ಕಾರವಾರ, ಡಿಸೆಂಬರ್ 04: ಕುಡಿದ ಮತ್ತಿನಲ್ಲಿ ಅಣ್ಣನಿಂದ ತಮ್ಮನ ಬರ್ಬರ ಹತ್ಯೆ (kill) ಮಾಡಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೆಬ್ಬೈಲ್ ಗ್ರಾಮದಲ್ಲಿ ನಡೆದಿದೆ. ಅಣ್ಣ ಸುಬ್ರಾಯ್ ನಾಯ್ಕ್ನಿಂದ ನಾಗೇಶ್ ನಾಯ್ಕ್(50) ಕೊಲೆ ಮಾಡಲಾಗಿದೆ. ಕೌಟುಂಬಿಕ ಕಲಹ ಸಾವಿನಲ್ಲಿ ಅಂತ್ಯವಾಗಿದೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನು ಕೊಲೆ ಮಾಡಿ ಹೆಣದ ಮುಂದೆ ಅಣ್ಣ ಬೀಡಿ ಸೇದುತ್ತಾ ಕೂತ್ತಿದ್ದರು. ಈ ಹಿಂದೆ ಅಣ್ಣನ ಮೇಲೆ ತಮ್ಮ ನಾಗೇಶ್ ನಾಯ್ಕ್ ಹಲ್ಲೆ ಮಾಡಿದ್ದ.
ಬಲೂನ್ ಊದೂವ ಭರದಲ್ಲಿ ಬಾಯಲ್ಲಿ ಹೋದ ಬಲೂನ್ನಿಂದಾಗಿ 13 ವರ್ಷದ ಪುಟ್ಟ ಪೋರ ಸಾವನ್ನಪ್ಪಿರುವಂತಹ ಘಟನೆ ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜೋಗನಕೊಪ್ಪ ಗ್ರಾಮದಲ್ಲಿ ನಡೆದಿದೆ. 13 ವರ್ಷದ ನವೀನ್ ಮೃತ ಪುಟ್ಟ ಪೋರ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಹಿಟ್ ಆ್ಯಂಡ್ ರನ್: ತಾಯಿ ಸಾವು, ಮಗುವಿನ ಸ್ಥಿತಿ ಗಂಭೀರ
ಎಂದಿನಂತೆ ತನ್ನ ಮನೆಯಲ್ಲಿ ನವೀನ್ ಆಟವಾಡುತ್ತಿದ್ದ. ಈ ವೇಳೆ ಕೈಗೆ ಬಲೂನ್ ಸಿಕ್ಕಿದೆ. ಬಲೂನ್ ದೊಡ್ಡದಾಗಿ ಊದಬೇಕು ಅಂತಾ ಹತ್ತಾರು ಬಾರಿ ಪ್ರಯತ್ನಸಿದ್ದಾನೆ. ಬಲೂನ್ ಊದುವುದು ಮತ್ತೆ ಅದರ ಗಾಳಿ ಹೊರಗೆ ಬಿಡುವುದು ಹೀಗೆ ಆಟವಾಡುತ್ತಿದ್ದ. ಮಗ ಆಟ ಆಡ್ತಾ ಇದಾನೆ ಅಂತಾ ಪಾಲಕರು ಸಹ ತಮ್ಮ ತಮ್ಮ ಕೆಲಸದಲ್ಲಿ ಬಿಜಿ ಆಗಿದ್ದರು.
ಬಲೂನ್ನಲ್ಲಿ ಜಾಸ್ತಿ ಗಾಳಿ ತುಂಬ ಬೇಕು ಅಂತಾ. ಫುಲ್ ಶಕ್ತಿ ಹಾಕಿ ಊದಿದ್ದಾನೆ. ಒಮ್ಮಿಂದ ಒಮ್ಮೆಲೆ ಏನಾಯ್ತೋ ಗೊತ್ತಿಲ್ಲ ಬಲೂನ್ ಬಾಯಿಯಲ್ಲಿ ಹೋಗಿದೆ. ಬಾಯಲ್ಲಿ ಇದ್ದಿದ್ರೆ ಏನು ಆಗ್ತಾ ಇರಲಿಲ್ಲ, ಗಾಳಿಯ ರಭಸಕ್ಕೆ ಗಂಟಲಲ್ಲಿ ಸಿಕ್ಕಿಕೊಂಡಿದೆ. ಇನ್ನೂ ಗಂಟಲಲ್ಲಿ ಬಲೂನ್ ಹೋಗಿ ಸಿಕ್ಕಿ ಕೊಳ್ಳುತ್ತಿದ್ದಂತೆ, ಕೆಮ್ಮುವುದಕ್ಕೆ ಆರಂಭ ಮಾಡಿದ ಬಾಲಕನ ಉಸಿರು ಗಟ್ಟಿಸ ತೊಡಕಿತು.
ಇದನ್ನೂ ಓದಿ: ಬೈಕ್ ಕಳ್ಳತನ ಆರೋಪಿ ಆತ್ಮಹತ್ಯೆ: ಡೆತ್ನೋಟ್ನಲ್ಲಿ ಹುಬ್ಬಳ್ಳಿ ಪೊಲೀಸರ ಹಣದ ದಾಹ ಬಯಲು
ಈತನನ್ನು ನೋಡಿದ ತಾಯಿ ಏನಾಯ್ತೂ ಅಂತಾ ನೋಡಿದಾಳೆ. ಗಂಟಲಲ್ಲಿ ಬಲೂನ್ ಸಿಕ್ಕಾಕೊಂಡಿದ್ದು ಹೊರಗೆ ತೆಗೆಯಲು ಇನ್ನಿಲ್ಲದ ಕಸರತ್ತು ಮಾಡಿದ್ದಾರೆ. ಇತ್ತ ವಿನಾಯಕ ಉಸಿರಾಡಲು ಒದ್ದಾಡ ತೋಡಗಿದಾನೆ, ಈತನ ರೋಧನೆ ನೋಡಿ ಕೂಡಲೆ ಹಳಿಯಾಳ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲೆ ಆತ ಮೃತಪಟ್ಟಿದ್ದಾನೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.