗೆದುಹಾಕಿದ್ದಾರೆ.  ಶ್ರೀಗಳನ್ನು ತೆಗೆದುಹಾಕುವುದು ಭಕ್ತರಿಗೆ ಬಿಟ್ಟಿದ್ದು. ಮಠ ಸಾರ್ವಜನಿಕರಿಗೆ ಸೇರಿದ ಆಸ್ತಿ. ಮೊದಲು ಮಕ್ಕಳು, ಆ ಮೇಲೆ ಶ್ರೀಗಳು, ಮಕ್ಕಳಿಗೆ ರಕ್ಷಣೆ ಸಿಗಲಿ, ಸಂಧಾನ ಸಭೆ ನಡೆದಿಲ್ಲ, ಸೌಹಾರ್ದ ಸಭೆ ನಡೆದಿದೆ. ಪೋಕ್ಸೋ ಕೇಸ್‌ನಲ್ಲಿ ನಾನು ರಾಜಿ ಮಾಡಿಕೊಳ್ಳಲು ಸಾಧ್ಯವಾಗಲ್ಲ. ಶ್ರೀಗಳ ಜೊತೆ ನಾನು ರಾಜಿಯಾದ್ರೆ ಪೋಕ್ಸೋ ಕೇಸ್ ರದ್ದಾಗಲ್ಲ ಎಂದು ಹೇಳಿದ್ದಾರೆ.

 

 

Published On - 4:15 pm, Thu, 1 September 22